ಉಡುಪಿ: ನಾಳೆ (ಫೆ.13) ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ
ಉಡುಪಿ: ಉಡುಪಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ , ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಉಡುಪಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ‘ಬೃಹತ್ ರಕ್ತದಾನ ಶಿಬಿರ’ ನಾಳೆ (ಫೆ.13) ಬೆಳಿಗ್ಗೆ 8.30ರಿಂದ 3 ಗಂಟೆಯವರೆಗೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಗಂಟೆ ಸಭಾಕಾರ್ಯಕ್ರಮ ಜರುಗಲಿದೆ. ರಕ್ತದಾನ ಶಿಬಿರದ ವಿಶೇಷತೆ: […]
ಐಪಿಎಲ್ ಹರಾಜು: ಯಾವ ಆಟಗಾರರು ಯಾವ ತಂಡಕ್ಕೆ?: ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಶನಿವಾರ ಮಧ್ಯಾಹ್ನದವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಆಯ್ಕೆಯಾದರು? ಎಷ್ಟು ಮೊತ್ತಕ್ಕೆ ಹರಾಜಾದರು ಎಂಬ ಮಾಹಿತಿ ಈ ಕೆಳಕಂಡಂತಿದೆ. * ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – ₹15.25 ಕೋಟಿ * ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – ₹6.75 ಕೋಟಿ *ಮಿಚೆಲ್ ಮಾರ್ಷ್ – ಡೆಲ್ಲಿ ಕ್ಯಾಪಿಟಲ್ಸ್ – […]
ನಗರದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಮಾನಸಿಕ ಆರೋಗ್ಯದ ಕುರಿತು ಬೀದಿ ನಾಟಕ ಪ್ರದರ್ಶನ
ಉಡುಪಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ ಮಾನಸಿಕ ಆರೋಗ್ಯದ ಕುರಿತಾದ ‘ಮಾನಸ ‘ ಎಂಬ ಬೀದಿನಾಟಕ ಉಡುಪಿ ನಗರದ ಸಹಿತ ಜಿಲ್ಲೆಯಾದ್ಯಂತ ಪ್ರದರ್ಶನಗೊಂಡಿತು. ಶಿಲ್ಪಾ ಶೆಟ್ಟಿ ಬೀದಿ ನಾಟಕ ರಚಿಸಿ, ನಿರ್ದೇಶಿಸಿದರು. ಗೀತಂ ಗಿರೀಶ್ ಸಂಗೀತ ನೀಡಿದರು. ಸಂಚಾಲಕರಾಗಿ […]
ಬಜಾಜ್ ಗ್ರೂಪ್ ಚೇರ್ಮನ್ ರಾಹುಲ್ ಬಜಾಜ್ ಇನ್ನಿಲ್ಲ
ನವದೆಹಲಿ: ಬಜಾಜ್ ಸಮೂಹಗಳ ಚೇರ್ಮನ್ ರಾಹುಲ್ ಬಜಾಜ್ ಇಂದು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಖ್ಯಾತ ಉದ್ಯಮಿ ಮತ್ತು ಬಜಾಜ್ ಸಮೂಹಗಳ ಚೇರ್ಮನ್ ರಾಹುಲ್ ಬಜಾಜ್ ಇಂದು ಪುಣೆಯಲ್ಲಿ ನಿಧನರಾಗಿದ್ದಾರೆ. ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇದ್ದು, ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಲುವ ಭಯದಿಂದ ತಾ.ಪಂ, ಜಿ.ಪಂ ಚುನಾವಣೆ ನಡೆಸಲು ಸರ್ಕಾರ ಹಿಂದೇಟು; ಎಂ.ಡಿ.ಲಕ್ಷ್ಮೀನಾರಾಯಣ ಆರೋಪ
ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಸೋಲಲಿದೆ ಎಂಬ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದ್ದು, ಇದರಿಂದ ಬಿಜೆಪಿ ನಡುಕ ಶುರುವಾಗಿದೆ. ಹೀಗಾಗಿ ತಾ.ಪಂ, ಜಿ.ಪಂ ಮಾತ್ರವಲ್ಲ, ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಹಿಂದುಳಿದ ಘಟಕಗಳ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ದೂರಿದ್ದಾರೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ಬರುವ ವಿಧಾನಸಭೆ ಚುನಾವಣೆ ಅನ್ನು ಯಾವುದೇ ಕಾರಣಕ್ಕೂ […]