ವಿಧಾನ ಪರಿಷತ್ ಚುನಾವಣೆ: ರಾಜ್ಯಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ

ಬೆಂಗಳೂರು: ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 8ರ ಸಂಜೆ 4 ಗಂಟೆಯಿಂದ  ಡಿಸೆಂಬರ್ 10 ರ ಮಧ್ಯರಾತ್ರಿವರೆಗೆ 3 ದಿನಗಳ ಕಾಲ ಬಾರ್ ಹಾಗೂ ಮದ್ಯದಂಗಡಿಗಳನ್ನು ಮುಚ್ಚುವಂತೆ ಮುಖ್ಯ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ‌. ಮುಖ್ಯ ಚುನಾವಣಾಧಿಕಾರಿಗಳ ಈ ಸೂಚನೆಯನ್ನು ರಾಜ್ಯಾದ್ಯಂತ ಮದ್ಯ ಮಾರಾಟಗಾರರು ಖಂಡಿಸಿದ್ದಾರೆ. ಮೂರು ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಿರುವುದು  ಭಾರೀ ನಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಾಂಬರಿನ ಮುಖ ನೋಡಿ ವರ್ಷಗಳೇ ಉರುಳಿದೆ; ಜನರ ಪ್ರಾಣ ತೆಗೆಯಲು ರೆಡಿಯಾಗಿ ನಿಂತಿದೆ ಹೆಬ್ರಿಯ ಈ ರಸ್ತೆ!!

ಹೆಬ್ರಿ: ಡಾಂಬರು ನೋಡಿ ವರ್ಷಗಳೇ ಉರುಳಿರುವ ರಸ್ತೆ. ಹೊಂಡ ಗುಂಡಿ ಬಿದ್ದಿರುವ ರಸ್ತೆಯಲ್ಲೇ ನಿತ್ಯ ಜನರ ಓಡಾಟ. ಇದು ಹೆಬ್ರಿಯ ವಿಶ್ವಕರ್ಮ ಸಭಾಭವನಕ್ಕೆ ಹೋಗುವ ರಸ್ತೆಯ ಇಂದಿನ ದುಸ್ಥಿತಿ. ಮಳೆ ಬಂದರಂತೂ ಈ ರಸ್ತೆಯಲ್ಲಿ ಹೋಗುವುದೇ ಒಂದು ದುಸ್ಸಾಹಸ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆಯಲ್ಲೇ ಹರಿಯುತ್ತೇ ನೀರು. ಮಳೆಗಾಲದಲ್ಲಿ ಅಂತೂ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಈ ರಸ್ತೆ ಡಾಂಬರಿನ ಮುಖ ನೋಡಿ ಸಾಕಷ್ಟು ವರ್ಷಗಳೇ ಕಳೆದಿದೆ. ಈ ಭಾಗದ ಜನರ ಸಂಕಷ್ಟವನ್ನು […]

ಜ.1ರಿಂದ ಎಟಿಎಂ ವಹಿವಾಟು ದುಬಾರಿ..!!

ನವದೆಹಲಿ: ಎಟಿಎಂ ವಹಿವಾಟುಗಳು 2022ರ ಜನವರಿ 1ರಿಂದ ದುಬಾರಿಯಾಗಲಿವೆ. ಜ.1ರಿಂದ ಗ್ರಾಹಕರು ನಗದು ಹಿಂಪಡೆಯಲು ₹21 ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ. ಎಟಿಎಂನಿಂದ ನಗದು ಹಿಂಪಡೆಯುವ ಮಿತಿ ಮುಗಿದ ನಂತರ ಎಟಿಎಂನಿಂದ ನಗದು ಹಿಂಪಡೆಯುವಿಕೆ ದುಬಾರಿಯಾಗಲಿದ್ದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗ್ರಾಹಕರು ಇಂತಿಷ್ಟು ಮಿತಿ ಮೀರಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. HDFC ಬ್ಯಾಂಕ್ ವೆಬ್‌ಸೈಟ್ ಪ್ರಕಾರ ಜ.1ರಿಂದ ಜಾರಿಗೆ ಬರುವಂತೆ, ಎಟಿಎಂ ವಹಿವಾಟು ಶುಲ್ಕದ ಉಚಿತ ಮಿತಿ ₹20 […]