ಸಲ್ಮಾರ್ ಸ್ಪೋರ್ಟ್ಸ್ ಕ್ಲಬ್ ನಿಂದ 2021ರ ಚಂದದ ಶಾರದೆ ಪುರಸ್ಕಾರ ಪ್ರದಾನ

ಉಡುಪಿ: ಸಲ್ಮಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2021ರ ಚಂದದ ಶಾರದೆ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು. ಸಾಧಕರಾದ ಬಿ.ಜೆ. ರಾಜಶೇಖರ್ ಕುಬೇರ, ನವೀನ್ ಪಾಂಡೇಶ್ವರ, ಮಹೇಶ್ ಬಾಯಾರ್, ಗಣೇಶ್ ಗಂಪ್ಲಜೆ, ಕುಮಾರ್ ಆಚಾರ್ ಹಾಗೂ ಶ್ರೀನಿವಾಸ್ ಪ್ರಭು ಅವರಿಗೆ ಚಂದದ ಶಾರದೆ ಪುರಸ್ಕಾರ ಪ್ರದಾನ ಮಾಡಲಾಯಿತು.

ಉಡುಪಿ: ಪಾದಾಚಾರಿ ಮಾರ್ಗದಲ್ಲಿ ಕಾರು, ಬೈಕ್ ಗಳ ದರ್ಬಾರ್; ಜನರು ನಡು ರಸ್ತೆಯಲ್ಲೇ ನಡೆದಾಡ ಬೇಕಾದ ದುಸ್ಥಿತಿ.!!

ಉಡುಪಿ: ನಗರಸಭೆ ಕಚೇರಿ ಮುಂಭಾಗದಲ್ಲಿ ಹಾದುಹೋಗುವ ಕವಿ ಮುದ್ದಣ ಮಾರ್ಗ ರಸ್ತೆಯ ಪಾದಾಚಾರಿ ರಸ್ತೆಯಲ್ಲಿ ವಾಹನಗಳ ದರ್ಬಾರ್ ನಡೆಯುತ್ತಿದೆ. ಅಂಗಡಿ, ಗೂಡಾಂಗಡಿ ಮಾಲೀಕರು ಪಾದಾಚಾರಿ ರಸ್ತೆಯನ್ನು‌ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಪಾದಾಚಾರಿಗಳು ನಡು ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಪಾದಚಾರಿಗಳ ಸುಗಮ ನಡಿಗೆಗೆ ತೊಂದರೆಯಾಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಪಾದಾಚಾರಿಗಳು ಸಂಚರಿಸಬೇಕಾದರೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸವಂತಾಗಿದೆ. ಹೀಗಾಗಿ ನಗರಸಭೆ ಅಧಿಕಾರಿಗಳು ಕೂಡಲೇ […]

ಉಡುಪಿ: ಪುನೀತ್ ರಾಜ್ ಕುಮಾರ್ ಗೆ ಭಾವಪೂರ್ಣ ಶ್ರದ್ಧಾಂಜಲಿ

ಉಡುಪಿ: ಡಾ. ರಾಜ್ ಕುಮಾರ್ ಅಭಿಮಾನ ಬಳಗ ಹಾಗೂ ಪುನೀತ್ ರಾಜ್ ಕುಮಾರ್ ಬಳಗದ ವತಿಯಿಂದ ಅಗಲಿರುವ ಚಿತ್ರನಟ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಮಾರುಥಿ ವೀಥಿಕಾದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಒಳಕಾಡು ನಿತ್ಯಾನಂದ, ಕೊಟೆಕ್ ಮಹೇಂದ್ರ ಬ್ಯಾಂಕಿನ ಪ್ರಬಂಧಕ ಶ್ರೀನಿಧಿ ಮತ್ತು ಸಿಬ್ಬಂದಿ, ಸಾಮಾಜಿಕ ಮುಂದಾಳು ಕೆ.ಬಾಲಗಂಗಾಧರ ರಾವ್, ಪ್ರಸಾದ್ ಶೆಟ್ಟಿ, ಸುನಿಲ್ ಶೇಟ್, ಮೈತ್ರಿ ಮಹಮದ್, ಮಿತ್ರ ನರ್ಸಿಂಗ್ ಸ್ಕೂಲಿನ ಪ್ರಾಂಶುಪಾಲೆ […]

ಕುಂದಾಪುರಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟ ಗಿರಿಜಾ ಹೆಲ್ತ್ ಕೇರ್ ಸಂಸ್ಥೆ

ಕುಂದಾಪುರ: ಕರಾವಳಿಯಾದ್ಯಂತ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಪರಿಕರಗಳಿಗೆ ಹೆಸರುವಾಸಿಯಾಗಿರುವ ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ಮೂರನೇ ಅತೀದೊಡ್ಡ ಶೋರೂಮ್ “ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಆ್ಯಂಡ್ ಮೆಡಿಕೇರ್ ಪಾಲಿಕ್ಲಿನಿಕ್” ಇದೇ ನ.14ರಂದು ಸಂಜೆ 5ಗಂಟೆಗೆ ಕುಂದಾಪುರ ಮುಖ್ಯ ರಸ್ತೆಯ ಹೋಟೆಲ್ ಪಾರಿಜಾತ ಎದುರಿನ ಅಥರ್ವ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭದ ಅಂಗವಾಗಿ ಕುಂದಗನ್ನಡದ ರಾಯಭಾರಿ, ಹಾಸ್ಯ ಭಾಷಣ ಮಾಂತ್ರಿಕ ಮನು ಹಂದಾಡಿ ಅವರಿಂದ “ನಗೆಹಬ್ಬ” ಕಾರ್ಯಕ್ರಮ ನಡೆಯಲಿದೆ. ವಿಶೇಷ ಸೌಲಭ್ಯಗಳು: […]

ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ

  ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಹರಿಯಾಣ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇಕಡಾ 75ರಷ್ಟು ಮೀಸಲಾತಿ ನೀಡುವ ಕುರಿತಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. 50 ಸಾವಿರ ರೂಪಾಯಿಗಿಂತ ಕಡಿಮೆ ವೇತನ ಇರುವ ಹುದ್ದೆಗಳಿಗೆ ಇದು ಅನ್ವಯವಾಗಲಿದ್ದು, ಜನವರಿ 15ರಿಂದ ಕಾನೂನು ಜಾರಿಯಾಗಲಿದೆ. ಇನ್ನು ಹರಿಯಾಣ ಸರ್ಕಾರ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು 2020ರ ನವೆಂಬರ್​ನಲ್ಲಿ ಅಂಗೀಕರಿಸಿ ಈಗ ಸರ್ಕಾರ ಶೇ.75ರ ಮೀಸಲಾತಿ ನಿರ್ಧಾರಕ್ಕೆ ಬಂದಿದೆ.