ದೇಶ ಸಮರ್ಥ ನಾಯಕನ ಆಡಳಿತದಲ್ಲಿ ಸುಭದ್ರವಾಗಿದೆ: ಕುಯಿಲಾಡಿ ಸುರೇಶ್ ನಾಯಕ್

ಹಿರಿಯಡಕ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ವಿಶ್ವದಲ್ಲೇ ಮಾದರಿಯಾಗಿರುವ ಉಚಿತ ಆರೋಗ್ಯ ಸೇವೆ, ರೈತ ಸಮ್ಮಾನ್ ಯೋಜನೆ ಮೂಲಕ ದೇಶದ ರೈತರ ಖಾತೆಗೆ ನೇರ ನಗದು ವರ್ಗಾವಣೆ ಸಹಿತ ಹಲವಾರು ಜನಪರ ಯೋಜನೆಗಳ ಜೊತೆಗೆ ದೇಶದ ಸಮಗ್ರತೆ ಮತ್ತು ಅಖಂಡತೆಗೆ ವಿಶೇಷ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವವಂದ್ಯರೆನಿಸಿದ್ದಾರೆ. ಇಂದು ದೇಶ ಸಮರ್ಥ ನಾಯಕನ ಆಡಳಿತದಲ್ಲಿ ಸುಭದ್ರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಕಾಡಿ ಸುರೇಶ್ ನಾಯಕ್ ಹೇಳಿದರು. ಅವರು ಪ್ರಧಾನಿ ನರೇಂದ್ರ ಮೋದಿಯವರ […]

ಉಡುಪಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಮಾರ್ಚ್

ಉಡುಪಿ: ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅಸಂವಿಧಾನಿಕವಾಗಿದೆ. ಇದನ್ನು ವಿದ್ಯಾರ್ಥಿಗಳು ಒಪ್ಪಲು ಸಾಧ್ಯವಿಲ್ಲ. ಶೀಘ್ರ ಈ ನೀತಿಯನ್ನು ಹಿಂಪಡೆಯಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಗರದ ಬಿಗ್ ಬಝಾರ್ ಬಳಿಯಿಂದ ಕ್ಲಾಕ್ ಟವರ್ ವರೆಗೆ ವಿದ್ಯಾರ್ಥಿಗಳು ಮಾರ್ಚ್ ನಡೆಸಿ ಪ್ರತಿಭಟಿಸಿದರು. ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ […]

ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯ ತಂಡದ ಸಭೆ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರ ಸಭೆಯು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ವೀಣಾ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು. ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಣಿ ಸದಸ್ಯರಾದ ಭಾಗೀರತಿ ಮುರುಳಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ದೀಪಾವಳಿ ಸಂಭ್ರಮಾಚರಣೆ ಮತ್ತು ಗೋಪೂಜೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ನಲಿನಿ ಪ್ರದೀಪ್, ಮಾಲತಿ […]

ಶೀರೂರು ಜಂಬೆಟ್ಟು ಮೇಲ್ಮನೆಯ ನಾರಾಯಣ ಶೆಟ್ಟಿ ವಿಧಿವಶ

ಶೀರೂರು: ಶೀರೂರು ಜಂಬೆಟ್ಟು ಮೇಲ್ಮನೆಯ ನಾರಾಯಣ ಶೆಟ್ಟಿ (94) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹ ಕೆಂಜೂರುಮನೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು (ಬಿಜೆಪಿ ನಾಯಕಿ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಮನೆ ಮತ್ತು ರಾಜಶ್ರೀ ಪ್ರಕಾಶ ಶೆಟ್ಟಿ ) ಹಾಗೂ ಇಬ್ಬರು ಗಂಡು ಮಕ್ಕಳು ( ಅಶಿತ್ ಶೆಟ್ಟಿ ಮತ್ತು ಅಮರನಾಥ ಶೆಟ್ಟಿ )ಹಾಗೂ ಮೊಮ್ಮಕ್ಕಳು, ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರ ತುಂಬಾ ವೈಭವದಿಂದ ಇಂದು […]

ಉಡುಪಿ: ನಾಳೆ (ಅ.29) ಮಿಷನ್ ಆಸ್ಪತ್ರೆಯ ಕರುಣಾಲಯ ಘಟಕ ಉದ್ಘಾಟನೆ

ಉಡುಪಿ: ಉಡುಪಿ ಲೊಂಬಾರ್ಡ್ ಮೆಮೊರಿಯಲ್ (ಮಿಶನ್) ಆಸ್ಪತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಸ್ಥಾಪಿಸಲಾದ ನೂತನ ಜೆರಿಯಟ್ರಿಕ್ ನರ್ಸಿಂಗ್ ಕೇರ್ ಘಟಕ “ಕರುಣಾಲಯ” ಇದರ ಉದ್ಘಾಟನೆ ನಾಳೆ (ಅ.29) ಸಂಜೆ 4 ಗಂಟೆಗೆ ನಡೆಯಲಿದೆ. ಸಿಎಸ್ ಐ ಕೆಎಸ್ ಡಿ ಬಿಷಪ್ ಮೋಹನ್ ಮನೋರಾಜ್ ಅವರು ಕರುಣಾಲಯ ಘಟಕವನ್ನು ಉದ್ಘಾಟಿಸುವರು. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ‌ ಡಿಎಚ್ ಒ ಡಾ. ನಾಗಭೂಷಣ್ ಉಡುಪ, ಕೆಎಸ್ ಡಿ ಉಡುಪಿ ವಲಯ ಮುಖ್ಯಸ್ಥ ಐವನ್ ಡಿ. ಸೋನ್ಸ್, ಉಡುಪಿ […]