ಮಂಗಳೂರು- ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನ. 10ರಿಂದ ಮಂಗಳೂರಿನಿಂದ ಮಂತ್ರಾಲಯಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಲಿದೆ. ಮಂಗಳೂರಿನಿಂದ-ಉಡುಪಿ-ಕುಂದಾಪುರ-ಅಂಪಾರು-ಸಿದ್ದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಹೊನ್ನಾಳಿ-ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ-ಹೊಸಪೇಟೆ-ಕುಡುತಿನಿ-ಬಳ್ಳಾರಿ-ಆಲೂರು-ಅದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಹಾಗೂ ಮಂತ್ರಾಲಯದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಈ ಬಸ್ ಕಾರ್ಯಾಚರಣೆ ಮಾಡಲಿದೆ. ಈ ಬಸ್ಸು ಮಂಗಳೂರು ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಮಂತ್ರಾಲಯಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ಮಂತ್ರಾಲಯದಿಂದ ಸಂಜೆ 6.30 ಕ್ಕೆ ಹೊರಟು ಮರುದಿನ ಬೆಳಗ್ಗೆ 9ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿ […]

ಉಡುಪಿ: ಮತದಾರರ ಪಟ್ಟಿಯ ಪರಿಷ್ಕರಣೆ; ಹೆಸರು ಸೇರ್ಪಡೆ, ತೆಗೆದುಹಾಕಲು, ದೋಷ ಸರಿಪಡಿಸಲು ಅವಕಾಶ

ಉಡುಪಿ: ಭಾರತ ಚುನಾವಣಾ ಆಯೋಗವು ಜನವರಿ 1, 2022ನ್ನು ಅರ್ಹತಾ ದಿನವಾಗಿಟ್ಟುಕೊಂಡು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಮಾಡಲಾಗುತ್ತಿದ್ದು, ನವೆಂಬರ್ 8 ರಂದು ಕರಡು ಮತದಾರರ ಪಟ್ಟಿ ಪ್ರಕಟ, ನವೆಂಬರ್ 8 ರಿಂದ ಡಿಸೆಂಬರ್ 8 ರ ವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 7 ,14, 21 ಮತ್ತು 28 ರಂದು ವಿಶೇಷ ನೊಂದಣಿ ಕಾರ್ಯಕ್ರಮ, ಡಿಸೆಂಬರ್ 27 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ 13-1-2022 […]

ಉಡುಪಿ: ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು ( ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸಲಿಚ್ಚಿಸುವ 21 ರಿಂದ 35 ವಯೋಮಿತಿಯೊಳಗಿನ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ತೇರ್ಗಡೆ ಹೊಂದಿದ ಆಸಕ್ತ ಯುವಕ / ಯುವತಿಯರು ತಮ್ಮ ಸ್ವ ವಿವರಗಳೊಂದಿಗೆ ಜಿಲ್ಲಾ ಯುವ ಸಬಲೀಕರಣ […]