SBI: 2056 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವೇತನ ₹23,700
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ)ದ ವಿವಿಧ ಪ್ರಾದೇಶಿಕ ಮತ್ತು ಶಾಖಾ ಕಚೇರಿಗಳಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್ ಹುದ್ದೆಗಳ ಸಂಖ್ಯೆ: 2056 ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವೇತನ ಶ್ರೇಣಿ: ಇತರೆ ಭತ್ಯೆಗಳು ಸೇರಿದಂತೆ ಮಾಸಿಕ ₹ 23,700 ಮೂಲ ವೇತನ. ವಯಸ್ಸು: ಕನಿಷ್ಠ 18 ವರ್ಷಗಳು, ಗರಿಷ್ಠ 30 ವರ್ಷಗಳ ವಯೋಮಿತಿಯಲ್ಲಿ ಇರುವ ಅಭ್ಯರ್ಥಿಗಳು ಮಾತ್ರ […]
ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಪವಿತ್ರ ಸ್ವರ್ಣಾನದಿ ಸ್ನಾನ: ನೂರಾರು ಮಂದಿ ಭಾಗಿ
ಮಣಿಪಾಲ: ಕೃಷ್ಣಾಂಗಾರಕ ಚತುರ್ದಶಿ ಪ್ರಯುಕ್ತ ಮಣಿಪಾಲ-ಪೆರಂಪಳ್ಳಿಯ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಇರುವ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಮಂಗಳವಾರ ನೂರಾರು ಮಂದಿ ಪವಿತ್ರ ನದಿ ಸ್ನಾನ ಮಾಡಿದರು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠ ವೇದವರ್ಧನತೀರ್ಥ ಶ್ರೀಪಾದರು ಪವಿತ್ರ ನದಿ ಸ್ನಾನಗೈದು ಸುವರ್ಣೆಗೆ ಆರತಿ ಬೆಳಗಿದರು. ಪವಿತ್ರ ಪುಣ್ಯಸ್ನಾನಕ್ಕಾಗಿ ಉಡುಪಿ ಸಹಿತ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಆಂಧ್ರದ ಚಿತ್ತೂರಿನಿಂದಲೂ ಭಕ್ತರು ಆಗಮಿಸಿದ್ದರು.
ಕುಂದಾಪುರ: ಅ.7ಕ್ಕೆ Bravo ಇ ಸ್ಕೂಟರ್ ಶೋರೂಮ್ “ಇ-ವೀಲ್ಸ್” ಉದ್ಘಾಟನೆ
ಕುಂದಾಪುರ: ಪೆಟ್ರೋಲ್ ಸ್ಕೂಟರ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಬ್ಯಾಟರಿ ಚಾಲಿತ “ELTHOR Bravo” ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರ ನೂತನ ಶೋರೂಮ್ ‘ಇ-ವೀಲ್ಸ್’ ಕುಂದಾಪುರದಲ್ಲಿ ಇದೇ ಅ.7ರಂದು ಶುಭಾರಂಭಗೊಳ್ಳಲಿದೆ. ಕುಂದಾಪುರ ಎಪಿಎಂಸಿ ಮಾರುಕಟ್ಟೆಯ ಸಮೀಪ ರಾ.ಹೆ. 66ರ PERMBE CENTER ಕಟ್ಟಡದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ಇ-ವೀಲ್ಸ್ ಶೋರೂಮ್ ಉದ್ಘಾಟನೆಗೊಳ್ಳಲಿದೆ. Energy Pvt LTD Indiaದ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಬಾಬು ಶೋರೂಮ್ ಅನ್ನು ಉದ್ಘಾಟಿಸುವರು. Elthor Energy Pvt LTD Karnatakaದ […]