ಮಡಿಕೇರಿ: ಒಂದೇ ಶಾಲೆ 32 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢ; ಶಾಲೆ ಸೀಲ್ ಡೌನ್
ಮಡಿಕೇರಿ: ಇಲ್ಲಿನ ಗಾಳಿಬೀಡು ಗ್ರಾಮದ ಜವಾಹರ್ ನವೋದಯ ವಿದ್ಯಾಲಯದ 32 ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾವುದೇ ಗಂಭೀರ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಗಾಳಿಬೀಡು ಅವರು ಗುರುವಾರ ಶಾಲಾ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಕೆಲ ವಿದ್ಯಾರ್ಥಿಗಳಿಗೆ ಒಂದು ವಾರದಿಂದ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿದ್ದರಿಂದ ಅವರಲ್ಲಿ 270 ಮಂದಿಯನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 22 […]
ಮಣಿಪಾಲ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ
ಮಣಿಪಾಲ: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಘಟನೆ ಇಂದ್ರಾಳಿ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ ಆರೋಪಿ. ಈತ ಯುವತಿಯ ಸ್ನೇಹಿತ ಎಂದು ತಿಳಿದುಬಂದಿದೆ. ಈತ ಅ.16 ರಂದು ಇಂದ್ರಾಳಿಯ ಅಪಾರ್ಟ್ಮೆಂಟ್ ನಲ್ಲಿ ಕುಡಿದ ನಶೆಯಲ್ಲಿ ಗೆಳತಿಯ ಮೇಲೆ ಅತ್ಯಾಚಾರ ನಡೆಸಿದ್ದನು. ಈ ಕುರಿತು ಸಂತ್ರಸ್ತೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆಕೆಯ ದೂರಿನಂತೆ ಮಣಿಪಾಲ ಪೋಲಿಸರು ಆರ್ಯನ್ ಚಂದಾವನಿನನ್ನು ಬಂಧಿಸಿ […]
ದುಬೈನಲ್ಲಿ ಅಪಾರ ಜನಮನ್ನಣೆ ಗಳಿಸಿರುವ “ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್” ಇದೀಗ ಭಾರತಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ..!!
ಉಡುಪಿ: ಅರಬ್ ಕಂಟ್ರಿಯಲ್ಲಿ ಸಾಕಷ್ಟು ಜನಮನ್ನಣೆ ಪಡೆದಿರುವ “ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್” ಇದೀಗ ಉಡುಪಿಯ ಬ್ರಹ್ಮಾವರದಲ್ಲಿ ಆರಂಭವಾಗಲಿದ್ದು, ಆ ಮೂಲಕ ಭಾರತದಲ್ಲಿ ತನ್ನ ಮೊದಲ ಶಾಖೆಯನ್ನು ಹೊಂದಲಿದೆ. ಆಧುನಿಕ ಸೌಲಭ್ಯ, ಸುಸಜ್ಜಿತ ಸೌಕರ್ಯಗಳಿಂದ ಕೂಡಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್, ಉತ್ಕೃಷ್ಟ ಗುಣಮಟ್ಟದ ವೆರೈಟಿ ಫುಡ್ ಗಳಿಂದ ದುಬೈನಲ್ಲಿ ಸಾಕಷ್ಟು ಫೇಮಸ್ ಆಗಿದೆ. ಇದೀಗ ಕರಾವಳಿಯ ಜನತೆ ತನ್ನ ಸ್ವಾದಿಷ್ಟಕರ ಫುಡ್ ಐಟಂಗಳನ್ನು ಉಣಬಡಿಸಲು ಸಜ್ಜಾಗಿದೆ. ಇಂದಿನಿಂದ (ಅ.28) ಉಡುಪಿಯ ಬ್ರಹ್ಮಾವರದ ಫಾರ್ಚೂನ್ ಪ್ಲಾಝಾ ಹೋಟೆಲ್ […]
ಉಡುಪಿ: ಹಿರಿಯ ವಕೀಲ ಅಲೆವೂರು ಶ್ರೀಪತಿ ಆಚಾರ್ಯ ನಿಧನ
ಉಡುಪಿ: ಉಡುಪಿಯ ಹಿರಿಯ ವಕೀಲ ಅಲೆವೂರು ಶ್ರೀಪತಿ ಆಚಾರ್ಯ (83) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬುಧವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.