ಉಡುಪಿ: ಕಾರಿನ ಗ್ಲಾಸ್ ಒಡೆದು ಕ್ಯಾಮೆರಾ ಸಹಿತ 80 ಸಾವಿರ ಮೌಲ್ಯದ ಸೊತ್ತು ಕಳವು

ಉಡುಪಿ: ಕಾರಿನ ಗ್ಲಾಸ್ ಒಡೆದು ಕ್ಯಾಮೆರಾ, ಮೊವೈಲ್ ಚಾರ್ಜರ್, ಮೆಮೊರಿ ಕಾರ್ಡ್ ಇದ್ದ ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದಿದೆ. ತಮಿಳುನಾಡಿನ ಚೆನ್ನೈ ನಿವಾಸಿ ಗೋಕುಲಕೃಷ್ಣ ಎಸ್ ಅವರು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬಂದಿದ್ದರು. ಈ ವೇಳೆ ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಪಡೆದು ಬಂದು ನೋಡುವಾಗ ಯಾರೋ ಕಳ್ಳರು ಕಾರಿನ ಡ್ರೈವರ್ ಸೈಡ್ ನ ಗ್ಲಾಸನ್ನು […]

ಬಾರಿಕೆರೆ ಕೊರಗ ಕುಟುಂಬದ ಮೇಲೆ ಹಲ್ಲೆ ಪ್ರಕರಣ; ಪೊಲೀಸರ ವಿರುದ್ಧ ಕ್ರಮಕ್ಕೆ ಸಚಿವ ಕೋಟ ಸೂಚನೆ

ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗರ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ದಾಳಿ ಮಾಡಿದ ಪೊಲೀಸರು, ಮದುಮಗನ ಸಹಿತ ಅಮಾಯಕರ ಮೇಲೆ ಹಲ್ಲೆ ಮಾಡಿರುವುದನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ವಿನಾಕಾರಣ ದೌರ್ಜನ್ಯ ಎಸಗಿರುವ ಪೊಲೀಸರ ಮೇಲೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ವಲಯ ಐಜಿಪಿ […]

ಜ.3ರಿಂದ ಮಕ್ಕಳಿಗೆ ಕೋವಿಡ್ ಲಸಿಕೆ: ಸಚಿವ ಡಾ. ಸುಧಾಕರ್

ಹುಬ್ಬಳ್ಳಿ: 15ರಿಂದ 18 ವರ್ಷದ ಮಕ್ಕಳಿಗೆ ಜ. 3ರಿಂದ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿಯ ಸಿಬ್ಬಂದಿ ಕಡ್ಡಾಯವಾಗಿ ಎರಡೂ ಡೋಸ್ ಪಡೆದುಕೊಂಡೇ ಕಚೇರಿಗೆ ಬರಬೇಕು ಈಗಾಗಲೇ ಎಂದು ಸೂಚಿಸಲಾಗಿದೆ. ಪಡೆಯದವರಿಗೆ ಕಚೇರಿಗೆ ಪ್ರವೇಶವಿಲ್ಲ ಎಂದರು. ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳ ಸಿಬ್ಬಂದಿಗೂ ಈ ಮಾರ್ಗಸೂಚಿ ಪಾಲಿಸಲು ಸೂಚನೆ ನೀಡಲಾಗುವುದು. ಬೂಸ್ಟರ್ ಡೋಸ್ ಅನ್ನು ಜ. 10ರ ನಂತರ ನೀಡಲಾಗುವುದು. ಆರಂಭದಲ್ಲಿ […]

ಕೋಟ: ಸಮಾಜ ಕಲ್ಯಾಣ ಇಲಾಖೆ ಸಚಿವರ ಊರಲ್ಲೇ ಪೊಲೀಸರ ಅಮಾನವೀಯ ಕೃತ್ಯ

ಕೋಟ: ಕೋಟತಟ್ಟು ಗ್ರಾಮದ ಬಾರಿಕೆರೆ ಎಂಬಲ್ಲಿ ಕೊರಗ ಸಮುದಾಯದ ಮನೆಯಲ್ಲಿ ಸೋಮವಾರ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ನುಗ್ಗಿದ ಪೊಲೀಸರು ಮನೆಮಂದಿಗೆ ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ದಿಢೀರ್ ಆಗಿ ಮದುವೆ ಮನೆಗೆ ನುಗ್ಗಿದ ಕೋಟ ಪೊಲೀಸರು, ಡಿಜೆ ಹಾಗೂ ಲೈಟ್ ಆಫ್ ಮಾಡಿಸಿದ್ದಾರೆ. ಬಳಿಕ ಮದುಮಗ, ಹೆಣ್ಣುಮಕ್ಕಳೆಂದು ಲೆಕ್ಕಿಸದೇ ಲಾಠಿ ಬೀಸಿದ್ದಾರೆ ಎಂದು ಮನೆಯವರು ಆರೋಪಿದ್ದಾರೆ. ಲಾಠಿ ಚಾರ್ಜ್ ನಿಂದ ಮದುಮಗ, ಮಹಿಳೆಯರು ಸೇರಿದಂತೆ 9 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ […]

ಕೋಟ: ಕೊರಗ ಸಮುದಾಯದ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರ ದಾಳಿ; ಮಧುಮಗ, ಹೆಣ್ಣುಮಕ್ಕಳೆಂದು ಲೆಕ್ಕಿಸದೆ ಲಾಠಿ ಬೀಸಿದ ಆರೋಪ

ಕೋಟ: ಕೊರಗ ಸಮುದಾಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ನಡೆಸಿ, ಮನೆಮಂದಿಯ ಮೇಲೆ ಲಾಠಿ ಚಾರ್ಜ್ ನಡೆಸಿರುವ ಆರೋಪಕೇಳಿ ಬಂದಿದೆ. ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮನೆಯಲ್ಲಿ ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಕೋಟ ಠಾಣಾ ಪೊಲೀಸರು, ಡಿಜೆ, ಲೈಟ್ ಆಫ್ ಮಾಡಿ ಮಧುಮಗ, ಹೆಣ್ಣುಮಕ್ಕಳೆಂದು ಲೆಕ್ಕಿಸದೇ ಲಾಠಿ ಬೀಸಿದ್ದಾರೆ ಎಂದು ಮನೆಯವರು ಆರೋಪಿದ್ದಾರೆ. ಪೊಲೀಸರನ್ನು ಅಮಾನತು ಮಾಡಿ: ಆಗ್ರಹ ಕೋಟಾ ಠಾಣಾಧಿಕಾರಿ ಸಂತೋಷ್ […]