ಮೂರು ವರ್ಷದಲ್ಲಿ ಮಾಧ್ಯಮಗಳ ಜಾಹೀರಾತಿಗಾಗಿ ₹1700 ಕೋಟಿ ಖರ್ಚು ಮಾಡಿದ ಕೇಂದ್ರ ಸರ್ಕಾರ
ನವದೆಹಲಿ: ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರವು ಜಾಹೀರಾತಿಗಾಗಿ ಬರೋಬ್ಬರಿ ₹1700 ಕೋಟಿ ಖರ್ಚು ಮಾಡಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದ್ದು, ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಹೊರಾಂಗಣ ಜಾಹೀರಾತುಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ₹1700 ಕೋಟಿ ಖರ್ಚು ಮಾಡಿದೆ ಎಂದು ಹೇಳಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2018-19 ರಿಂದ 2020-21 ರ ಅವಧಿಯಲ್ಲಿ ಸರ್ಕಾರವು ಮುದ್ರಣ ಮತ್ತು […]
ಉಡುಪಿ: ಎಕ್ಸ್‌ಪ್ರೆಸ್- ಷಟಲ್ ಬಸ್ ಪ್ರಯಾಣ ದರ ಏರಿಕೆ; ನೂತನ ಪರಿಷ್ಕೃತ ದರದ ವಿವರ ಇಲ್ಲಿದೆ
ಉಡುಪಿ: ಎಕ್ಸ್‌ಪ್ರೆಸ್ ಹಾಗೂ ಷಟಲ್ ಬಸ್ ಪ್ರಯಾಣ ದರವನ್ನು 2021ರ ನ.10ರಿಂದ ಪೂರ್ವಾನ್ವಯವಾಗುವಂತೆ ನಿಗದಿಪಡಿಸಿ ಪರಿಷ್ಕರಿಸಿ ಜಿಲ್ಲಾ ಸಾರಿಗೆ ಪ್ರಾಧಿಕಾರ ಪ್ರಕಟಿಸಿದೆ. ಅದರಂತೆ ನೂತನ ಪರಿಷ್ಕೃತ ಪ್ರಯಾಣ ದರ ಪ್ರಕಟಗೊಂಡಿದೆ. ಜಿಲ್ಲೆಯ ಎಲ್ಲಾ ಬಸ್ ಮಾಲೀಕರು ಪ್ರಾಧಿಕಾರದಿಂದ ನಿಗದಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯುವಂತೆ ಹಾಗೂ ಜಿಲ್ಲೆಯ ಎಲ್ಲಾ ಬಸ್ ಗಳಲ್ಲಿ ಮಾರ್ಗದ ವಿವರವನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸಬೇಕು ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಜೆಪಿ ಗಂಗಾಧರ ಸೂಚನೆ ನೀಡಿದ್ದಾರೆ. ನೂತನ ಪರಿಷ್ಕೃತ ದರ ಈ ಕೆಳಕಂಡಂತಿದೆ:
ಕಂಬಳ ಓಟಗಾರ ರೆಂಜಾಳ ಯುವರಾಜ್ ಜೈನ್ ಹೃದಯಾಘಾತದಿಂದ ನಿಧನ
ಕಾರ್ಕಳ: ಪ್ರಸಿದ್ಧ ಕಂಬಳ ಓಟಗಾರ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್(65) ಅವರು ಹೃದಯಾಘಾತದಿಂದ ಇಂದು ನಿಧನರಾದರು. ಅವರು ಕಳೆದ ಮೂವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರಸಕ್ತ ವರ್ಷದ ಪ್ರಥಮ ಜೋಡುಕರೆ ಕಂಬಳವಾಗಿದ್ದ ಬಂಟ್ವಾಳ ತಾಲೂಕಿನ ಹೊಕ್ಲಾಡಿಗೋಳಿಯಲ್ಲಿ ನಡೆದ ಜೋಡುಕರೆ ಬಯಲು ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಇವರ ಪಾಲಿಗೆ ಲಭಿಸಿತು. ಮೃತರು ಪತ್ನಿ, ನಾಲ್ವರು ಹೆಣ್ಣು ಇಬ್ಬರು […]
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‍ನ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಮಂಗಳೂರಿನ ಪಾಂಡೇಶ್ವರ ಎಮ್ಮೆಕೆರೆಯ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಫೆಡರೇಶನ್ ಮಹಾಸಭೆಗೆ 49 “ಬಿ” ವರ್ಗದ ಸದಸ್ಯರು ಮತು 760 “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು. ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣರವರು ಸ್ವಾಗತಿಸಿ, ಸದಸ್ಯರಿಗೆ ಸಂಸ್ಥೆಯ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ಸಭೆಯಲ್ಲಿ ರಾಜ್ಯ ಸರಕಾರದ […]
ಕೋಟ: ದೇಗುಲದ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಕೋಟ: ಇಲ್ಲಿನ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತನನ್ನು ಪಾಂಡೇಶ್ವರ ಯಡಬೆಟ್ಟು ನಿವಾಸಿ ಸುನಿಲ್ ಮೋಗವೀರ (28) ಎಂದು ಗುರುತಿಸಲಾಗಿದೆ. ಇಂದು ದೇವರ ದರ್ಶನ ಪಡೆದ ಬಳಿಕ ದೇಗುಲದ ಆವರಣದಲ್ಲಿದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ, ಇತ್ತೀಚಿನ ದಿನಗಳಲ್ಲಿ ಸರಿಯಾದ ಕೆಲಸ ಇರಲಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದನು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುನಿಲ್ […]