ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ: ದೂರು ದಾಖಲು
ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವಕನೋರ್ವ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಮಿಳುನಾಡಿನ ವೆಲ್ಲೂರು ನಿವಾಸಿ ಪ್ರಶಾಂತ್ ಮುದಲಿಯಾರ್ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ. ಈತನಿಗೆ ಸಂತ್ರಸ್ತ ಯುವತಿ ಕಾಲೇಜಿನಲ್ಲಿ ಪರಿಚಯವಾಗಿದ್ದು, ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಕಳೆದ ಜೂನ್ ನಲ್ಲಿ ಆರೋಪಿ ಪ್ರಶಾಂತ್ ಯುವತಿಯನ್ನು ಮಣಿಪಾಲಕ್ಕೆ ಕರೆಸಿಕೊಂಡು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನು. ಆದಾದ ಬಳಿಕ ಯುವತಿ ಮದುವೆ […]
ಉಡುಪಿ ಜಿಲ್ಲಾ ಕಸಾಪ ಚುನಾವಣೆ: ನೀಲಾವರ ಸುರೇಂದ್ರ ಅಡಿಗರಿಗೆ ಗೆಲುವು
ಉಡುಪಿ: ಸತತ ಮೂರನೇ ಬಾರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನೀಲಾವರ ಸುರೇಂದ್ರ ಅಡಿಗ ಆಯ್ಕೆಯಾಗಿದ್ದಾರೆ. ಕಸಾಪ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ನೀಲಾವರ ಸುರೇಂದ್ರ ಅಡಿಗ ಅವರು ಸಮೀಪದ ಪ್ರತಿಸ್ಪರ್ಧಿ ಸುಬ್ರಹ್ಮಣ್ಯ ಬಾಸ್ರಿ ಅವರ ವಿರುದ್ಧ 32 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ನೀಲಾವರ ಸುರೇಂದ್ರ ಅಡಿಗ- 432, ಸುಬ್ರಹ್ಮಣ್ಯ ಬಾಸ್ರಿ- 400, ಸುಬ್ರಹ್ಮಣ್ಯ ಭಟ್- 394 ಮತಗಳನ್ನು ಗಳಿಸಿದ್ದಾರೆ. ಫಲಿತಾಂಶದ ಸಂಪೂರ್ಣ ವಿವರ: ಬ್ರಹ್ಮಾವರ ಸುರೇಂದ್ರ ಅಡಿಗ : 29 ಸುಬ್ರಹ್ಮಣ್ಯ […]
ಉಚ್ಚಿಲ: ಭವ್ಯ ಮೊಗವೀರ ಭವನ ಉದ್ಘಾಟನೆ
ಉಡುಪಿ: ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಎಂಆರ್‌ಪಿಎಲ್ ಕಾರ್ಪೊರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಷಿಯೇಟಿವ್ ಸಹಯೋಗದಲ್ಲಿ ಉಚ್ಚಿಲದಲ್ಲಿ ನಿರ್ಮಾಣಗೊಂಡ ಭವ್ಯ ಮೊಗವೀರ ಭವನ ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಎಮ್ ಆರ್ ಪಿ ಎಲ್ ಇದರ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಯೋಜನೆಗಳಿಂದ ಸಮಾಜ ಅಭಿವೃದ್ಧಿ ಸಾಧ್ಯ. ಒಂದು ಪ್ರದೇಶದ ಬೆಳವಣಿಗೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಯೋಜನೆಗಳು ಸಹಕಾರಿ ಎಂದರು. ಮೊಗವೀರ ಭವನದ ನಿರ್ಮಾಣದಲ್ಲಿ ಎಮ್ ಆರ್ ಪಿ ಎಲ್ […]