ಕುಂದಾಪುರ: ಪೊದೆಯಲ್ಲಿ ಎಸೆದುಹೋಗಿದ್ದ ನವಜಾತ ಶಿಶುವಿನ ರಕ್ಷಣೆ

ಕುಂದಾಪುರ: ಕಾಡು ಪೊದೆಯಲ್ಲಿ ನವಜಾತ ಶಿಶುವೊಂದನ್ನು ಎಸೆದುಹೋದ ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಸೇತುವೆ ಬಳಿಯ ಕಾಡಿನಲ್ಲಿ  ನಡೆದಿದೆ. ಡೇರಿಗೆ ಹಾಲು ಕೊಡಲು ಹೋಗುತ್ತಿದ್ದ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಅವರು ಬುಧವಾರ ಸಂಜೆ ಸುಮಾರು 4.30ಕ್ಕೆ ಸುಮಾರಿಗೆ ಡೇರಿಗೆ ಹಾಲು ಕೊಡಲು ಹೋಗುತ್ತಿದ್ದರು. ಈ ವೇಳೆ ಅವರಿಗೆ ಮಚ್ಚಟ್ಟು ಗ್ರಾಮದ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿಸಿದೆ. […]

ಆಳ್ವಾಸ್ ನಿಂದ ಕೆಸರ್ ಡ್ ಒಂಜಿ ದಿನ : ಕೃಷಿ ಸಾಧಕರಾದ ರಾಜು ಗೌಡ, ವಾರಿಜ ಮಿಜಾರು ಅವರಿಗೆ ಸನ್ಮಾನ

ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮಿಜಾರು ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಕೆಸರ್‌ಡ್ ಒಂಜಿ ದಿನ -2021 ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ರಾಜು ಗೌಡ ಅರೆಮಜಲು ಪಲ್ಕೆ ಮತ್ತು ಕೃಷಿ ಕಾರ್ಮಿಕೆ ವಾರಿಜ ಮಿಜಾರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ […]

ಕೋಟ: ಕೋಡಿ ಕನ್ಯಾನದ ಬಾಲಕ ನಾಪತ್ತೆ

ಕೋಟ: ಆಟ ಆಡಲು ಹೋಗುತ್ತೇನೆಂದು ಮನೆಯಿಂದ ತೆರಳಿದ 14 ವರ್ಷದ ಬಾಲಕನೋರ್ವ ನಾಪತ್ತೆಯಾಗಿರುವ ಘಟನೆ ಕೋಟ ಕೋಡಿ ಕನ್ಯಾನ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿ ಕನ್ಯಾನದ ನಾಸಿರ್ ಎಂಬವರ ಪುತ್ರ ಮುಹಮ್ಮದ್ ನಿಶಾನ್ (14) ಕಾಣೆಯಾಗಿದ್ದಾನೆ. ಈತ ನ.28ರಂದು ಬೆಳಿಗ್ಗೆ 10 ಗಂಟೆ ಸ್ನೇಹಿತರೊಂದಿಗೆ ಕೋಟ ಪಡುಕರೆ ಎಂಬಲ್ಲಿಗೆ ಆಟ ಆಡಲು ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದನು. ಬಳಿಕ ಮನೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾನೆ. ಈತ ಸುಮಾರು 4.5 […]