ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಆರ್.ಸಾಗರ ನಾರ್ತ್ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ನಡೆದಿದೆ. ಮೈಸೂರಿನ ಮೇಟಗಳ್ಳಿಯ ಬಡವಾಣೆಯ ನಿವಾಸಿಗಳಾದ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮೃತ ನವೀನ್ ನಿಸರ್ಗಳ ಮಾವ ಆಗಿದ್ದು, ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಯುವತಿಯ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಯುವತಿಗೆ ಚಾಮರಾಜನಗರ ಸಮೀಪದ ಗ್ರಾಮದ ಯುವಕನೊಂದಿಗೆ ನವೆಂಬರ್ 20 ರಂದು ಮದುವೆ ಮಾಡಿದ್ದರು. ಆದರೆ ಮದುವೆಯಾದ […]
ಸದ್ಯದಲ್ಲೇ ಕೊಳಚೆ ನೀರಿನಿಂದ ಓಡಲಿವೆ ಕಾರು, ಟ್ರಕ್, ಬಸ್.!

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದಿಂದ ವಾತಾವರಣ ದಿನೇ ದಿನೇ ಹದಗೆಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರೀನ್ ಹೈಡ್ರೋಜನ್ ಬಳಸಿ ಕಾರು, ಟ್ರಕ್ ಮತ್ತು ಬಸ್‌ಗಳನ್ನು ಓಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಗರಗಳ ಕೊಳಚೆ ನೀರು ಮತ್ತು ಘನ ತ್ಯಾಜ್ಯದಿಂದ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಬಳಸಿ ಬಸ್, ಕಾರು ಮತ್ತು ಟ್ರಕ್‌ಗಳನ್ನು ಓಡಿಸುವ ಯೋಜನೆ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 6ನೇ ರಾಷ್ಟ್ರೀಯ ಹಣಕಾಸು ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. […]
ಉಡುಪಿ: ಡಿ.5ಕ್ಕೆ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರ

ಉಡುಪಿ: ನಗರದ ಬೀಡಿನಗುಡ್ಡೆ ವ್ಯಾಪ್ತಿಯ ವಲಸೆ ಕಾರ್ಮಿಕರ ಕಾಲೋನಿಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಯನ್ನಾಗಿ ನೋಂದಾಯಿಸುವ ಸಲುವಾಗಿ ಡಿಸೆಂಬರ್ 5ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೀಡಿನಗುಡ್ಡೆ ಮಂಡಳಿಯ ಶಿಶುಪಾಲನಾ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಕೇಂದ್ರ ಸರ್ಕಾರದ ಇ-ಶ್ರಮ್ ಕಾರ್ಡ್, ಪಿ.ಎಂ.ಎಸ್.ವೈ.ಎ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್, ವಾಣಿಜ್ಯ ವಾಹನಗಳ ಕ್ಲೀನರ್ ಮತ್ತು ನಿರ್ವಾಹಕರಿಗೂ ಅನ್ವಯವಾಗುವ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಸಹ ಅವಕಾಶ […]
ಕುಂದಾಪುರ ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ; ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಆರಂಭ

ಉಡುಪಿ: ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯನ್ನು ಕಚೇರಿಯ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯ ವರೆಗೆ ಮಾಡಲಾಗುವುದು. ಹಾಗೆ, ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಸಹ ಪುನಃ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಎಲ್ಲಾ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ: ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಡಿವಾಳ ಸಮುದಾಯಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಲಾಗಿರುವ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ www.kmmd.karnataka.gov.in ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ(ನಿ), ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574882 ಅನ್ನು ಸಂಪರ್ಕಿಸುವಂತೆ ಡಿ. ದೇವರಾಜ ಅರಸು ಹಿಂದುಳಿದ […]