ಉಡುಪಿ ರೆಡ್ ಕ್ರಾಸ್ ಸಭಾಪತಿ ಸ್ಥಾನ ವಿವಾದ ಇತ್ಯರ್ಥ; ಬಸ್ರೂರು ರಾಜೀವ ಶೆಟ್ಟಿಗೆ ಅಧಿಕಾರ ಹಸ್ತಾಂತರ

ಉಡುಪಿ: ಉಡುಪಿ ರೆಡ್ ಕ್ರಾಸ್ ಸಭಾಪತಿ ಸ್ಥಾನದ ಕುರಿತ ವಿವಾದ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಇತ್ಯರ್ಥಗೊಂಡಿದೆ. ಹಾಲಿ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಅವರು ಬಸ್ರೂರು ರಾಜೀವ ಶೆಟ್ಟಿ ಅವರಿಗೆ ಬುಧವಾರ ಅಧಿಕಾರ ಹಸ್ತಾಂತರಿಸಿದರು. ಆ ಮೂಲಕ ಸಭಾಪತಿ ಸ್ಥಾನದ ವಿವಾದ ಬಗೆಹರಿದೆ. ಇದೇ ವೇಳೆ ಗೌರವ ಕಾರ್ಯದರ್ಶಿ ಹುದ್ದೆಯನ್ನು ಬಾಲಕೃಷ್ಣ ಶೆಟ್ಟಿ ಅವರಿಗೆ ಮತ್ತೆ ಹಸ್ತಾಂತರಿಸಲಾಯಿತು. ಏನಿದು ವಿವಾದ: ಬಸ್ರೂರು ರಾಜೀವ ಶೆಟ್ಟಿ ಹಾಗೂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಿರುದ್ಧ ಹಣ ದುರುಪಯೋಗ ಮಾಡಿರುವ ಆರೋಪವಿತ್ತು. ಈ […]

ಉಡುಪಿ: ಸೇಲ್ಸ್‌ ಮೆನ್‌ ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಳೆಗಳನ್ನು ಎಗರಿಸಿದ ಮಹಿಳೆಯರು

ಉಡುಪಿ: ಸೇಲ್ಸ್‌ ಮೆನ್‌ ನ ಗಮನ ಬೇರೆಡೆಗೆ ಸೆಳೆದು ಇಬ್ಬರು ಮಹಿಳೆಯರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಬಳೆಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಸುಲ್ತಾನ್‌ ಡೈಮಂಡ್‌ & ಗೋಲ್ಡ್‌ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನಡೆದಿದೆ. ನ.23ರಂದು ಸಂಜೆ 6.15ರ ಸುಮಾರಿಗೆ ಉಡುಪಿ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸುಲ್ತಾನ್‌ ಡೈಮಂಡ್‌ & ಗೋಲ್ಡ್‌ ಆಭರಣ  ಮಳಿಗೆಗೆ ಆಭರಣ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಬ್ಬರು ಬಂದಿದ್ದು, ಅವರಿಗೆ ಮಳಿಗೆಯ ಸೇಲ್ಸ್ ಮನ್ ಮೊಹಮ್ಮದ್‌ ಮುಬಾರಕ್‌ ಚಿನ್ನದ ಬಳೆಗಳನ್ನು ತೋರಿಸಿದ್ದಾರೆ. ಈ […]

ಕಾರ್ಕಳ: ಕೆರೆಗೆ ಬಿದ್ದು ಮಹಿಳೆ ಮೃತ್ಯು

ಕಾರ್ಕಳ: ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ಅನಂತಶಯನ ನಾಗರಬಾವಿ ಕೆರೆಯಲ್ಲಿ ಬುಧವಾರ ಸಂಭವಿಸಿದೆ. ದಾನಶಾಲೆ ನಿವಾಸಿ ಗೌರಮ್ಮ (65) ಮೃತ ದುರ್ದೈವಿ. ಅವರು ಇಂದು ಬೆಳಿಗ್ಗೆ ವಾಕಿಂಗ್‌ ತೆರೆಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಗೌರಮ್ಮ ಅವರ ಗಂಡ ಎರಡು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಇದೇ ಖಿನ್ನತೆಯಲ್ಲಿದ್ದರು ಎನ್ನಲಾಗಿದೆ. ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್‌ ಡಿಸಿಲ್ವಾ, ಮಾಜಿ ಪುರಸಭಾ ಸದಸ್ಯ ಪ್ರಕಾಶ್‌ ರಾವ್‌, […]

ಪೈಪ್ ಕತ್ತರಿಸಿ ಕಂತೆ ಕಂತೆ ನೋಟು ಹೊರತೆಗೆದ ಎಸಿಬಿ ಅಧಿಕಾರಿಗಳು..!!

ಕಲಬುರಗಿ: ಇಲ್ಲಿನ ಗುಬ್ಬಿ ‌ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಮನೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಪೈಪ್ ನಲ್ಲಿ ಇರಿಸಿದ್ದ ಕಂತೆ ಕಂತೆ ನೋಟುಗಳನ್ನು ಹೊರತೆಗೆದಿದ್ದಾರೆ. ಮನೆಯ ಪೈಪ್ ನಲ್ಲಿ ಅಡಗಿಸಿಟ್ಟಿದ್ದ ₹ 5 ಲಕ್ಷಕ್ಕೂ ಅಧಿಕ ಹಣದ ಕಟ್ಟುಗಳನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಶಾಂತಗೌಡ ಅವರಿಗೆ ಸೇರಿದ ಗುಬ್ಬಿ ಕಾಲೊನಿ ಮನೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿನ ತೋಟದ ಮನೆ ಹಾಗೂ […]

ಉಡುಪಿ: ಕೈಗಾರಿಕಾ ಘಟಕ ಸ್ಥಾಪನೆಗೆ ಸಹಾಯಧನ; ಅರ್ಜಿ ಆಹ್ವಾನ

ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ.ಜಾತಿ ಮತ್ತು ಪ. ಪಂಗಡದ ಯುವಕ ಯುವತಿಯರಿಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕೈಗಾರಿಕಾ ಘಟಕ ಸ್ಥಾಪಿಸಲು, ಬ್ಯಾಂಕಿನಿಂದ ಸಾಲ ಪಡೆದು ಸಹಾಯಧನಕ್ಕಾಗಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2575650 ಅನ್ನು […]