ದಲಿತ ಮಹಿಳೆಯ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಉಡುಪಿಯ ಕೊರಗರ ಕಾಲೊನಿಯಲ್ಲಿ ಗೋಪೂಜೆ ಮಾಡಿದರು. ಉಡುಪಿ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲೊನಿಯಲ್ಲಿ ದಲಿತ ವಿಧವೆ ಕಮಲಮ್ಮ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 50ಕ್ಕೂ ಹೆಚ್ಚು ಶುದ್ಧ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ. ಯಾವುದೇ ಲಾಭದ ಉದ್ದೇಶವಿಲ್ಲದೇ ನಡೆಸುತ್ತಿರುವ ಈ ಗೋಶಾಲೆಗೆ ದೀಪಾವಳಿ ಪ್ರಯುಕ್ತ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೋಪೂಜೆ ನೆರವೇರಿಸಿದರು. ಗೋವಿನ ಪಾದಕ್ಕೆ ನೀರೆರೆದು, ಹಣೆಗೆ ತಿಲಕವಿಟ್ಟು, ಮೈಮೇಲೆ […]
ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕರ್ಪ್ಯೂ ಆದೇಶ ಹಿಂಪಡೆದ ಸರ್ಕಾರ
ಬೆಂಗಳೂರು: ಕೋವಿಡ್ 19 ಸೋಂಕು ತಡೆ ಹಿನ್ನೆಲೆ ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕರ್ಪ್ಯೂ ಆದೇಶವನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿಷೇಧ ಜಾರಿಯಲ್ಲಿತ್ತು. ಅಕ್ಟೋಬರ್ 25ಕ್ಕೆ ನೈಟ್ ಕರ್ಫ್ಯೂಗೆ ಸಂಬಂಧಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನೈಟ್ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆದು ಹಾಕಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ನೂತನ ಆದೇಶ ಹೊರಡಿಸಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಗೆ ಬ್ರಿಟನ್‌ನ ಆಶ್ಡೆನ್ ಪ್ರಶಸ್ತಿ
ಮಣಿಪಾಲ: ಸುಸ್ಥಿರ ಶಕ್ತಿಯಕೌಶಲ ವೃದ್ಧಿಯ ಸಾಧನೆಗಾಗಿ ದೊರೆಯುವ ಜಾಗತಿಕ ಮಟ್ಟದ ಆಶ್ಡೆನ್ ಪ್ರಶಸ್ತಿಗೆ ಈ ಬಾರಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಆಯ್ಕೆಯಾಗಿದೆ. ನವೆಂಬರ್ 4ರಂದು ರಾತ್ರಿ ಲಂಡನ್ ನ ಗ್ಲಾಸ್ಗೋದಲ್ಲಿ ನಡೆದ COP 26 ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿಯ ಮೊತ್ತವು 20 ಸಾವಿರ ಪೌಂಡ್ ಗಳನ್ನು ಒಳಗೊಂಡಿದೆ. ಜೊತೆಗೆ ಜಗತ್ತಿನ ವಿವಿಧೆಡೆ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳ ಜೊತೆಗೆ ಮಾಹಿತಿ ವಿನಿಮಯ ಮಾಡುವ ಅವಕಾಶ, ಸಹಭಾಗಿತ್ವದ ಅವಕಾಶಗಳು ಬಿವಿಟಿಗೆ […]
ಉಡುಪಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ದೀಪಾವಳಿ ಆಚರಣೆ
ಉಡುಪಿ: ಉಡುಪಿ ನಗರದ ಸಮೀಪ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲೊನಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಆಶ್ರಯದಲ್ಲಿ ವಿಶೇಷ ರೀತಿಯಲ್ಲಿ ದೀಪಾವಳಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾಲೊನಿಯ ಹತ್ತಾರು ಮನೆಗಳಿಗೆ ಸ್ವಯಂ ತೆರಳಿ ಹಣತೆ ದೀಪ ಬೆಳಗಿ ಮನೆಯ ಸದಸ್ಯರ ಜೊತೆ ಉಭಯ ಕುಶಲೋಪರಿ ನಡೆಸಿ ಬೆಳಕಿನ ಹಬ್ಬದ ಆಶೀರ್ವಾದಗೈದರು. ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೊನಿ ನಿವಾಸಿಗಳು ಅರ್ಪಿಸಿದ ಭಕ್ತಿ […]
ನೀಲಾವರ ಗೋಶಾಲೆಯಲ್ಲಿ ಜಿಪಂ ಸಿಇಒರಿಂದ ಗೋಪೂಜೆ
ಬ್ರಹ್ಮಾವರ: ದೀಪಾವಳಿ ಪ್ರಯುಕ್ತ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ವೈ ನವೀನ್ ಭಟ್ ಗುರುವಾರದಂದು ನೀಲಾವರ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು. ಪಶುಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕರಾದ ಡಾ ಸರ್ವೋತ್ತಮ ಉಡುಪ ಮತ್ತು ಡಾ ಮಹೇಶ್ ಶೆಟ್ಟಿ , ಉಪನಿರ್ದೇಶಕ ಡಾ ಶಂಕರ ಶೆಟ್ಟಿ , ಇಲಾಖೆ ಅಪರ ಉಪನಿರ್ದೇಶಕ ಡಾ ಸಂದೀಪ್ ಶೆಟ್ಟಿ ಬ್ರಹ್ಮಾವರ ತಾಲೂಕು ಸಹಾಯಕ ನಿರ್ದೇಶಕ ಡಾ ಅರುಣ್ ಕುಮಾರ್ ಶೆಟ್ಟಿ , ಡಾ ಬ್ರಹ್ಮಾವರ ತಾಲೂಕು ಪಶುವೈದ್ಯಾಧಿಕಾರಿಗಳು ಡಾ […]