ರಾಷ್ಟ್ರಮಟ್ಟದ “ನೀಟ್” ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆಯಿದು

  ಕಾರ್ಕಳ: ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ನೀಡುವ ರಾಷ್ಟ್ರಮಟ್ಟದ ನೀಟ್-2021 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಕ್ಷಿತ್ ಪಿ.ಎಚ್ 685  ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 640 ನೇ ರ‍್ಯಾಂಕ್ ಗಳಿಸಿದ್ದಾರೆ. ಜೊತೆಗೆ ಸುಪ್ರೀತ್ ಗೌಡ 675, ಪುನೀತ್.ಸಿ.ವಿ.670, ಹರ್ಷಿತ್ ಕುಮಾರ್ ಶೆಟ್ಟಿ 655, ಪ್ರಥಮೇಶ್ ಚೌಗುಲೆ 650, ದರ್ಶನ್ ಬಿ 649 ಶ್ರೇಯಸ್ ಕೆ 646, ಅಧೀಶ್ ಆರ್ 645, ಸಾದ್ವಿನ್ ಕೆ.ವಿ 640, ಪ್ರಾಪ್ತಿ ವಿ […]

ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದಾಗಿ ಘೋಷಿಸಿದ ಯುವರಾಜ್ ಸಿಂಗ್..!!

ದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ನಿವೃತ್ತಿ ಹಿಂಪಡೆದು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಃ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ. ಜನರ ಬೇಡಿಕೆಯ ಮೇರೆಗೆ ನಾನು ಫೆಬ್ರುವರಿಯಲ್ಲಿ ಮತ್ತೆ ಪಿಚ್‌ಗೆ ಮರಳಲಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಕೋರಿಕೆಗೆ ಧನ್ಯವಾದಗಳು. ಭಾರತವನ್ನು ಬೆಂಬಲಿಸುತ್ತಿರಿ. ಇದು ನಮ್ಮ ತಂಡ. ನಿಜವಾದ ಅಭಿಮಾನಿಗಳು ಕಠಿಣ ಸಮಯದಲ್ಲೂ ಬೆಂಬಲವಾಗಿರುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ. ಯುವರಾಜ್ ಸಿಂಗ್ ಭಾರತಕ್ಕಾಗಿ […]

ಉಡುಪಿ: ಕುಸಿದುಬಿದ್ದು ಬ್ಯಾಂಕ್ ಉದ್ಯೋಗಿ ಮೃತ್ಯು

ಉಡುಪಿ: ಬ್ಯಾಂಕ್ ಉದ್ಯೋಗಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿಯ ಬೈಲಕೆರೆಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ಮೃತರನ್ನು ಗುರುಪ್ರಸಾದ್ ರಾವ್ (43) ಎಂದು ಗುರುತಿಸಲಾಗಿದೆ. ಗುರುಪ್ರಸಾದ್ ಬ್ಯಾಂಕ್ ಉದ್ಯೋಗಿಯಾಗಿದ್ದು, ರಾತ್ರಿ ವೇಳೆ ಗಂಟಲು ಉರಿ ಕಾಣಿಸಿಕೊಂಡಿತ್ತು. ಬೆಳಿಗ್ಗೆ 3 ಗಂಟೆ ಸುಮಾರಿಗೆ ಫ್ಲ್ಯಾಟಿನಲ್ಲಿ ಹಠಾತ್ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಗುರುಪ್ರಸಾದ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅವರು ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದು ಶಂಕಿಸಲಾಗಿದೆ. […]

2021-2022ನೇ ಸಾಲಿನ ಕಂಬಳ ಋತುವಿನ ಅಧಿಕೃತ ವೇಳಾಪಟ್ಟಿ ಬಿಡುಗಡೆ

ಮಂಗಳೂರು: ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲಾ 2021-2022 ನೇ ಸಾಲಿನಲ್ಲಿ ನಡೆಯುವ ಕಂಬಳ ಋತುವಿನ ಅಧಿಕೃತ ವೇಳಾಪಟ್ಟಿಯನ್ನು ಕಂಬಳ ಸಮಿತಿ ಬಿಡುಗಡೆಗೊಳಿಸಿದೆ. ಕಂಬಳ ನಡೆಯುವ ಸ್ಥಳ ಹಾಗೂ ದಿನಾಂಕ ಈ ಕೆಳಕಂಡಂತಿದೆ.

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ₹1.45 ಕೋಟಿ ಲಾಭ; ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 20 ನೇ ವಾರ್ಷಿಕ ಮಹಾಸಭೆಯು ಮಣಿಪಾಲದ ನರಸಿಂಗೆ ಶ್ರೀ ನರಸಿಂಹ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಜರಗಿತು. 2020-21 ರ ಸಾಲಿನ ಅಂತ್ಯಕ್ಕೆ ಪಾಲು ಬಂಡವಾಳ ರೂ 1.55 ಕೋಟಿ,ಠೇವಣಿ ರೂ 73.30 ಕೋಟಿ ಸಾಲಗಳು ರೂ 52.53 ಕೋಟಿ ಒಟ್ಟು ವ್ಯವಹಾರ 260 ಕೋಟಿ ನಡೆಸಿ ರೂ.1.45 ಕೋಟಿ ನಿವ್ವಳ ಲಾಭ ಗಳಿಸಿ, ಶೇ 10% ಲಾಭಾಂಶ […]