ಉಡುಪಿ: ನಾಗರಿಕ ಸಮಿತಿಗೆ ದೇಣಿಗೆ ಹಸ್ತಾಂತರ
ಉಡುಪಿ: ಕೇರಳ ಕಲ್ಚರಲ್ ಮತ್ತು ಸೋಶಿಯಲ್ ಸೆಂಟರ್ ಉಡುಪಿ ಇದರ ವತಿಯಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಾಮಾಜಿಕ ಸೇವಾಕಾರ್ಯಗಳಿಗೆ ವಿನಿಯೋಗಿಸಲು ಹತ್ತು ಸಾವಿರ ದೇಣಿಗೆಯನ್ನು ನೀಡಲಾಯಿತು. ಟ್ರಸ್ಟ್ ನ ಅಧ್ಯಕ್ಷರಾದ ಎಸ್ ಕುಮಾರ್ ಅವರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು ಅವರು ಉಪಸ್ಥಿತರಿದ್ದರು.
ಉಡುಪಿ: ಬಾರ್ ಶೌಚಾಲಯದಲ್ಲಿ ವ್ಯಕ್ತಿ ಮ್ಯತ್ಯು
ಉಡುಪಿ: ಬೀಡಿನಗುಡ್ಡೆ ಹೀರೆನ್ ಬಾರಿನ ಶೌಚಾಲಯದಲ್ಲಿ ಅಪರಿಚಿತ ವ್ಯಕ್ತಿಯೊರ್ವರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೂತ್ರ ಮಾಡಲು ಶೌಚಾಲಯಕ್ಕೆ ತೆರಳಿದ ವೇಳೆ ಅಲ್ಲೇ ಕುಸಿದುಬಿದ್ದು ವ್ಯಕ್ತಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ರುದ್ರಪ್ಪ (50) ಎಂದು ಎನ್ನಲಾಗಿದೆ. ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಶವವನ್ನು ರಕ್ಷಿಸಿಡಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸಹಕರಿಸಿದರು. ಸಂಬಂಧಿಕರು ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇಜಾವರ ಗೋಶಾಲೆಗೆ ಉದ್ಯಮಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಅವರಿಂದ ಟಾಟ ಏಸ್ ವಾಹನ ಹಸ್ತಾಂತರ
ಕಾವೂರು: ಕಾವೂರಿನ ಸುಮೇಧ ಫೌಂಡೇಶನ್ ನ ಯುವಕರು ಸ್ಥಾಪಿಸಿರುವ ಪೇಜಾವರ ಗೋಶಾಲೆಗೆ ಯುವ ಉದ್ಯಮಿದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಅವರು ಟಾಟ ಏಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಕಾವೂರು ಶ್ರೀಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಅರ್ಚಕರು ವಾಹನ ಪೂಜೆ ನೆರವೇರಿಸಿದ ಬಳಿಕ ಪೇಜಾವರ ಗೋಶಾಲೆಯ ಸದಸ್ಯರಿಗೆ ವಾಹನದ ಕೀಲಿಕೈಯನ್ನು ದಿಲೇಶ್ ಶೆಟ್ಟಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುಮೇಧ ಫೌಂಡೇಶನ್ ನ ಟ್ರಷ್ಠಿಗಳಾದ ರಕ್ಷಿತ್ ಎ ಕುಮಾರ್, ಮನೋಜಿತ್ ಕೆ.ವಿ , ರಣದೀಪ್ ಕಾಂಚನ್ ಹಾಗೂ ಪ್ರಸಾದ್ ಹೆಗ್ಡೆ, ಸಂದೀಪ್ ನಾಯಕ್, […]
ವಿದೇಶಿ ಪ್ರಯಾಣಿಕರ ಕ್ವಾರಂಟೈನ್ ನಿಯಮದಲ್ಲಿ ಸಡಿಲಿಕೆ
ನವದೆಹಲಿ: ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ ಸಡಿಲಿಕೆಯಾಗಲಿದೆ. ಈ ಮೂಲಕ ವಿದೇಶಿ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ನೇರವಾಗಿ ಮನೆಗೆ ತೆರಳಬಹುದಾಗಿದೆ. ಹೋಂ ಕ್ವಾರಂಟೈನ್ ನಿಬಂಧನೆಗಳಿಗೂ ಒಳಗಾಗಬೇಕಿಲ್ಲ. ಆದರೆ ಕೋವಿಡ್-19 ಆರ್ ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರಿಗೆ ಅನ್ವಯವಾಗುವ ನಿಯಮಗಳು: ಕೋವಿಡ್ ಲಸಿಕೆಯ ಒಂದು ಡೋಸ್ ಪಡೆದವರು ಅಥವಾ ಲಸಿಕೆಯೇ ಪಡೆಯದ ವಿದೇಶಿ ಪ್ರಯಾಣಿಕರು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಇಂಥವರು ಏಳು ದಿನ […]
ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಕಾರ್ಕಳದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್ ಲಭಿಸಿದೆ. ಹೊಸದಿಲ್ಲಿಯ ಇನ್ಸಿಟ್ಯೂಟ್ ಅಫ್ ಎಕನಾಮಿಕ್ ಸ್ಟಡೀಸ್ ಸಂಸ್ಥೆ ಶ್ರೀಲಂಕಾದ ಕೊಲಂಬೊ ಗಾಲೇ ಫೇಸ್ ಹೋಟೆಲ್ ಆಡಿಟೋರಿಯಂನಲ್ಲಿ ಅ.28ರಂದು ಆಯೋಜಿಸಿರುವ ಇಂಡೋ – ಶ್ರೀಲಂಕಾ ಎಕನಾಮಿಕ್ ಕೋ ಆಪರೇಶನ್ ಕಾನ್ನ ರೆನ್ಸ್’ನಲ್ಲಿ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಎಸ್‌ಸಿಡಿಸಿಸಿಗೆ […]