ಪಿಲಿಕುಳ: ಪ್ರವಾಸಿಗರ ಅಚ್ಚುಮೆಚ್ಚಿನ ಲಂಗೂರ್ “ರಾಜು” ಇನ್ನಿಲ್ಲ

ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷ ಪ್ರಾಯದ ಹನುಮಾನ್ ಲಂಗೂರ್ “ರಾಜು” ಮಂಗಳವಾರ ಮೃತಪಟ್ಟಿದೆ. ಪಿಲಿಕುಳ ಮೃಗಾಲಯದ ಪ್ರಾರಂಭ ದಿನಗಳಲ್ಲಿ ರಾಜುವನ್ನು ಪಡುಬಿದ್ರೆಯ ಬಾರ್ ಒಂದರಿಂದ ರಕ್ಷಿಸಲಾಗಿತ್ತು. ಮಾಲಕ ಮತ್ತು ಗಿರಾಕಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದು “ರಾಜು” ಮದ್ಯಪಾನದ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ಈಡಾಗಿತ್ತು. ಆದರೆ ಪಿಲಿಕುಳ ಮೃಗಾಲಯದಲ್ಲಿ ನಿಧಾನವಾಗಿ ಅಮಲು ಸೇವನೆಯ ಅಭ್ಯಾಸವನ್ನು ಬಿಡಿಸಿ ವಿವಿದ ಜಾತಿಯ ಹಣ್ಣು ಹಂಪಲುಗಳನ್ನು ಸೇವಿಸಲು ಒಗ್ಗಿಕೊಂಡಿತ್ತು ಮತ್ತು ಮೃಗಾಲಯದ ಸಂದರ್ಷಕರಿಗೆ ಬಹಳ ಆಕರ್ಷಕವಾಗಿ ಪ್ರೀತಿಪಾತ್ರವಾಗಿತ್ತು. ಲಂಗೂರ್ ನೇಪಾಳ, ಶ್ರೀಲಂಕಾ. […]

ಬಿಜೆಪಿ ಮಹಿಳಾ ಮೋರ್ಚಾ; ಯಶಸ್ವಿಯಾಗಿ ಮುಕ್ತಾಯಗೊಂಡ ಸೇವೆ ಮತ್ತು ಸಮರ್ಪಣಾ ಅಭಿಯಾನ

ಕೋಟ: ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ವತಿಯಿಂದ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಸಿಲರ್ ವಿಷನ್ ಪೌಂಡೇಷನ್ ಇವರ ಸಹಯೋಗದಲ್ಲಿ ಸೆ. 17ರಂದು ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಯಶಸ್ವಿ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ದ 293 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಮಂಗಳವಾರ ಕೋಟ ಮಾಂಗಲ್ಯ ಮಂದಿರದಲ್ಲಿ […]

ಹಾನಗಲ್‌, ಸಿಂದಗಿ ಉಪ ಚುನಾವಣೆ: ಮಾನೆ, ಮನಗೂಳಿ ಕಾಂಗ್ರೆಸ್‌ ಟಿಕೆಟ್

ಶ್ರೀನಿವಾಸ ಮಾನೆ, ಹಾನಗಲ್‌ (ಎಡ), ಅಶೋಕ ಮನಗೂಳಿ, ಸಿಂದಗಿ(ಬಲ) ನವದೆಹಲಿ: ಇದೇ ಅಕ್ಟೋಬರ್‌ 30ರಂದು ನಡೆಯಲಿರುವ ರಾಜ್ಯದ ಹಾನಗಲ್‌ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದೆ. ನಿರೀಕ್ಷೆಯಂತೆ ಹಾನಗಲ್‌ನಿಂದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೂಳಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಹೆಬ್ರಿ ಹೋಬಳಿ ರಚನೆಗೆ ಕ್ಯಾಬಿನೆಟ್ ಅನುಮೋದನೆ: ವಿ. ಸುನಿಲ್ ಕುಮಾರ್

ಕಾರ್ಕಳ: ಹೆಬ್ರಿ ತಾಲೂಕು ಕಾರ್ಕಳ ತಾಲೂಕಿನಿಂದ ಬೇರ್ಪಟ್ಟು ಪೂರ್ಣ ಪ್ರಮಾಣದ ತಾಲೂಕಾಗಿ ಘೋಷಣೆ ಆಗಿ ವರ್ಷಗಳಾದರೂ ಇಷ್ಟರವರೆಗೆ ಹೋಬಳಿ ಘೋಷಣೆ ಆಗದೇ ಇರುವುದರಿಂದ ಹಲವಾರು ಆಡಳಿತಾತ್ಮಕ ಸಮಸ್ಯೆಗಳು ತಲೆದೋರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಕಳ ವಿಧಾನಸಭಾ ಸದಸ್ಯರು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಸತತ ಪ್ರಯತ್ನದಿಂದಾಗಿ ಹೆಬ್ರಿ ಹೋಬಳಿ ರಚನೆ ಮಾಡುವ ಬಗ್ಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಆಗಿರುತ್ತದೆ. ಹೆಬ್ರಿ ತಾಲೂಕು ರಚನೆಗೊಂಡು ತಾಲೂಕು ಕಛೇರಿ ಆರಂಭ ಆಗಿದ್ದರೂ […]

ಬೈಂದೂರು: ಕಡವೆ ಮಾಂಸ ಸಾಗಾಟ; ಇಬ್ಬರು ಆರೋಪಿಗಳ ಬಂಧನ

ಬೈಂದೂರು: ಕಡವೆ ಕೊಂದು ಅಕ್ರಮವಾಗಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬೈಂದೂರಿನ ಯಡ್ತರೆ ಗ್ರಾಮದ ಮದ್ದೋಡಿ ಸಮೀಪ ಸೋಮವಾರ ಬಂಧಿಸಿದ್ದಾರೆ. ಯಡ್ತರೆ ನಿವಾಸಿಗಳಾದ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್, ಕಡವೆ ಮಾಂಸ ಹಾಗೂ 2 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನು ಕೆಲವು ಮಂದಿ ಭಾಗಿಯಾಗಿದ್ದು, ಅವರು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಗ್ಗೆ ಖಚಿತ […]