ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಡೆದಿದೆ. ಪ್ರಶಾಂತ್ ಕಾಮತ್ (೩೫) ನಾಪತ್ತೆಯಾದವರು.
ಪ್ರತಿದಿನ ಮನೆಯಿಂದ ಬೆಳ್ಮಣ್ ಪೇಟೆಗೆ ಹೋದವರು ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ ವಾಪಾಸು ಬರುತ್ತಿದ್ದರು. ಈ ಹಿಂದೆ ಕೂಡ ಮನೆಯಿಂದ ಹೋದವರು ಎರಡು, ಮೂರು ದಿನ ಬಿಟ್ಟು ಮನೆಗೆ ವಾಪಾಸು ಬರುತ್ತಿದ್ದು ಅದೇ ರೀತಿ ಜ.15 ರಂದು ವಾಪಾಸು ಬರಬಹುದೆಂದು ಭಾವಿಸಿ ನಂತರವೂ ಬಂದಿರಲಿಲ್ಲ. ಜ.15 ರಂದು ನಾಪತ್ತೆಯಾದವರು ವಾಪಾಸು ಬಂದಿಲ್ಲ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.