ಓಮೈಕ್ರಾನ್ ವೈರಸ್ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲವೆಂದ ಕೇಂದ್ರ ಆರೋಗ್ಯ ಇಲಾಖೆ
ನವದೆಹಲಿ: ಜಗತ್ತಿನಾದ್ಯಂತ ಆತಂಕ ಮೂಡಿಸಿರುವ ಓಮೈಕ್ರಾನ್ ತಳಿ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಇಬ್ಬರಿಗೆ ಓಮೈಕ್ರಾನ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಸೋಂಕು ಪತ್ತೆಯಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್, ಈ ವೈರಾಣುವಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಓಮೈಕ್ರಾನ್ ಅಪಾಯಕಾರಿ ಹೌದೋ? ಅಲ್ಲವೋ? ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ವ್ಯಾಪಕ ಸಂಶೋಧನೆಗಳು ನಡೆಯುತ್ತಿವೆ. ಭಾರತದಲ್ಲಿ ಜನರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. […]
ನರ್ಸಿಂಗ್ ಕಾಲೇಜಿನ 29 ವಿದ್ಯಾರ್ಥಿಗಳಿಗೆ ಕೋವಿಡ್
ಶಿವಮೊಗ್ಗ: ಇಲ್ಲಿಯ ಗಾಡಿಕೊಪ್ಪ ಸಮೀಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವಸತಿನಿಲಯದಲ್ಲಿದ್ದ 384 ವಿದ್ಯಾರ್ಥಿಗಳಿಗೆ ಬುಧವಾರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆ ಪೈಕಿ ನ.23ರಂದು ಕೇರಳದಿಂದ ವಾಪಸಾಗಿದ್ದ 23 ನರ್ಸಿಂಗ್ ವಿದ್ಯಾರ್ಥಿಗಳು ಸೇರಿ ಒಟ್ಟು 29 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಬಂಟ್ವಾಳ: ಡಿ. 4ರಂದು ಜೆಸಿಐ ಇಂಡಿಯಾ ವಲಯ XV ಸಮಾವೇಶ
ಬಂಟ್ವಾಳ: ಜೆಸಿಐ ಇಂಡಿಯಾದ ವಲಯ XV ಇದರ 2012ನೇ ಸಾಲಿನ ವಲಯ ಸಮಾವೇಶವು ಡಿ. 4 ಮತ್ತು 5ರಂದು ಬಂಟ್ವಾಳ ಬಂಟರ ಭವನದಲ್ಲಿ ನಡೆಯಲಿದೆ. ಜೆಸಿಐ ಇಂಡಿಯಾದ ವಲಯ XV ಇದರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮಾವೇಶ ಜರುಗಲಿದೆ. ಜೆಸಿಐ ಉಪಾಧ್ಯಕ್ಷ ಕವೀನ್ ಕುಮಾರ್ ಸಮಾವೇಶವನ್ನು ಉದ್ಘಾಟಿಸುವರು.
ಅಂಬಲಪಾಡಿ: ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿ ಗೋಪಾಲ್ ಬಂಗೇರ ಪಂದುಬೆಟ್ಟು ಆಯ್ಕೆ
ಅಂಬಲಪಾಡಿ: ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿ ಗೋಪಾಲ್ ಬಂಗೇರ ಪಂದುಬೆಟ್ಟು ಆಯ್ಕೆ ಉಡುಪಿ: ಬಿಲ್ಲವ ಸೇವಾ ಸಂಘ, ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2021-23ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಅವರು ಪುನರಾಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳು: ಎ. ಶಿವಕುಮಾರ್ ಅಂಬಲಪಾಡಿ (ಉಪಾಧ್ಯಕ್ಷರು); ರಾಜೇಶ್ (ಪ್ರಧಾನ ಕಾರ್ಯದರ್ಶಿ); ಮಹೇಂದ್ರ ಕೋಟ್ಯಾನ್ ಮತ್ತು ಅವಿನಾಶ್ ಪೂಜಾರಿ (ಜತೆ ಕಾರ್ಯದರ್ಶಿಗಳು); ದಯಾನಂದ ಎ. (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರಾಗಿ ಶಿವದಾಸ್ ಪಿ., […]
ಉಡುಪಿ: ಸವಿತಾ ಸಮಾಜ ಅಭಿವೃದ್ಧಿ ನಿಗಮ; ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಉಡುಪಿ: ಜಿಲ್ಲಾ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸವಿತಾ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://kssd.karnataka.gov.in ಅಥವಾ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ(ನಿ), ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574882 ಅನ್ನು ಸಂಪರ್ಕಿಸುವಂತೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ […]