ರವೀಂದ್ರ ಶೆಟ್ಟಿ ಬಜಗೋಳಿ ಅವರಿಂದ “ಗೋ ದಾನ”: ಬಡವರಿಗೆ ಆರ್ಥಿಕ‌ ಶಕ್ತಿ ತುಂಬುವ ನಿಟ್ಟಿನಲ್ಲಿ ವಿನೂತನ ಹೆಜ್ಜೆ

ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ಇತರ ಹಿಂದೂ ಮುಖಂಡರಿಗೆ ಮಾದರಿಯಾಗುವಂತಹ ಕಾರ್ಯಕ್ರಮ ಬಜಗೋಳಿಯಲ್ಲಿ ನಡೆಯಿತು. ಸಂಘದ ಹಿರಿಯ ಮುಖಂಡರಾದ ಗುಣವಂತೇಶ್ ಭಟ್, ಊರಿನ ಗಣ್ಯರ ಮತ್ತು ಸಂಘ ಪರಿವಾರದ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂತು. ಕರ್ನಾಟಕ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅವರು ತಮ್ಮ ಸ್ವಗೃಹದಲ್ಲಿ ಗೋಪೂಜೆ ನೆರವೇರಿಸಿದ ನಂತರ ಅಶಕ್ತ ಹಿಂದೂ ಕುಟುಂಬಗಳ ಮನೆ ಮನೆಗೆ ತೆರಳಿ […]

ಕಾಪು: ಆ್ಯಂಬುಲೆನ್ಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

ಕಾಪು: ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಪುವಿನ ಕೋತಲ್ ಕಟ್ಟೆಯ‌ ರಾ.ಹೆ. 66ರಲ್ಲಿ‌‌ ಇಂದು ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಉಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ ಗೋವಿಂದ ಪೂಜಾರಿ (65) ಎಂದು ಗುರುತಿಸಲಾಗಿದೆ. ಗೋವಿಂದ ಪೂಜಾರಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಅವರಿಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ […]

ಉಡುಪಿ: ಸುಧೀಂದ್ರ ಗೋಲ್ಡ್ ಫೈನಾನ್ಸ್ ನ ನೂತನ ಶಾಖೆ ಉದ್ಘಾಟನೆ

ಉಡುಪಿ: ಕಳೆದ 27 ವರ್ಷಗಳಿಂದ ಜನರ ಸೇವೆಯಲ್ಲಿರುವ ಪ್ರಸಿದ್ಧ ಸುಧೀಂದ್ರ ಗೋಲ್ಡ್ ಫೈನಾನ್ಸ್ ನ ನೂತನ ಶಾಖೆ ಉಡುಪಿ ಗೀತಾಂಜಲಿ ಸಿಲ್ಕ್ ರೋಡ್ ಸಾಯಿರಾಧಾ ಟಿವಿಎಸ್ ಶೋರೂಮ್ ಹತ್ತಿರದ opale enclave ನಲ್ಲಿ ಉದ್ಘಾಟನೆಗೊಂಡಿತು. ಮಂಗಳೂರಿನ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಮಧುಕರ್ ಭಾಗವತ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವ್ಯವಹಾರ ಮಾಡುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಂಡವಿ ಡೆವಲಪರ್ಸ್ ನ jason dias, ಸಿಂಡಿಕೇಟ್ ಬ್ಯಾಂಕ್ ನ […]

ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ, ಪಬ್ಬಮಾಮ್ ಖ್ಯಾತಿಯ ಪ್ರಭಾಕರ್ ಕಾಮತ್ ಇನ್ನಿಲ್ಲ

ಮಂಗಳೂರು: ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ, ಪಬ್ಬಮಾಮ್ ಖ್ಯಾತಿಯ ಪ್ರಭಾಕರ್ ಕಾಮತ್ (79) ಅವರು ಇಂದು ನಿಧನ ಹೊಂದಿದರು. ಅವರಿಗೆ ಅ.28ರಂದು ಮಂಗಳೂರಿನ ಭಾರತ್ ಮಾಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದ್ದು, ಇದರಿಂದ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಇವರು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿ 1974ರಲ್ಲಿ ಐಡಿಯಲ್ ಐಸ್‌ ಕ್ರೀಮ್‌ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇಂದು ಐಡಿಯಲ್ ಐಸ್‌ […]

ಕಾಪು: ಹಾವು ಕಚ್ಚಿ ಯುವಕ ಮೃತ್ಯು

ಕಾಪು: ಬಲೀಂದ್ರ ಪೂಜೆಯ ಪ್ರಯುಕ್ತ ಗದ್ದೆಯಲ್ಲಿ ಪೂಜೆ ನಡೆಸಲು ಹೋಗಿದ್ದ ವೇಳೆ ಹಾವು ಕಚ್ಚಿ ಯುವಕ ಮೃತಪಟ್ಟ ಘಟನೆ ಕಾಪುವಿನಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಬಲೀಂದ್ರ ಪೂಜೆಗಾಗಿ ಗದ್ದೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರಿಗೆ ವಿಷ ಜಂತು ಕಚ್ಚಿದ್ದು, ಮನೆಯವರು ಕೂಡಲೇ ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಇದರಿಂದ ಚೇತರಿಸಿಕೊಂಡಿದ್ದ ರೋಹಿತ್, ಶುಕ್ರವಾರ ಸಂಜೆ […]