ಕಾಪು: ಕಾರು ಡಿಕ್ಕಿ ಹೊಡೆದು ಮಹಿಳೆ ಮೃತ್ಯು

ಕಾಪು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಪು ಮೂಳೂರಿನ ಯೂನಿಯನ್ ಬ್ಯಾಂಕ್ ಬಳಿ ಇಂದು ಸಂಭವಿಸಿದೆ. ಮೃತರನ್ನು ಮೂಳೂರು ಪಡು ನಿವಾಸಿ ಆಯಿಶಾ (42) ಎಂದು ಗುರುತಿಸಲಾಗಿದೆ. ಆಯಿಶಾ ದಿನಸಿ ವಸ್ತು ಖರೀದಿಸಲು ಪೇಟೆ ಬಂದಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ […]

ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ದೇಶವು100 ಕೋಟಿ ಲಸಿಕೆ ನೀಡಿ ವಿಶ್ವದಲ್ಲೇ ಮಹತ್ತರ ಸಾಧನೆ ಮಾಡಿದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಅವರ ನೇತೃತ್ವದಲ್ಲಿ ಆತ್ರಾಡಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಆರೋಗ್ಯ ಕಾರ್ಯಕರ್ತರಾದ ಯಮುನಾ ಸಿಸ್ಟರ್, ಆಶಾ ನಾಯ್ಕ್, ಜರೀನಾ, ಕಾಂತಿ ಪೂಜಾರಿ, ಸರೋಜಿನಿ ನಾಯ್ಕ್ ಅವರಿಗೆ ಶಾಲು ಹೊದಿಸಿ ಫಲ ಪುಷ್ಪವನ್ನು ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರೂಪ […]

ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಇಂದು ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬೆಲೆ ಮುಂದುವರಿದಿದ್ದು, ಸತತ ನಾಲ್ಕನೇ ದಿನವೂ ತಲಾ 35 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ ₹ 107.24, ಡೀಸೆಲ್ ಬೆಲೆ ₹ 95.97 ಆಗಿದೆ. ಮುಂಬೈನಲ್ಲಿ, ಪ್ರಸ್ತುತ ಪೆಟ್ರೋಲ್ ದರ ಲೀಟರ್‌ಗೆ ₹ 113.12 ಮತ್ತು ಡೀಸೆಲ್ ₹ 104.00 ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 110.98 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 101.86 ಆಗಿದೆ. […]

ಟಿ20 ವರ್ಲ್ಡ್ ಕಪ್: ‘ಸೂಪರ್ 12’ ಪಟ್ಟಿ, ಭಾರತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಲ್ಕು ತಂಡಗಳು ‘ಸೂಪರ್-12’ ಹಂತಕ್ಕೆ ಲಗ್ಗೆ ಇಟ್ಟಿವೆ. ಸೂಪರ್-12 ಪ್ರವೇಶಿಸಿದ ತಂಡಗಳು ಇಂತಿದೆ: ಗುಂಪು ‘ಎ’: ಶ್ರೀಲಂಕಾ ಹಾಗೂ ನಮೀಬಿಯಾ ಗುಂಪು ‘ಬಿ’:  ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ ನಿರ್ಗಮಿಸಿದ ತಂಡಗಳು: ಗುಂಪು ‘ಎ’: ಐರ್ಲೆಂಡ್ ಹಾಗೂ ನೆದರ್ಲೆಂಡ್ಸ್ ಗುಂಪು ‘ಬಿ’:  ಒಮನ್ ಹಾಗೂ ಪಪುವಾ ನ್ಯೂಗಿನಿ ‘ಎ’ ಗುಂಪಿನ ಅಗ್ರಸ್ಥಾನಿಯಾಗಿರುವ ಶ್ರೀಲಂಕಾ, ಸೂಪರ್-12ರ ಹಂತದಲ್ಲಿ ‘ಗ್ರೂಪ್ 1’ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅತ್ತ ‘ಬಿ’ ಗುಂಪಿನ […]

ಸಿನಿಮಾ ಚಿತ್ರೀಕರಣದ ವೇಳೆ ಭಾರೀ ದುರಂತ: ಹೀರೋ ಗನ್​ನಿಂದ ಫೈರ್ ಆದ ಬುಲೆಟ್ ತಗುಲಿ ಮಹಿಳೆ ಸಾವು

ಸಿನಿಮಾವೊಂದರ ಚಿತ್ರೀಕರಣದ ವೇಳೆ ಗುಂಡು ತಗುಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಿರ್ದೇಶಕ ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದಲ್ಲಿ ನಡೆದಿದೆ. ರಸ್ಟ್​ ಎಂಬ ಸಿನಿಮಾದ ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಮೆರಿಕಾದ ನಟ ಅಲೆಕ್​ ಬಾಲ್ಡಿವಿನ್​ ಕೈಯಲ್ಲಿದ್ದ ಗನ್​ನಿಂದ ಅಕಸ್ಮಾತ್​ ಆಗಿ ಬುಲೆಟ್​ ಫೈಯರ್​ ಆಗಿದೆ. ಇದರಿಂದಾಗಿ ಸೆಟ್​ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದು, ನಿರ್ದೇಶಕನಿಗೂ ಗುಂಡೇಟು ತಗುಲಿ ಆತನಿಗೆ ಗಂಭಿರವಾದ ಗಾಯಗಳಾಗಿವೆ. ಇನ್ನು ಈ ಸಿನಿಮಾದ ಸೆಟ್​ಗೆ ಪೊಲೀಸರು ನಿರ್ಬಂಧ ಹೇರಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.