ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಫ್ಯಾಶನ್ ಸೈಲೆನ್ಸರ್ ಗಳನ್ನು ಪುಡಿಗಟ್ಟಿದ ಮಣಿಪಾಲ ಪೊಲೀಸರು

ಮಣಿಪಾಲ: ಮಾರ್ಪಾಡುಗೊಳಿಸಿದ ಫ್ಯಾಶನ್ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಮಣಿಪಾಲ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ 71 ವಿವಿಧ ಫ್ಯಾಶನ್ ಸೈಲೆನ್ಸರ್ ಗಳನ್ನು ರೋಲರ್ ಅಡಿಗೆ ಹಾಕಿ ಸೋಮವಾರ ನಾಶಗೊಳಿಸಲಾಯಿತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು, ಮಣಿಪಾಲದ ಸಾರ್ವಜನಿಕರ ದೂರಿನ ಮೇರೆಗೆ ಮಣಿಪಾಲ ಪೊಲೀಸರು ಜ.10 ರಿಂದ ಜ.25 ರ ವರೆಗೆ […]
ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪದ ಬದಲು ದೊಂದಿ ಬೆಳಕು: ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಿನ್ನ ಪ್ರತಿಭಟನೆ

ಉಡುಪಿ: ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಕೆಟ್ಟು ಹೋಗಿರುವ ದಾರಿ ದೀಪಗಳನ್ನು ಶೀಘ್ರವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಉಡುಪಿ ನಾಗರಿಕರು ಭಾನುವಾರ ರಾತ್ರಿ ದೊಂದಿ ಹಾಗೂ ಚಿಮಣಿ ಬೆಳಕು ಉರಿಸುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ದಾರಿ ದೀಪಗಳನ್ನು ಸರಿಪಡಿಸುವವರೆಗೆ ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ದೊಂದಿ ಅಥವಾ ಚಿಮಣಿ ದೀಪ ಅಳವಡಿಸಿ ಪಾದಚಾರಿಗಳಿಗೆ ಬೆಳಕು […]
ಮಲ್ಪೆ: ಮಂದಿರದ ಬೀಗ ಮುರಿದು ಎರಡು ಕಾಣಿಕೆ ಡಬ್ಬಿಯ ಹಣ ಕಳವು; ಕಳ್ಳನ ಚಲನ ವಲನ ಸಿಸಿಟಿವಿಯಲ್ಲಿ ದಾಖಲು

ಮಲ್ಪೆ: ಇಲ್ಲಿನ ಬಿಲ್ಲವರ ಸಮಾಜ ಸೇವಾ ಸಂಘದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳ ನೋರ್ವ ಎರಡು ಕಾಣಿಕೆ ಡಬ್ಬಿಗಳನ್ನು ಒಡೆದು ಅದರಲ್ಲಿದ್ದ ಹಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಜ.28 ರಂದು ನಸುಕಿನ ವೇಳೆ ಮಲ್ಪೆ ಬಿಲ್ಲವರ ಸಮಾಜ ಸೇವಾ ಸಂಘದ ಬಾಗಿಲು ಮುರಿದು ಮಂದಿರದ ಒಳಪ್ರವೇಶಿಸಿದ ಕಳ್ಳನೊಬ್ಬ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನು ಕಳವು ಮಾಡಿರುವ ದೃಶ್ಯ ಮಂದಿರದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೇ ವ್ಯಕ್ತಿಯು ಕಳೆದ ವರ್ಷಾವೂ ಇಂತಹದ್ದೇ ಕೃತ್ಯ […]