ಕುಂದಾಪುರ: ಅಕ್ರಮ ಗೋವಧೆಗೆ ಯತ್ನ; ಓರ್ವನ ಬಂಧನ
ಕುಂದಾಪುರ: ಅಕ್ರಮ ಗೋವಧೆ ಮಾಡಲು ಸಿದ್ಧತೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿರುವ ಘಟನೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ಸೋಮವಾರ ನಡೆದಿದೆ. ಗಂಗೊಳ್ಳಿ ಗ್ರಾಮದ ಸುಲ್ತಾನ್ ಮೊಹಲ್ಲಾ ನಿವಾಸಿ 41 ವರ್ಷದ ಮೊಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿ. ಈತ ಹಾಗೂ ಇನ್ನೋರ್ವ ಆರೋಪಿ ಸೇರಿಕೊಂಡು ಬೀಡಾಡಿ ದನವನ್ನು ಕಳವು ಮಾಡಿ, ಅದನ್ನು ಗುಜ್ಜಾಡಿ ಗ್ರಾಮದ ಗೇರು ಹಾಡಿಯೊಂದರಲ್ಲಿ […]