ಜೇನು ತರಬೇತಿ ಕಾರ್ಯಕ್ರಮ: ನೋಂದಣಿಗೆ ಸೂಚನೆ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಜೇನು ಸಾಕಾಣಿಕೆ ಹಾಗೂ ಮಧುವನ ಮತ್ತು ಜೇನು ಸಾಕಾಣೆ ಯೋಜನೆಯಡಿ, ಜೇನುಕೃಷಿ ಪ್ರೋತ್ಸಾಹಕ್ಕಾಗಿ ಉಡುಪಿ ತಾಲೂಕಿನ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಆಸಕ್ತ ರೈತರು ಡಿಸೆಂಬರ್ 3 ರ ಒಳಗೆ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 0820-2522837 ಹಾಗೂ 7996394553 ಅನ್ನು ಸಂಪರ್ಕಿಸುವoತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಟ ಶಿವರಾಂ ಸ್ಥಿತಿ ಗಂಭೀರ; ಐಸಿಯುಗೆ ದಾಖಲು

ಬೆಂಗಳೂರು: ಮೆದುಳಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಹಿರಿಯ ನಟ ಶಿವರಾಂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಹೊಸಕರೆ ಹಳ್ಳಿಗೆ ಕಾರಿನಲ್ಲಿ ಅವರು ಹೋಗಿದ್ದ ವೇಳೆ ಅವರು ಕಾರಿನಿಂದ ಬಿದ್ದಿದ್ದರು. ಇದರಿಂದ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. 84 ವರ್ಷದ ಹಿರಿಯ ನಟ ಶಿವರಾಮ್​ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿಯ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ: ಗುಲ್ವಾಡಿ ಗ್ರಾಮ ನಿವಾಸಿ ನಾಪತ್ತೆ

ಕುಂದಾಪುರ: ತಾಲೂಕಿನ ಗುಲ್ವಾಡಿ ಗ್ರಾಮ ಕಳುವಿನ ಬಾಗಿಲು ನಿವಾಸಿ ಶಶಿಧರ(30) ಎಂಬವರು ನ.28ರಂದು ಮಧ್ಯಾಹ್ನ 12.30ಕ್ಕೆ ಆಧಾರ್ ಕಾರ್ಡ್ ಮಾಡಲು ಹೋಗುತ್ತೇನೆಂದು ಮನೆಯಿಂದ ಹೋದವರು ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ತೋಡಿಗೆ ಬಿದ್ದು ಮೃತ್ಯು

ಕುಂದಾಪುರ: ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಗಡಿಯಾರ ಹಿತ್ಲು ಮೀನುಕೆರೆ ತೋಡಿನಲ್ಲಿ ಡಿ.1ರಂದು ನಡೆದಿದೆ. ಕುಂದಾಪುರ ಕಸಬಾ ಗ್ರಾಮದ ಕೋಡಿ ಗಡಿಯಾರ ನಿವಾಸಿ ಜೋಗ ಭಂಡಾರಿ (55) ಮೃತ ದುರ್ದೈವಿ. ಇವರು ಬುಧವಾರ ಬೆಳಿಗ್ಗೆ ಮೀನುಕೆರೆ ತೋಡಿಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ […]

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ: ಇಂದಿನಿಂದ ರಂಗಪೂಜಾದಿ ದೀಪೋತ್ಸವ

ಬಾರಕೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಇಂದಿನಿಂದ ಡಿ.4ರ ವರೆಗೆ ರಂಗಪೂಜಾದಿ ದೀಪೋತ್ಸವ ನೆರವೇರಲಿದೆ. ಇಂದು (ಡಿ.2) ಪಂಚಾಮೃತ ಅಭಿಷೇಕ, ಮಹಾಪೂಜೆ, ಉತ್ಸವ ಸಂತರ್ಪಣೆ ಹಾಗೂ ರಾತ್ರಿ ರಂಗಪೂಜಾದಿ ದೀಪೋತ್ಸವ ಜರುಗಲಿದೆ. ಡಿ.3ರಂದು ಮಧ್ಯಾಹ್ನ ತುಲಾಭಾರ ಸೇವೆ ನಡೆಯಲಿದೆ. ಡಿ. 6ರಂದು ರಾತ್ರಿ ದೈವಗಳ ನೇಮೋತ್ಸವ ನೆರವೇರಲಿದೆ ಎಂದು ಆಡಳಿತ ಧರ್ಮದರ್ಶಿ ಶ್ರೀಧರ ಆಚಾರ್ಯ ವಡೇರಹೋಬಳಿ ತಿಳಿಸಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ […]