ದೇಶದಲ್ಲಿ ವಾರ್ಷಿಕ 1.36 ಲಕ್ಷ ಮಂದಿ ಆತ್ಮಹತ್ಯೆ: ಯುವಜನರೇ ಹೆಚ್ಚು; ಮಾಂಡವಿಯ
ಬೆಂಗಳೂರು: ಮಾನಸಿಕ ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ಆತ್ಮಹತ್ಯೆ ದೇಶದಲ್ಲಿ ವಾರ್ಷಿಕ 1.36 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಶೇ 70ರಷ್ಟು ಮಂದಿ ಯುವಜನರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನರು ಆತ್ಮಹತ್ಯೆಗೆ ಶರಣಾಗತರಾಗುತ್ತಿರುವುದು ಆತಂಕಕಾರಿ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು 18ರಿಂದ 45 ವರ್ಷದೊಳಗಿನವರಾಗಿದ್ದಾರೆ. ದೈಹಿಕ ಆರೋಗ್ಯಕ್ಕೆ ನೀಡುತ್ತಿರುವ ಮಹತ್ವನ್ನು ಮಾನಸಿಕ ಆರೋಗ್ಯಕ್ಕೆ ನೀಡದಿರುವುದೇ ಇದಕ್ಕೆ ಕಾರಣ ಎಂದರು.
ಕೋಟ: ಮತಾಂತರ ಆರೋಪ; ಹಿಂಜಾವೇ ಕಾರ್ಯಕರ್ತರಿಂದ ದಾಳಿ
ಕೋಟ: ಭೋವಿ ಸಮುದಾಯದ ಕುಟುಂಬವೊಂದನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಹಳ್ಳಾಡಿಯ ಜನತಾ ಕಾಲೋನಿಯ ಮನೆಯೊಂದಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಭಾನುವಾರ ಸಂಜೆ ನಡೆದಿದೆ. 20ಕ್ಕೂ ಹೆಚ್ಚು ಜನರಿಗೆ ಕ್ರೈಸ್ತ ಪ್ರವಚನ ನೀಡಲಾಗುತ್ತಿದೆ. ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದಂಪತಿಯಿಂದ ಕ್ರೈಸ್ತ ಧರ್ಮದ ಬಗ್ಗೆ ಪಾಠ ನಡೆಯುತ್ತಿತ್ತು. ಪ್ರಕಾಶ್-ಜ್ಯೋತಿ ದಂಪತಿಯಿಂದ ಮತಾಂತರದ ಪಾಠದ ಜೊತೆಗೆ ಮತಾಂತರಗೊಳ್ಳುವಂತೆ ಪ್ರೇರೇಪಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಮಾಹಿತಿ ಪಡೆದ […]
ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ
ದೆಹಲಿ: ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಜನಸಾಮಾನ್ಯರು ಮತ್ತಷ್ಟು ಹೊರೆ ಅನುಭವಿಸುವಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 30 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ ₹104.44 ಆಗಿದೆ. ಡೀಸೆಲ್ 35 ಪೈಸೆ ಏರಿದ್ದು ₹93.17 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಮೇಲೆ 29 ಪೈಸೆ ಏರಿಕೆಯಾಗಿದ್ದು, ₹110.41 ಆಗಿದೆ. ಡೀಸೆಲ್ ಬೆಲೆ ಇಂದು ಲೀಟರ್ಗೆ 101.03 ಆಗಿದ್ದು, 37 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 31 ಪೈಸೆ ಏರಿದೆ. ಇದರೊಂದಿಗೆ […]
ಶಿರ್ವ: ಮೀನು ಹಿಡಿಯಲು ಹೋಗಿ ನೀರುಪಾಲಾದ ದೈವ ನರ್ತಕ; ಮೃತದೇಹಕ್ಕಾಗಿ ಮುಂದುವರಿದ ಕಾರ್ಯಾಚರಣೆ
ಶಿರ್ವ: ಹೊಳೆಯಲ್ಲಿ ಮೀನಿಗೆ ಗಾಳ ಹಾಕಲು ಹೋಗಿದ್ದ ದೈವ ನರ್ತಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾದ ಘಟನೆ ಶಿರ್ವ ನಡಿಬೆಟ್ಟು ಅಣೆಕಟ್ಟು ಬಳಿ ಭಾನುವಾರ ಸಂಜೆ ನಡೆದಿದೆ. ಶಿರ್ವ ಮಟ್ಟಾರು ನಿವಾಸಿ ದಿಲೀಪ್ (33) ಮೃತ ದುರ್ದೈವಿ. ಮೂರು ಜನರ ತಂಡ ಮೀನಿಗೆ ಗಾಳ ಹಾಕಲು ಹೊಳೆ ಬದಿಗೆ ಹೋಗಿತ್ತು. ಈ ವೇಳೆ ದಿಲೀಪ್ ಆಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ದಿಲೀಪ್ ಚಿಕ್ಕ ವಯಸ್ಸಿನಲ್ಲೇ ಕರಾವಳಿಯಾದ್ಯಂತ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ, ಸೇವಕರಾಗಿ ಹೆಸರು ಮಾಡಿದ್ದರು. ಬಬ್ಬುಸ್ವಾಮಿ ದೈವದ […]