ಉಡುಪಿ: ನಾಳೆಯಿಂದ (ನ.8) ಅಂಗನವಾಡಿಗಳಲ್ಲಿ ಕೇಳಲಿದೆ ಚಿಣ್ಣರ ಕಲರವ..!!

ಕೋವಿಡ್ 19 ಕಾರಣದಿಂದ ಸುಮಾರು 1.5 ವರ್ಷದಿಂದ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳ ನಗುವಿನ ಕಲರವ ನಾಳೆಯಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳ ದ ಒಟ್ಟು 4 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವ್ಯಾಪ್ತಿಯ 1191 ಅಂಗನವಾಡಿಗಳನ್ನು ಈಗಾಗಲೇ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಕೇಂದ್ರಗಳ ಒಳ ಮತ್ತು ಹೊರ ಆವರಣಗಳನ್ನು,ಕಿಟಕಿ,ಬಾಗಿಲು ,ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ, ಕೇಂದ್ರದಲ್ಲಿ ಮಕ್ಕಳು […]

ಶೀಘ್ರದಲ್ಲೇ ಮಕ್ಕಳಿಗೂ ಕೋವಿಡ್ ಲಸಿಕೆ: 1 ಕೋಟಿ ಝೈಕೋವ್-ಡಿ’ 1 ಖರೀದಿಸಲು ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಭಾರತದಲ್ಲಿ ಮಕ್ಕಳಿಗೂ ಶೀಘ್ರದಲ್ಲೇ ಕೊರೋನಾ ಲಸಿಕೆ ಸಿಗುವ ಸಾಧ್ಯತೆ ಇದೆ. 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೂರು ಡೋಸ್ ಲಸಿಕೆ ‘ಝೈಕೋವ್-ಡಿ’ 1 ಕೋಟಿ ಡೋಸ್‌ಗಳನ್ನು ಅಹಮದಾಬಾದ್ ಮೂಲದ ಕಂಪನಿ ಝೈಡಸ್ ಕ್ಯಾಡಿಲಾದಿಂದ ಖರೀದಿಸಲು ಸರ್ಕಾರ ಆದೇಶಿಸಿದೆ. ಲಸಿಕೆ ಡಿಎನ್‌ಎ ಆಧಾರಿತ ಮತ್ತು ಸೂಜಿ ರಹಿತ Zydus Cadila ತಿಂಗಳಿಗೆ 10 ಮಿಲಿಯನ್ ಡೋಸ್ Zycov-D ಅನ್ನು ಒದಗಿಸುವ ಸ್ಥಿತಿಯಲ್ಲಿದೆ ಎಂದು ಕಂಪನಿಯ ಅಧಿಕಾರಿಗಳು ಸಚಿವಾಲಯಕ್ಕೆ ತಿಳಿಸಿದ್ದಾರೆ. 28 […]

ಅಫ್ಗನ್ ವಿರುದ್ಧ ಕಿವೀಸ್‌ಗೆ ಜಯ; ಭಾರತದ ಟಿ20 ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರು

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಅಬುಧಾಬಿಯಲ್ಲಿ ನಡೆದ ಸೂಪರ್-12 ಹಂತದ ಬಿ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆ ಮೂಲಕ ಭಾರತದ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ. ಭಾರತ ಸೆಮಿಫೈನಲ್ ಪ್ರವೇಶಿಸಲು ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅಫ್ಗನ್ ಗೆಲುವು ದಾಖಲಿಸಬೇಕಿತ್ತು. ಆದರೆ ಅಫ್ಗನ್ ಸೋಲುವುದರೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆ ಹೊಂದುವಲ್ಲಿ ಭಾರತ ವಿಫಲವಾಗಿದೆ. ಅಫ್ಗನ್ ಮೊದಲು ಬ್ಯಾಟ್ ಮಾಡಿ 125 ರನ್ […]

ಕಾಪು ಕಳತ್ತೂರಿನ ಸೇನಾ ಯೋಧ ಜಾರ್ಖಂಡ್ ನಲ್ಲಿ ಹೃದಯಾಘಾತದಿಂದ ನಿಧನ

ಕಾಪು: ತಾಲೂಕಿನ ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ ನವೀನ್ ಕುಮಾರ್ ಕರ್ಕಡ (50) ಕರ್ತವ್ಯ ನಿರತ ಸೇನಾ ಯೋಧ ಜಾರ್ಖಂಡ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಸಿಐಎಸ್ಎಫ್ ಯೋಧನಾಗಿ ಕಳೆದ 29 ವರ್ಷಗಳಿಂದ ಸೇನಾ ಕರ್ತವ್ಯ ನಿರತರಾಗಿದ್ದ ಅವರು ಮುಂದಿನ ವರ್ಷದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು. ಬಿಹಾರ, ರಾಂಚಿ, ದೆಹಲಿ, ಮೈಸೂರು, ನಾಗ್ಪುರ ಸಹಿತ ದೇಶದ ವಿವಿಧೆಡೆಗಳ ಸೇನಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು […]

ಬೆಳ್ತಂಗಡಿ: ಐದು ಗ್ರೆನೇಡ್‌ ಪತ್ತೆ; ಆತಂಕ ಸೃಷ್ಟಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬೇಲಿಯ ಬಳಿ ಐದು ಗ್ರೆನೇಡ್‌ಗಳು ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ನಿವೃತ್ತ ಸೇನಾಧಿಕಾರಿ ಜಯಕುಮಾರ್ ಪೂಜಾರಿ ಅವರು ಉಪ್ಪಿನಂಗಡಿಯಿಂದ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗ್ರೆನೇಡ್‌ಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಗ್ರೆನೇಡ್ ಹಾಗೂ ಉಳಿದ ನಾಲ್ಕು ಗ್ರೆನೇಡ್‌ಗಳು ನೆಲದ ಮೇಲೆ ಬಿದ್ದಿದ್ದವು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅವುಗಳನ್ನು ಸುರಕ್ಷಿತವಾಗಿ ತಮ್ಮ ನಿವಾಸಕ್ಕೆ ತೆಗೆದುಕೊಂಡು ಹೋದ ಜಯಕುಮಾರ್ ಪೂಜಾರಿ ಅವರು ನಂತರ […]