54ನೇ ವರ್ಷದ ಸಂಭ್ರಮದಲ್ಲಿ “ಉಡುಪಿ ರೋಯಲ್ ಬೇಕರಿ”

ಉಡುಪಿ: ಕಳೆದ ಐದು ದಶಕಗಳಿಂದ ಉಡುಪಿ ನಗರದ ಜನತೆಗೆ ಉತ್ಕೃಷ್ಟ ಗುಣಮಟ್ಟದ ಬೇಕರಿ ತಿನಿಸುಗಳನ್ನು ಉಣಬಡಿಸುತ್ತಿರುವ “ರೋಯಲ್ ಬೇಕರಿ” 54ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಗುಣಮಟ್ಟ ಹಾಗೂ ರುಚಿಯಲ್ಲಿ ರಾಜಿ ಮಾಡಿಕೊಳ್ಳದೆ, ಕಡಿಮೆ ದರದಲ್ಲಿ ವೆರೈಟಿ ಬೇಕರಿ ತಿನಿಸುಗಳನ್ನು ಗ್ರಾಹಕರಿಗೆ ಪೊರೈಸುವಲ್ಲಿ ರೋಯಲ್ ಬೇಕರಿ ಸೈ ಎನಿಸಿಕೊಂಡಿದೆ. ತನ್ನ ಸ್ವಾದಿಷ್ಟಕರ ತಿಂಡಿ ತಿನಿಸುಗಳ ಮೂಲಕ ಮನೆಮಾತಾಗಿದೆ. ಕೂಷ್ಮಾಂಡ ಹಲ್ವಾ, ಕೋಕನಟ್ ಬರ್ಫಿಗೆ ಫೇಮಸ್: ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ವಿಶ್ವೇಶ್ವರಯ್ಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ “ರೋಯಲ್ […]

ಉಡುಪಿ: ನಾಳೆ (ಅ.28) ಬಿಜೆಪಿ ಮಹಿಳಾ ಮೋರ್ಚಾದಿಂದ ಮಾತಾಡ್ ಮಾತಾಡ್ ಕನ್ನಡ ಗೀತಗಾಯನ ಕಾರ್ಯಕ್ರಮ

ಉಡುಪಿ: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಾಳೆ (ಅ. 28) ವಿಶ್ವದಾದ್ಯಂತ ಏಕಕಾಲದಲ್ಲಿ ನಡೆಯುವ ಲಕ್ಷ-ಲಕ್ಷ ಕಂಠಗಳ ಕನ್ನಡ ಗೀತಗಾಯನ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾವು ಕೈಜೋಡಿಸಿದೆ. ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಉಡುಪಿ ಬಿಜೆಪಿ ಕಚೇರಿಯಲ್ಲಿ ಏಕಕಾಲದಲ್ಲಿ “ಮಾತಾಡ್ ಮಾತಾಡ್ ಕನ್ನಡ” ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಜಿಲ್ಲಾ ಮಹಿಳಾ ಮೋರ್ಚಾದ […]

ಕಾರ್ಕಳ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶ್ರೇಯಾ ಪೂಜಾರಿ ನಿಧನ

ಕಾರ್ಕಳ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ಈದು ಗ್ರಾಮದ ಶ್ರೇಯಾ ಪೂಜಾರಿ (18) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದರು. ಶ್ರೇಯಾ ಈದು ಗ್ರಾಮದ ನಿವಾಸಿಗಳಾದ ಸಾಧು ಪೂಜಾರಿ ಮತ್ತು ಸುಮ ದಂಪತಿಯ ಪುತ್ರಿ. ಇವರು ಕಳೆದ 6 ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಕ್ಯಾನ್ಸರ್ ತಗುಲಿದ ಪ್ರಾಥಮಿಕ ಹಂತದಲ್ಲಿ ಸರ್ಜರಿ ‌ನಡೆಸಲಾಗಿತ್ತು. ಆದರೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.

ಜನಾರ್ದನ್ ಕೊಡವೂರು ಅವರಿಗೆ ಕರಾವಳಿ ಇ-ಧ್ವನಿ ಪುರಸ್ಕಾರ

ಉಡುಪಿ: ಇಡೀ ಕರುನಾಡಿನ ಜನತೆಯ ಕಣ್ಮಣಿಯಾಗಿ, ಕರಾವಳಿಯ ಘಟನೆಗಳ ಆಗುಹೋಗುಗಳ ಕೈಗನ್ನಡಿಯಾಗಿ, ಕುಸುಮದ ಪರಿಮಳದಂತೆ ಪರಿಪರಿಯಾಗಿ ಪಸರಿಸುವ ಸುದ್ದಿಯ ಸುಜಲೆಯನ್ನು ಹೊತ್ತು 24×7 ಎಂಬಂತೆ ವರುಷದುದ್ದಕ್ಕೂ ನಿಂತ ನೀರಾಗದೆ ಹರಿವ ಜಲಧಿಯಂತೆ ಕಲರವ ಹಬ್ಬಿಸುತ್ತ ಸಾಗುತ್ತಿರುವ ಡಿಜಿಟಲ್ ಮಾಧ್ಯಮವೊಂದರ ಸಾರಥ್ಯವನ್ನು ವಹಿಸಿಕೊಂಡು ಮುನ್ನಡೆಸುತ್ತಿರುವ ಉಡುಪಿಯ ಖ್ಯಾತ ಯುವ ಪತ್ರಕರ್ತ ಹಾಗೂ ಛಾಯಾಗ್ರಾಹಕ ಜನಾರ್ದನ್ ಕೊಡವೂರು. ಆ ಸುದ್ದಿಯ ಸೂರು ದೇಶ ವಿದೇಶಿಗರ ಗಮನ ಸೆಳೆಯುತ್ತಿರುವ ಡಿಜಿಟಲ್ ಮಾಧ್ಯಮ ಕರಾವಳಿ X ಪ್ರೆಸ್ . ಊರಿನ ಪ್ರಚಲಿತ ಪತ್ರಿಕೆಗಳ […]

ಉಡುಪಿ: ಕರ್ವಾಲು ತ್ಯಾಜ್ಯ ಘಟಕಕ್ಕೆ ತಜ್ಞರ ಭೇಟಿ

ಉಡುಪಿ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದ ಸೂಚನೆಯನ್ವಯ ಉಡುಪಿಯ ನೀಲಾವರ ಗೋಶಾಲೆಗೆ ಭೇಟಿ ನೀಡಲು ಬಂದಿದ್ದ ತಜ್ಞರು ಬುಧವಾರ ಉಡುಪಿ ನಗರ ಸಭೆಗೆ ಭೇಟಿ ನೀಡಿದರು. ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪ ಸೂರ್ ಅವರು ಶಾಸಕ ಕೆ ರಘುಪತಿ ಭಟ್ , ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ , ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ , ಆಯುಕ್ತ ಡಾ ಉದಯ ಶೆಟ್ಟಿ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಅವರೊಡನೆ […]