ಅ. 23ಕ್ಕೆ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿನಲ್ಲಿ ಎಂಆರ್‌ಎಸಿ ವೃತ್ತಿ ಘಟಕ ಉದ್ಘಾಟನೆ

ಉಡುಪಿ: ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಎಜ್ಯುಕೇಶನಲ್ ಟ್ರಸ್ಟ್‌ ವತಿಯಿಂದ ನಡೆಸಲ್ಪಡುವ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿನ ಎಂಆರ್‌ಎಸಿ ವೃತ್ತಿ ಘಟಕದ ಉದ್ಘಾಟನಾ ಸಮಾರಂಭ ಅ. 23ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ. ಧರ್ಮಸ್ಥಳ ಕನ್ಯಾಡಿ ಶ್ರೀ ರಾಮಕ್ಷೇತ್ರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಇಂಧನ ಮತ್ತು ಕನ್ನಡ- ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ […]

ಬಾಕ್ಸಾಫಿಸ್ ನಲ್ಲಿ ಧೂಳೆಬ್ಬಿಸುತ್ತಿದೆ ಕೋಟಿಗೊಬ್ಬ 3: ಕಲೆಕ್ಷನ್ ವಿವರ ಇಲ್ಲಿದೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ದಿನ ತಡವಾಗಿ ಚಿತ್ರ ಬಿಡುಗಡೆಯಾದರೂ, ಹಣ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ₹ 40.5 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಾರ ಕೂಡ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಇನ್ನಷ್ಟು ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೋಟಿಗೊಬ್ಬ 3’ ಬಿಡುಗಡೆಯಾದ […]

ಬ್ರಹ್ಮಾವರ: ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

ಆನಸ್                           ಶ್ರೇಯಸ್ ಬ್ರಹ್ಮಾವರ: ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ಉಗ್ಗೇಲುಬೆಟ್ಟು ಮಡಿಸಾಲು ಎಂಬಲ್ಲಿ ನಡೆದಿದೆ. ಮೃತ ಬಾಲಕರನ್ನು ಆನಸ್ (16) ಹಾಗೂ ಶ್ರೇಯಸ್ (18) ಎಂದು ಗುರುತಿಸಲಾಗಿದೆ. ಈ ಇಬ್ಬರು ಸಹಿತ ಮೂವರು ಬಾಲಕರು ನದಿಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಇಬ್ಬರು ಬಾಲಕರು ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದು, […]

ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆ: ಮುಂಬೈನಲ್ಲಿ ಪೆಟ್ರೋಲ್ ₹112.11

ಬೆಂಗಳೂರು: ದೇಶದಲ್ಲಿ ಬುಧವಾರ ಪೆಟ್ರೋಲ್‌, ಡೀಸೆಲ್‌ ದರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 35 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹ 106.19 ಮತ್ತು ಡೀಸೆಲ್‌ ₹ 94.92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹109.89 ಮುಟ್ಟಿದ್ದು, ಡೀಸೆಲ್‌ ₹100.75 ಆಗಿದೆ. ವ್ಯಾಟ್‌ನ ಕಾರಣದಿಂದ ಮುಂಬೈನಲ್ಲಿ ಪೆಟ್ರೋಲ್‌ ₹112.11 ತಲುಪಿದರೆ, ಡೀಸೆಲ್‌ ₹102.89 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ₹103.31, ಡೀಸೆಲ್‌ ₹99.26; ಕೋಲ್ಕತ್ತದಲ್ಲಿ ಪೆಟ್ರೋಲ್‌ […]

ಮರ್ಣೆ: ಮಹಿಳೆಯೊಂದಿಗೆ ಅಸಭ್ಯ ವರ್ತನೆ; ದೂರು ದಾಖಲು

ಮಣಿಪಾಲ: ಮಹಿಳೆಯೊಂದಿಗೆ ಟೆಂಪೋ ಚಾಲಕನೋರ್ವ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಹಿರೇಬೆಟ್ಟು-ಮರ್ಣೆಯ ಅಣೆಕಟ್ಟು ಬಳಿ ನಡೆದಿದೆ. ‘ಟೆಂಪೋ ಚಾಲಕ ಉಮೇಶ್ ನಾಯಕ್ ಎಂಬಾತ ನನ್ನ ಬಳಿ ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾನೆ’ ಎಂದು ಆರೋಪಿಸಿ ಮರ್ಣೆ ಗ್ರಾಮದ ರೂಪಾ ಶ್ಯಾಮ ಶೆಟ್ಟಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೂಪಾ ಶ್ಯಾಮ ಶೆಟ್ಟಿ ಅ.18 ರಂದು ಸಂಜೆ ವೇಳೆ ಕೆಲಸ ಮುಗಿಸಿಕೊಂಡು ಹಿರೇಬೆಟ್ಟು ಮಾರ್ಗದ ಮೂಲಕ ಮರ್ಣೆ ಗ್ರಾಮದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿರೇಬೆಟ್ಟು-ಮರ್ಣೆಯ ಅಣೆಕಟ್ಟಿನ ಬಳಿ […]