ಉಡುಪಿ: ನಾಳೆ (ಫೆ.13) ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಉಡುಪಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ , ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಉಡುಪಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ‘ಬೃಹತ್ ರಕ್ತದಾನ ಶಿಬಿರ’ ನಾಳೆ (ಫೆ.13) ಬೆಳಿಗ್ಗೆ 8.30ರಿಂದ 3 ಗಂಟೆಯವರೆಗೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಗಂಟೆ ಸಭಾಕಾರ್ಯಕ್ರಮ ಜರುಗಲಿದೆ.

ರಕ್ತದಾನ ಶಿಬಿರದ ವಿಶೇಷತೆ:

ರಕ್ತದಾನ ಮಾಡಿದ ದಾನಿಗಳಿಗೆ 2 ಲಕ್ಷ ರೂ.ವರೆಗಿನ ಅವಘಡದ ವಿಮೆ ಹಾಗೂ 1 ಲಕ್ಷ ರೂ. ವರೆಗಿನ ಮೆಡಿಕಲ್ ವಿಮೆಯು (ಸಂಕಟ ಮೋಕ್ಷ) ಸಹ ಲಭ್ಯವಿರುತ್ತದೆ.

ಶ್ರೀ ಜಯ ದುರ್ಗಾಪರಮೇಶ್ವರಿ ಯುವಕ ಮಂಡಳಿ (ರಿ) ಕನ್ನಪಾಡಿ, ಸಾರ್ವಜನಿಕ ಗಣೀಶೋತ್ಸವ ಸಮಿತಿ ಕನ್ನರ್ಪಾಡಿ- ಕಿನ್ನಿಮೂಲ್ಕಿ, ಅಯ್ಯಪ್ಪ ಭಕ್ತವೃಂದ, ಆದಿಉಡುಪಿ, ನಾರಾಯಣ ಗುರು ಭಜನಾ ಮಂದಿರ ಕಪ್ಪೆಟ್ಟು, ಬಲೈಪಾದೆ ಫ್ರೆಂಡ್ಸ್, ಯಂಗ್ ಫ್ರೆಂಡ್ಸ್ ಕುಂಜಿಬೆಟ್ಟು, ಚೆನ್ನಬಸವೇಶ್ವರ ಭಜನಾ ಮಂಡಳಿ ಲೇಬರ್ ಕಾಲನಿ ಕಿನ್ನಿಮೂಲ್ಕಿ, ದೊಡ್ಡಣ್ಣಗುಡ್ಡೆ ಫ್ರೆಂಡ್ಸ್ ಕ್ರಿಕೆಟರ್ಸ್, ನವಚೇತನ ಯುವಕ ಮಂಡಳಿ ಕೊಡಂಕೂರು, ಶ್ರೀಕೃಷ್ಣ ಕಲಾವಿದರು ಉಡುಪಿ, ವಿಷ್ಣು ದುರ್ಗಾ ಫ್ರೆಂಡ್ಸ್ ಮಾರುತಿ ನಗರ, ಮಾರ್ನಿಂಗ್ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ, ಫ್ರೆಂಡ್ಸ್ ಯುನೈಟೆಡ್ ಉದ್ಯಾವರ, ಕಿನಾರ ಫ್ರೆಂಡ್ಸ್ ಮಲ್ಪೆ, ಕೊಡಂಕೂರು ಫ್ರೆಂಡ್ಸ್, ಫ್ರೆಂಡ್ಸ್ ಇಲೆವೆನ್ ಕಟಪಾಡಿ, ಓಂಕಾರೇಶ್ವರಿ ಭಜನಾ ಮಂದಿರ ಪುತ್ತೂರು, ಎನ್.ಸಿ. ಕ್ಲಬ್ ಅಂಬಲಪಾಡಿ, ಕೊಡಂಕೂರು ಫ್ರೆಂಡ್ಸ್ ಸರ್ಕಲ್, ಸಾಟರ್ಡೆ ಪ್ಯಾಂಥರ್ಸ್ ಇಂದ್ರಾಳಿ, ಬೈಲಕೆರೆ ಫ್ರೆಂಡ್ಸ್ ಬೈಲಕೆರೆ, ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ, ಎನ್ ಎಸ್ ಯು ಐ. ಉಡುಪಿ ಜಿಲ್ಲೆ, ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಉಡುಪಿ ಸಹಭಾಗಿತ್ವದಲ್ಲಿ ಈ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕೆ. ಕೃಷ್ಣಮೂರ್ತಿ ಆಚಾರ್ಯ

ಮೊ,: 9845199597, 9986668476, 9900409004, 9886591952