ಕೋವಿಡ್ ಪ್ರಕರಣ ಗಣನೀಯ ಏರಿಕೆ; ಶೀಘ್ರದಲ್ಲೇ ಲಾಕ್‌ಡೌನ್ ಘೋಷಣೆ?

ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೆದರ್ಲೆಂಡ್‌ ದೇಶದ (ಡಚ್‌) ಸರ್ಕಾರವು ಶೀಘ್ರದಲ್ಲೇ ಭಾಗಶಃ ಲಾಕ್‌ಡೌನ್ ಘೋಷಿಸುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಕಳೆದ ಎರಡ್ಮೂರು ವಾರಗಳಿಂದ ಯುರೋಪಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಉಲ್ಬಣವಾಗಿದ್ದು, ಅಲ್ಲಿನ ಕೆಲ ದೇಶಗಳಲ್ಲಿ ಬಾರ್ ಅಂಡ್ ರೆಸ್ಟೊರೆಂಟ್, ಕ್ರೀಡಾ ಕೂಟಗಳನ್ನು ನಿರ್ಬಂಧಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಡಚ್ ಸರ್ಕಾರವು ಮೂರು ವಾರಗಳ ಕಾಲ ಬಾರ್ ಅಂಡ್ ರೆಸ್ಟೊರೆಂಟ್‌ಗಳು, ಅಗತ್ಯವಲ್ಲದ ಸಾಮಾಗ್ರಿಗಳ ಅಂಗಡಿಗಳು ಸೇರಿದಂತೆ ಕ್ರೀಡಾಕೂಟಗಳಿಗೆ ನಿರ್ಬಂಧ ವಿಧಿಸುವ ಕುರಿತು ಚಿಂತನೆ […]

ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ; ಕಾರ್ಕಳ ಎಸ್ಟಿ ಮೋರ್ಚಾ

ಕಾರ್ಕಳ: ಭಾರತೀಯ ಇತಿಹಾಸದಲ್ಲಿ ಬುಡಕಟ್ಟು ಸಮುದಾಯದವರು ನೀಡಿದ ಕೊಡುಗೆಗಳನ್ನು ಗೌರವಿಸಲು ನವೆಂಬರ್ 15ರಂದು ನಡೆಯಲಿರುವ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಜನಜಾತಿಯ ಗೌರವ್ ದಿವಸ್ ಎಂದು ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಕ್ರಮಕ್ಕೆ ಬಿಜೆಪಿ ಕಾರ್ಕಳ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಕೆಪಿ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಈದು ಸ್ವಾಗತಿಸಿದ್ದಾರೆ.

ಉಡುಪಿ: ಅನಧಿಕೃತ ಮರಳು ಗಣಿಗಾರಿಕೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ

ಉಡುಪಿ: ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ತಾಲೂಕುಗಳ ವ್ಯಾಪ್ತಿಯಲ್ಲಿನ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪ್ರದೇಶಗಳ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಅನುಮತಿ, ತಾತ್ಕಾಲಿಕ ಪರವಾನಿಗೆ ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್‌ಝಡ್) ಪ್ರದೇಶದ ನದಿ ಪಾತ್ರಗಳಲ್ಲಿ ಮರಳುಗಾರಿಕೆ ನಡೆಸಲು ಮರಳು ಗಣಿ ಗುತ್ತಿಗೆಗಳನ್ನು ನೀಡಲಾಗಿದ್ದು, ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ. ಜಿಲ್ಲೆಯ ಕಟ್ಟಡ ನಿರ್ಮಾಣ ಮಾಲೀಕರು ಹಾಗೂ ಗುತ್ತಿಗೆದಾರರು ಮಂಜೂರಾದ ಕಟ್ಟಡದ […]

ನಿಲ್ಲಿಸಿದ ಕಾರಿನಲ್ಲಿ ಮೃತದೇಹ ಪತ್ತೆ

ಮಂಗಳೂರು: ಇಲ್ಲಿನ ಕಂಕನಾಡಿ ಬಳಿ ನಿಲ್ಲಿಸಿದ ಕಾರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ ಎಂದು ಗುರುತಿಸಲಾಗಿದೆ. ಇವರು ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಗುರುವಾರ ರಾತ್ರಿಯಿಂದಲೇ ಕಾರು ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದು ,ಇಂದು ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದು ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡುಬಂದಿತ್ತು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಣಿಪಾಲ: ಮಧುಮೇಹಿಗಳಿಗೆ ಉಚಿತ ಪಾದದ ತಪಾಸಣೆ

ಮಣಿಪಾಲ: ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಇದೇ ನ.15ರಿಂದ 19ರ ವರೆಗೆ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಪಾದದ ತೊಂದರೆ ಇರುವ ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿದವರಿಗೆ ಶೇ. 20 ಕಡಿತದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಈ ಸಮಯದಲ್ಲಿ ಕೋವಿಡ್‍ನ ಎಲ್ಲಾ ಮುಂಜಾಗರೂಕತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿ ಮತ್ತು ಉಚಿತ ತಪಾಸಣೆಯನ್ನು ಕಾದಿರಿಸಲು […]