ಹೊಕ್ಕಾಡಿ ಗೋಳಿ ಕಂಬಳದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ಪಾಲ್ಗೊಂಡವು ಓಟದ ಕೋಣಗಳು

ಬಂಟ್ವಾಳ:ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿ  ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ  ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ ಮತ್ತು ಈ ವರ್ಷದ ಪ್ರಥಮ ಕಂಬಳದಲ್ಲಿ ಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಹೆಸರಿನಲ್ಲಿ ಪಾಲ್ಗೊಂಡ ಓಟದ ಕೋಣಗಳು ಗಮನ ಸೆಳೆಯಿತು. ಕಿರಣ್ ಕುಮಾರ್ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರು ನೇತೃತ್ವ ವಹಿಸಿದ್ದರು. ಛಾಯಾ ವರದಿ-ಪುನೀತ್ ಸಿದ್ದಕಟ್ಟೆ

ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ- ಈ ವರ್ಷದ ಪ್ರಥಮ ಕಂಬಳಕ್ಕೆ ವೈಭವದ ಚಾಲನೆ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿ  ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ  ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ ಮತ್ತು ಈ ವರ್ಷದ ಪ್ರಥಮ ಕಂಬಳಕ್ಕೆ ಭಾನುವಾರ ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ  ಉದ್ಘಾಟಿಸಿದರು. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಇಲ್ಲಿನ ಮುಜಿಲ್ನಾಯಿ ದೈವಸ್ಥಾನ ಜೊತೆಗೆ ವಿಶೇಷ ಧಾರ್ಮಿಕ ನಂಟು ಹೊಂದಿರುವ   […]

ಬ್ರಹ್ಮಾವರ: ಭೀಕರ ಅಪಘಾತ; ಓರ್ವ ಮೃತ್ಯು- ಇಬ್ಬರು ಗಂಭೀರ

ಬ್ರಹ್ಮಾವರ: ಇಲ್ಲಿನ ಸಾಹೇಬ್ರಕಟ್ಟೆ ಹೈಸ್ಕೂಲ್ ಸಮೀಪದ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು, ಮೀನು ಸಾಗಾಟದ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತ ನಡೆದಿದೆ. ಘಟನೆಯಲ್ಲಿ ಮೀನು ಸಾಗಾಟದ ಮಿನಿ ಪಿಕಪ್ ಚಾಲಕ, ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ(40) ಮೃತಪಟ್ಟಿದ್ದಾರೆ. ಸಹ ಸವಾರ ರಾಜು ಮರಕಾಲ(60) ಹಾಗೂ ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್(42) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ […]

ಮಣಿಪಾಲ: ವ್ಯಕ್ತಿಗೆ ಹಲ್ಲೆ ನಡೆಸಿ ಬಂಗಾರದ ಚೈನ್, ಮೊಬೈಲ್, ಸ್ಕೂಟರ್ ನೊಂದಿಗೆ ಎಸ್ಕೇಪ್

ಮಣಿಪಾಲ: ವ್ಯಕ್ತಿಯೊಬ್ಬರಿಗೆ ಪರಿಚಿತನೇ ದೋಖಾ ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಉಡುಪಿ ಹೆರ್ಗಾ ನಿವಾಸಿ ರಮೇಶ್ ಆಚಾರ್ಯ ಎಂಬವರಿಗೆ ಪರಿಚಿತನಾದ ಪ್ರಶಾಂತ್ ಎಂಬಾತನಿಂದಲೇ ಸಖತ್ ದೋಖಾ ಆಗಿದೆ.‌ ರಮೇಶ್ ಅವರು ನಿನ್ನೆ ರಾತ್ರಿ 9ಗಂಟೆ ಸುಮಾರಿಗೆ ಆರೋಪಿ ಪ್ರಶಾಂತ್ ನನ್ನು ಭೇಟಿಯಾಗಿದ್ದರು. ಬಳಿಕ ಪ್ರಶಾಂತ್, ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್‌‌ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್‌‌ ಸೇವನೆ ಮಾಡಿದ್ದಾರೆ. ಬಳಿಕ ರಾತ್ರಿ […]

ಉಡುಪಿ: ಏರ್ ಪೋರ್ಟ್‌ನಲ್ಲಿ ಉದ್ಯೋಗದ ಜಿ-ಮೇಲ್ ಸಂದೇಶ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ.!

ಉಡುಪಿ: ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ಕಳುಹಿಸಿದ ಜಿ-ಮೇಲ್ ಸಂದೇಶವನ್ನು ನಂಬಿ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೈಕಾಣ ಎಂಬಲ್ಲಿ ನಡೆದಿದೆ. ವಂಡ್ಸೆ ಗ್ರಾಮದ ಕೈಕಾಣ ನಿವಾಸಿ ಅನುಷಾ (21) ವಂಚನೆಗೊಳಗಾದ ಯುವತಿ. ಇವರಿಗೆ 2021 ನೇ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ  ಜಿ-ಮೇಲ್ ಸಂದೇಶವೊಂದು ಬಂದಿತ್ತು. ಅದರಲಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದು, ಆಗ ಪರಿಚಿತ ವ್ಯಕ್ತಿ ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರೇ […]