ಪಡುಬಿದ್ರಿ: ಹಾರೆ ಏಟಿನಿಂದ ಗಾಯಗೊಂಡಿದ್ದ ಮಹಿಳೆ ಮೃತ್ಯು

ಪಡುಬಿದ್ರಿ: ಹಾರೆ ಏಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾಪು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಬುಧವಾರ ನಡೆದಿದೆ. ನಡ್ಸಾಲು ಗ್ರಾಮದ ಕಂಚಿನಡ್ಕ ರಾಘವೇಂದ್ರ ಮಠದ ಬಳಿ ನಿವಾಸಿ ಸುಶೀಲ(60) ಮೃತಪಟ್ಟ ಮಹಿಳೆ. ಇವರು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದರು. ಇವರು ಪ್ರತಿದಿನ ಮನೆಯ ವಠಾರದಲ್ಲಿ ವಾಕಿಂಗ್ ಮಾಡುತ್ತಿದ್ದು, ಎಂದಿನಂತೆ 2021ರ ಜೂನ್ 30ರಂದು ಬೆಳಿಗ್ಗೆ ವಾಕಿಂಗ್ ತೆರಳಿದ್ದರು. ಅಂದು ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ಆನಂದ ಎಂಬವರ ಮನೆಯ ಅಂಗಳದಲ್ಲಿ ಹೋಗುತ್ತಿದ್ದ ಸುಶೀಲಾ ಅವರಿಗೆ ಆನಂದ […]

ಮಣಿಪಾಲ: ನಕಲಿ ದಾಖಲೆ ಸೃಷ್ಟಿಸಿ ಬಾರ್ ಮಾಲೀಕರಿಗೆ ಮೋಸ; ಮ್ಯಾನೇಜರ್ ವಿರುದ್ಧ ಕೇಸ್ ದಾಖಲು

ಮಣಿಪಾಲ: ನಕಲಿ ದಾಖಲೆ ಸೃಷ್ಟಿಸಿ ಬಾರ್ ಮಾಲೀಕರಿಗೆ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಹೆರ್ಗಾ ಗ್ರಾಮದ ಈಶ್ವರನಗರದ ನಿವಾಸಿ ಎಸ್. ಸುಧಾ ಆರ್. ನಾಯಕ್ ಅವರು ವಂಚನೆಗೆ ಒಳಗಾಗಿದ್ದಾರೆ. ಇವರ ಜಂಟಿ ಖಾತೆಯಲ್ಲಿರುವ ಮಣಿಪಾಲ ಆದರ್ಶನಗರದ ಲೇಕ್‌ ವ್ಯೂ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ ಹಾಗೂ ಲಾಡ್ಜಿಂಗ್‌ನಲ್ಲಿ 2018ರಿಂದ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಂದಾಪುರದ ಗಂಗೊಳ್ಳಿ ಬೀಚ್ ರಸ್ತೆಯ ನಿವಾಸಿ ಮೈಕಲ್ ಡಿಸೋಜಾ ವಂಚನೆ ಎಸಗಿರುವ ಆರೋಪಿ. ಈತ ಪಿರ್ಯಾದಿದಾರರ ಹೆಸರಿನಲ್ಲಿರುವ ಡೋರ್‌ ನಂ: 4/26F ಅನ್ನು […]