ಕುಂದಾಪುರ: ಯುವತಿಗೆ ಚೂರಿಯಿಂದ ಇರಿದು ಬಳಿಕ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ; ಘಟನೆಯ ಫುಲ್ ಡಿಟೇಲ್ಸ್ ಇಲ್ಲಿದೆ..!

ಕುಂದಾಪುರ: ಭಗ್ನ ಪ್ರೇಮಿಯೊಬ್ಬ ಯುವತಿಗೆ ಚೂರಿ ಇರಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ಶಿರಿಯಾರ ರಾಮಮಂದಿರ ಬಳಿ ಇಂದು ಸಂಜೆ ನಡೆದಿದೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್(35) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇಂದು ಸಂಜೆ ಶಿರಿಯಾರ ರಾಮಮಂದಿರ ಬಳಿ ಯುವತಿಗೆ ಚೂರಿ‌ ಇರಿದಿದ್ದಾನೆ. ಬಳಿಕ ಹೆಸ್ಕೂತ್ತೂರಿನ ಹಾರ್ಯಾಡಿಯಲ್ಲಿ ಬಳಿ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ರಾಘವೇಂದ್ರ ಕುಲಾಲ್ ಕಳೆದ ಕೆಲವು ತಿಂಗಳಿನಿಂದ ಶಿರಿಯಾರದ […]

ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಕಾರ್ಕಳ: ವಿವಾಹಿತ ಮಹಿಳೆಯೊಬ್ಬರು ತನ್ನೆರಡು ಮಕ್ಕಳೊಂದಿಗೆ ಯಾರಿಗೂ ಹೇಳಿದೆ ಮನೆಬಿಟ್ಟು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಬೋರ್ಡ್ ಶಾಲೆಯ ಹತ್ತಿರ ನಡೆದಿದೆ. ಶಿರಸಿ ತಾಲೂಕಿನ ಮಳಗಿ ಗ್ರಾಮದ ತಿಪ್ಪೇಶ ಪಕ್ಕೀರಪ್ಪ ವಾಲ್ಮೀಕಿ ಅವರ ಪತ್ನಿ‌ 32 ವರ್ಷದ ರತ್ನ ತಿಪ್ಪೇಶ ಹಾಗೂ ಮಕ್ಕಳಾದ 10 ವರ್ಷದ ಕೈಲಾಶ್ ಕುಮಾರ್ ಮತ್ತು 5 ವರ್ಷದ ಮಗಳು ನಮಿತಾ ನಾಪತ್ತೆಯಾಗಿದ್ದಾರೆ. ತಪ್ಪೇಶ್ ಕುಟುಂಬ ನಂದಳಿಕೆ ಗ್ರಾಮದ ವಿಲ್ಡಾ ಬಾಯಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಡಿ. 24 […]

ಕುಂದಾಪುರ: ಯುವತಿಗೆ ಚೂರಿ ಇರಿದು ಯುವಕ ನೇಣಿಗೆ ಶರಣು

ಕುಂದಾಪುರ: ಕುಂದಾಪುರ ಸಮೀಪದ ಶಿರಿಯಾರ ರಾಮಮಂದಿರ ಬಳಿ ಯುವಕನೊಬ್ಬ ಯುವತಿಗೆ ಚೂರಿ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ. ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್(35) ಎಂಬಾತ ಯುವತಿಗೆ ಚೂರಿ ಇರಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇಂದು ಸಂಜೆ ಶಿರಿಯಾರ ರಾಮಮಂದಿರ ಬಳಿ ಯುವತಿಗೆ ಚೂರಿ‌ ಇರಿದಿದ್ದಾನೆ. ಬಳಿಕ ಹೆಸ್ಕೂತ್ತೂರಿನ ಹಾರ್ಯಾಡಿಯಲ್ಲಿ ಬಳಿ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಅವರು, ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಜಿಲ್ಲಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. 18 ತಿಂಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಅನುಕೂಲವಾಗುವರ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಪಕ್ಷ ಮತ್ತು ಸಂಘದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯಂತೆ ಅಧಿಕಾರ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿದ್ದೇನೆ […]

ಬ್ರಹ್ಮಾವರ: ಯುವಕ ಆತ್ಮಹತ್ಯೆ

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ದೇವಸ್ಥಾನಬೆಟ್ಟುವಿನ ಚಿತ್ತಾರಿ ಬಳಿ ಹಾಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಹಾವಂಜೆ ಗ್ರಾಮ ಕಂಬಳಿಬೆಟ್ಟು ನಿವಾಸಿ ಸುಧಾಕರ ಪೂಜಾರಿ ಅವರ 29 ವರ್ಷ ಪ್ರಾಯದ ಮಗ ಶರತ್‌ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಇದೇ ಖಿನ್ನತೆಯಲ್ಲಿ ನೇಣಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.