ಪರಿಷತ್ ಫೈಟ್: ಪಕ್ಷಗಳ ಬಲಾಬಲ; ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2, ಪಕ್ಷೇತರ 1

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಪಕ್ಷಗಳ ಬಲಾಬಲ ಈ ಕೆಳಕಂಡಂತಿದೆ: ಪಕ್ಷ ಗೆಲುವು ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 02, ಪಕ್ಷೇತರ 01. ಫಲಿತಾಂಶದ ವಿವರ: ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು * ಕೊಡಗು–ಸುಜಾ ಕುಶಾಲಪ್ಪ * ಬೆಂಗಳೂರು– ಗೋಪಿನಾಥ್ ರೆಡ್ಡಿ * ಚಿತ್ರದುರ್ಗ– ಕೆ.ಎಸ್. ನವೀನ್ * ಉತ್ತರ ಕನ್ನಡ– ಗಣಪತಿ ಉಳ್ವೇಕರ್ * ಬಳ್ಳಾರಿ– ವೈ.ಎಂ.ಸತೀಶ * ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್ […]
ಕಾಪು ಪುರಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕಾಪು: ಇದೇ ಡಿ. 27ರಂದು ನಡೆಯುವ ಕಾಪು ಪುರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಪುರಸಭಾ ವಾರ್ಡ್ ಹಾಗೂ ಅಭ್ಯರ್ಥಿಗಳ ಹೆಸರು ಈ ಕೆಳಕಂಡಂತಿದೆ: ಕೈಪುಂಜಾಲು (ಹಿಂದುಳಿದ ವರ್ಗ ಅ ಮಹಿಳೆ) – ಪೂರ್ಣಿಮಾ ಚಂದ್ರಶೇಖರ್, ಕೋತಲಕಟ್ಟೆ (ಹಿಂದುಳಿದ ವರ್ಗ ಬಿ ಮಹಿಳೆ) – ರಮಾ ವೈ. ಶೆಟ್ಟಿ , ಕರಾವಳಿ (ಹಿಂದುಳಿದ ವರ್ಗ ಬಿ) – ಕಿರಣ್ ಆಳ್ವ , […]
ತಂಗಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನೇಣಿಗೆ ಶರಣಾದ ಖಾಸಗಿ ಬಸ್ ಮಾಲೀಕ

ಸುಳ್ಯ: ತಂಗಿಗೆ ವಾಟ್ಸಾಪ್ ವಾಯ್ಸ್ ಸಂದೇಶ ಕಳುಹಿಸಿ ಅವಿನಾಶ್ ಮೋಟಾರ್ಸ್ ನ ಮಾಲೀಕ ನಾರಾಯಣ ರೈ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು (ಮಂಗಳವಾರ )ಬೆಳಕಿಗೆ ಬಂದಿದೆ. ಅವಿನಾಶ್ ರೈ ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದರು. ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45 ರ ಸುಮಾರಿಗೆ ಅವರು ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ತಂಗಿ ಇಂದು ಬೆಳಿಗ್ಗೆಯಷ್ಟೇ […]
ಚಿಕ್ಕಮಗಳೂರು: ಆರು ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ; ಮರುಮತ ಎಣಿಕೆಗೆ ಕಾಂಗ್ರೆಸ್ ಆಗ್ರಹ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನ ಜಿದ್ದಾಜಿದ್ದಿಯ ಹೋರಾಟದಲ್ಲಿ ಕೊನೆ ಘಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಕೇವಲ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಿಂದ ಇಬ್ಬರೂ ಅಭ್ಯರ್ಥಿಗಳ ಮಧ್ಯೆ ಅತ್ಯಂತ ಪೈಪೋಟಿ ಏರ್ಪಟಿದ್ದು, ಅಂತಿಮವಾಗಿ ಆರು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರಾಭವಗೊಂಡರು. 2410 ಮತಗಳ ಪೈಕಿ 39 ಮತಗಳು ಅಸಿಂಧುಗೊಂಡಿತ್ತು. ಎಂ.ಕೆ ಪ್ರಾಣೇಶ 1188 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ […]
ಸಂತೆಕಟ್ಟೆ: ಕಂಬಕ್ಕೆ ಡಿಕ್ಕಿ ಹೊಡೆದ ಮೀನು ಲಾರಿ; ಚಾಲಕ ಮೃತ್ಯು

ಉಡುಪಿ: ಮೀನು ಸಾಗಾಟ ವಾಹನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಉಡುಪಿ ಸಂತೆಕಟ್ಟೆಯ ಬಳಿ ಮಂಗಳವಾರ ಮುಂಜಾನೆ ನಡೆದಿದೆ. ತೌಫೀಕ್ (28) ಮೃತ ಚಾಲಕ. ಮೀನಿನ ಲಾರಿ ರಾಷ್ಟೀಯ ಹೆದ್ದಾರಿ 66 ಸಂತೆಕಟ್ಟೆಯ ಬಳಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಧ್ಯರಾತ್ರಿ1 ಗಂಟೆ ಸುಮಾರಿಗೆ ವೃದ್ಧರೊಬ್ಬರು ರಸ್ತೆಗೆ ಅಡ್ಡ ಬಂದಿದ್ದು, ಇದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚಾಲಕ ಮೃತಪಟ್ಟರೆ, ಕ್ಲೀನರ್ […]