ಫೆ.27, ಪತ್ರಕರ್ತರ ರಾಜ್ಯ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಉಡುಪಿ, ಫೆ.24: ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಚುನಾವಣೆಯ, ರಾಜ್ಯ ಸಂಘದ ಉಪಾಧ್ಯಕ್ಷ (3) ಸ್ಥಾನಗಳಿಗೆ ಫೆಬ್ರವರಿ 27 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಡುಪಿ ಪತ್ರಿಕಾ ಭವನದಲ್ಲಿನ, ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ನಡೆಯಲಿದೆ. ಆದ್ದರಿಂದ ಅರ್ಹ ಎಲ್ಲಾ ಮತದಾರರು ತಮ್ಮ ಸದಸ್ಯತ್ವದ ಗುರುತಿನ ಚೀಟಿಯೊಂದಿಗೆ ಆಗಮಿಸಿ, ಮತ ಚಲಾಯಿಸುವಂತೆ ಕೋರಿದೆ. ರಾಜ್ಯ ಸಂಘದ ಉಪಾಧ್ಯಕ್ಷ (3) ಸ್ಥಾನಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಹೀಗಿವೆ: ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಂಗ್ಲೆ ಮಲ್ಲಿಕಾರ್ಜುನ, ಭವಾನಿಸಿಂಗ್ […]

ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ

ಉಡುಪಿ, ಫೆ.24: ಉಡುಪಿ ಪೊಲೀಸ್ ತರಬೇತಿ ಶಾಲೆಯ ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೇಬಲ್‌ಗಳ 13 ನೇ ತಂಡದ ನಿರ್ಗಮನ ಪಥ ಸಂಚಲನವು ಫೆಬ್ರವರಿ 25 ರಂದು ಬೆಳಗ್ಗೆ 8 ಗಂಟೆಗೆ ನಗರದ ಪೊಲೀಸ್ ಕವಾಯತ್ ಚಂದು ಮೈದಾನ ಡಿ.ಎ.ಆರ್ ಇಲ್ಲಿ ನಡೆಯಲಿದೆ. ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಮಣ್ಯ ಜೆ.ಎನ್, ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ದೇವಜ್ಯೋತಿ ರೇ, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್. ಉಪಸ್ಥಿತರಿರುವರು.

ಕಾರ್ತಿಕ್ ಆರ್ಯನ್ ಗೆ ಕ್ಲೀನ್ ಬೌಲ್ಡ್ ಆದ ಸ್ಮೃತಿ ಮಂಧನಾ? ಸ್ಟಾರ್ ಕ್ರಿಕೆಟರ್ ಗೆ ಬಾಲಿವುಡ್ ಸ್ಟಾರ್ ಮೇಲೆ ‘ಕ್ರಶ್’ ಆಗಿದೆಯಂತೆ!

  ಆಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ. ಆತ ಬಾಲಿವುಡ್ ನ ಬಹುಬೇಡಿಕೆಯ ಸ್ಟಾರ್ ನಟ. ಬಾಲಿವುಡ್ ಗೂ ಸಿನೆಮಾಗೂ ನಂಟು ಇಂದು ನಿನ್ನೆಯದಲ್ಲ. ಹಲವಾರು ಕ್ರಿಕೆಟ್ ಆಟಗಾರರು ಸಿನಿಮಾ ನಟಿಯರ ಪ್ರೇಮ ಪಾಶದಲ್ಲಿ ಸಿಲುಕಿ ವಿವಾಹ ಬಂಧನಕ್ಕೊಳಗಾದ ನಿದರ್ಶನಗಳಿವೆ. ಇದೀಗ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಕೂಡಾ ಬಾಲಿವುಡ್ ಬಾಯ್ ಕಾರ್ತಿಕ್ ಆರ್ಯನ್ ಗೆ ಫಿದಾ ಆಗಿದ್ದಾರೆ ಎಂದು ಸುದ್ದಿ. ಇತ್ತೀಚಿನ ಒಂದು ಪತ್ರಿಕಾಗೋಷ್ಠಿಯಲ್ಲಿ ಸ್ಮೃತಿ, “ನಾನು ಸೋನು […]

ಪಿ.ಎಂ.ಎಫ್.ಎಂ.ಇ ಯೋಜನೆಯ ಸಹಾಯಧನ ಹೆಚ್ಚಳ

ಉಡುಪಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ರೂಪಿಸಲಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಜಿಲ್ಲೆಯಲ್ಲಿ ಸಾಗರೋತ್ಪನ್ನವನ್ನು ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಆಯ್ಕೆ ಮಾಡಲಾಗಿದೆ. ಯೋಜನೆಯಡಿ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉನ್ನತಿಕರಣಕ್ಕಾಗಿ ಈ ಹಿಂದೆ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಶೇ.35 ರ ಸಹಾಯಧನದೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಶೇ.15 ರ ಸಹಾಯಧನ ಪ್ರಸ್ತುತ ಒದಗಿಸಲಾಗುತ್ತಿದ್ದು, ಯೋಜನೆಯಡಿ ದೊರೆಯುವ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ […]

ಆಸ್ಪತ್ರೆ ದಾಖಲಾಗುವ ಮೊದಲಿನ ರೋಗಲಕ್ಷಣರಹಿತ ರೋಗಿಗಳ ಮುನ್ನೆಚ್ಚರಿಕಾ ಕೋವಿಡ್ ಪರೀಕ್ಷೆ ಸ್ಥಗಿತ: ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ರೋಗಲಕ್ಷಣವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಮುನ್ನ, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ವಿಧಾನಗಳನ್ನು ಮಾಡುವ ಮೊದಲು ಮಾಡಬೇಕಾಗಿದ್ದ ಕೋವಿಡ್-19 ಮುನ್ನೆಚ್ಚರಿಕಾ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ಬುಧವಾರ (ಫೆ.23) ಮಾಹಿತಿ ನೀಡಿದ್ದಾರೆ. ಇದು ಹಿಂದಿನ ಕೋವಿಡ್-19 ಪಾಸಿಟಿವ್ ಆಗಿದ್ದ ರೋಗಿಗಳು, ಗುಣಮುಖರಾದವರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಾನ್- ಕೋವಿಡ್ […]