ಬಂಟ್ಸ್‌ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ನೇಮಕ

ಕಾರ್ಕಳ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಂಟ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಜ.14ರಂದು ಜೋಡುರಸ್ತೆಯ ಪ್ರೈಮ್ ಮಾಲ್‌ನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೆ. ಮಂಜುನಾಥ್ ಶೆಟ್ಟಿ ಬೈಲೂರು, ನಿರ್ದೇಶಕರಾಗಿ ಸುಹಾಸ್ ಕುಮಾರ್ ಹೆಗ್ಡೆ ನಂದಳಿಕೆ, ಜಾರ್ಕಳ ಸುಧೀರ್ ಹೆಗ್ಡೆ ಬೈಲೂರು, ಸುರೇಂದ್ರ ಶೆಟ್ಟಿ ಶಿವತಿಕೆರೆ, ಪ್ರಶಾಂತ್ ಶೆಟ್ಟಿ ಕಾರ್ಕಳ, ಕೆ. ನವೀನ್ ಚಂದ್ರ ಶೆಟ್ಟಿ ಕಾಬೆಟ್ಟು, ರಮೇಶ್ ಶೆಟ್ಟಿ ರೆಂಜಾಳ, ರಾಮಲೇಖ ಎನ್. ರೈ, […]

73ನೇ ಗಣರಾಜ್ಯೋತ್ಸವ ಪರೇಡ್:ಮೈಸೂರು ವಿದ್ಯಾರ್ಥಿನಿ ಎನ್ ಸಿಸಿ ನೇತೃತ್ವ

ಮೈಸೂರು: ಬುಧವಾರದಂದು ದೆಹಲಿಯಲ್ಲಿ ನಡೆಯುವ 73ನೇ ಗಣರಾಜ್ಯೋತ್ಸವ ಆಚರಣೆಯ ಪರೇಡ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿಗೆ ಎನ್​ಸಿಸಿ ನೇತೃತ್ವ ವಹಿಸಲಿದ್ದಾರೆ. ಪ್ರಮೀಳಾ ಕುವರ್ ಅವರು ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿದ್ದು, ಇವರು ಎನ್​ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ. ಪ್ರಮೀಳಾ ಅವರು ಪ್ರತಾಪ್ ಸಿಂಗ್ ಹಾಗೂ ಪುಷ್ಪಾ ಕುವರ್ ಅವರ ಪುತ್ರಿ. ಇವರ ತಂದೆ ಪ್ರತಾಪ್ ಸಿಂಹ ಅವರು ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ‌ ಇಟ್ಟುಕೊಂಡಿದ್ದಾರೆ. ಪ್ರಮೀಳಾ ಕುವರ್ ಅವರು ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ ಸಿ ವಿದ್ಯಾರ್ಥಿನಿ. […]

ಉಡುಪಿ‌ ಉಸ್ತುವಾರಿ ಸಚಿವರಾಗಿ ಎಸ್ ಅಂಗಾರ, ದ.ಕ. ಉಸ್ತುವಾರಿ ಸಚಿವರಾಗಿ ಸುನಿಲ್ ಕುಮಾರ್ ನೇಮಕ

ಉಡುಪಿ: ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೇಮಕಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಶ್ರೀರಾಮುಲು- ಬಳ್ಳಾರಿ ಗೋವಿಂದ ಕಾರಜೋಳ- ಬೆಳಗಾವಿ ಕೆ.ಎಸ್.ಈಶ್ವರಪ್ಪ- ಚಿಕ್ಕಮಗಳೂರು […]

ಕಾರ್ಕಳ: ಬೆಳ್ಮಣ್ ನಿವಾಸಿ ನಾಪತ್ತೆ

ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಡೆದಿದೆ. ಪ್ರಶಾಂತ್ ಕಾಮತ್ (೩೫) ನಾಪತ್ತೆಯಾದವರು. ಪ್ರತಿದಿನ ಮನೆಯಿಂದ ಬೆಳ್ಮಣ್ ಪೇಟೆಗೆ ಹೋದವರು ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ ವಾಪಾಸು ಬರುತ್ತಿದ್ದರು. ಈ ಹಿಂದೆ ಕೂಡ ಮನೆಯಿಂದ ಹೋದವರು ಎರಡು, ಮೂರು ದಿನ ಬಿಟ್ಟು ಮನೆಗೆ ವಾಪಾಸು ಬರುತ್ತಿದ್ದು ಅದೇ ರೀತಿ ಜ.15 ರಂದು ವಾಪಾಸು ಬರಬಹುದೆಂದು ಭಾವಿಸಿ ನಂತರವೂ ಬಂದಿರಲಿಲ್ಲ. ಜ.15 ರಂದು ನಾಪತ್ತೆಯಾದವರು […]

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಬಜರಂಗದಳ ಸಂಪೂರ್ಣ ಬೆಂಬಲ: ಸುನೀಲ್‌ ಕೆ.ಆರ್.

ಉಡುಪಿ: ಕೇರಳದ ಕಮ್ಯುನಿಸ್ಟ್‌ ಸರಕಾರದ ಕುತಂತ್ರದಿಂದಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ಗೆ ಅವಕಾಶ ಸಿಗದಿರುವುದು ನೋವುಂಟು ಮಾಡಿದೆ. ಈ ನಿಟ್ಟಿನಲ್ಲಿ ಜನವರಿ 26 ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಮೆರವಣಿಗೆಯ ಸ್ವಾಭಿಮಾನದ ನಡಿಗೆಗೆ ಬಜರಂಗದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ಸುನೀಲ್‌ ಕೆ. ಆರ್‌ ತಿಳಿಸಿದ್ದಾರೆ. ಅಸಮಾನತೆಯ ವಿರುದ್ಧ ಹೋರಾಟ ಮಾಡಿದ, ದೇಶ ಕಂಡ ಮಹಾನ್ ಸಂತ ಪೂಜನೀಯ […]