HomeTrendingಸತತ ಏಳನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ

ಸತತ ಏಳನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ

ದೆಹಲಿ: ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗಿದ್ದು, ಜನಸಾಮಾನ್ಯರು ಮತ್ತಷ್ಟು ಹೊರೆ ಅನುಭವಿಸುವಂತಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ 30 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ ₹104.44 ಆಗಿದೆ. ಡೀಸೆಲ್‌ 35 ಪೈಸೆ ಏರಿದ್ದು ₹93.17 ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಮೇಲೆ 29 ಪೈಸೆ ಏರಿಕೆಯಾಗಿದ್ದು, ₹110.41 ಆಗಿದೆ. ಡೀಸೆಲ್ ಬೆಲೆ ಇಂದು ಲೀಟರ್‌ಗೆ 101.03 ಆಗಿದ್ದು, 37 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ 31 ಪೈಸೆ ಏರಿದೆ. ಇದರೊಂದಿಗೆ ಲೀಟರ್‌ಗೆ ₹108.08 ಆಗಿದೆ. ಇನ್ನು ಡೀಸೆಲ್‌ ದರ ಲೀಟರ್‌ ಮೇಲೆ 37 ಪೈಸೆ ಹೆಚ್ಚಳವಾಗಿದ್ದು, ಸದ್ಯ ₹98.89 ಆಗಿದೆ.

ಶಿರಸಿಯಲ್ಲಿ ಕಳೆದ ಶನಿವಾರ ಡೀಸೆಲ್‌ ದರ ₹100ರ ಗಡಿ ದಾಟಿತ್ತು. ಕರ್ನಾಟಕದಲ್ಲಿ ಅದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಡೀಸೆಲ್‌ ₹100ಕ್ಕಿಂತಲೂ ಹೆಚ್ಚಾಗಿದೆ.

error: Content is protected !!