‘ಹಿಂದೂ ರಾಷ್ಟ್ರ’ ಘೋಷಿಸದಿದ್ದರೆ ಇಂದೇ ಜಲಸಮಾಧಿ; ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್
ನವದೆಹಲಿ: ಭಾರತವನ್ನು “ಹಿಂದೂ ರಾಷ್ಟ್ರ” ಎಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರು ಇಂದು (ಅ.2) ಸರಯೂ ನದಿಯಲ್ಲಿ ಜಲಸಮಾಧಿಯಾಗಲು ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆಚಾರ್ಯ ಮಹಾರಾಜ್ ಕೆಲವು ದಿನಗಳ ಹಿಂದೆಯಷ್ಟೇ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಅಕ್ಟೋಬರ್ 2ರೊಳಗೆ ಘೋಷಿಸದಿದ್ದರೆ ಸರಯೂ ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ಆಚಾರ್ಯರು ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ವಿಧಿಸಿದ್ದರು. ಆಚಾರ್ಯ […]
ಏರ್ಟೆಲ್, ಜಿಯೋಗೆ ಶುರುವಾಗಿದೆ ನಡುಕ: ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ ನೀಡಲು ಸ್ಟಾರ್‌ಲಿಂಕ್ ಕಂಪನಿ ರೆಡಿ.!
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಜೋಸ್ (Jeff Bezos) ಹಾಗೂ ಎಲಾನ್ ಮಸ್ಕ್ (Elon Musk) ಸ್ಯಾಟ್ ಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕವನ್ನು ಭಾರತದಲ್ಲಿ ನೀಡಲು ಮುಂದಾಗಿದ್ದಾರೆ. ಇದರಿಂದ ಭಾರತದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಾದ ಸುನಿಲ್ ಮಿಥಲ್ ಅವರ ಏರ್ಟೆಲ್ (Airtel) ಹಾಗೂ ಮುಖೇಶ್ ಅಂಬಾನಿ ಅವರ ಜಿಯೋಗೆ (Jio) ನಡುಕ ಶುರುವಾಗಿದೆ. ತಂತ್ರಜ್ಞಾನ ಉದ್ಯಮಿ, ಟೆಸ್ಲಾ (Tesla) ಮತ್ತು ಸ್ಪೇಸ್ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ ಒಡೆತನನದ, ಉಪಗ್ರಹಗಳ ಗುಚ್ಚದ ಮೂಲಕ […]
ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ
ಬೆಂಗಳೂರು: ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 25 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 30 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 108.15 ರೂ. ಆಗಿದ್ದು, ಡೀಸೆಲ್ ದರ 98.12 ತಲುಪಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.65 ರೂ. ಆಗಿದ್ದು, ಡೀಸೆಲ್ ದರ 95.98 ರೂ. ತಲುಪಿದೆ.
ಉಡುಪಿ: ಖ್ಯಾತ ಸಾರಿಗೆ ಉದ್ಯಮಿ ಪಾಂಗಾಳ ರಬೀಂದ್ರ ನಾಯಕ್ ನಿಧನ
ಉಡುಪಿ: ಪ್ರಸಿದ್ಧ ಸಾರಿಗೆ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪಾಂಗಾಳ ರಬೀಂದ್ರ ನಾಯಕ್ (99) ಅವರು ಸುದೀರ್ಘ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನ ಹೊಂದಿದರು. ರಬೀಂದ್ರ ನಾಯಕ್ 1922ರ ಫೆಬ್ರವರಿ 9ರಂದು ಉಡುಪಿಯಲ್ಲಿ ಜನಿಸಿದರು. ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ 1945-50ರ ಅವಧಿಯಲ್ಲಿ ಹೊಸದಿಲ್ಲಿಯ ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್, ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಟೆಕ್ನಾಲಜಿಸ್ಟ್ ಆಗಿ ಕೆಲಸ ಮಾಡಿದ್ದರು. ರಾಯಲ್ ಇಂಡಿಯನ್ ನೇವಿಯಲ್ಲಿ ತಾಂತ್ರಿಕ ಸಹಾಯಕರಾಗಿಯೂ ಕೆಲಸ ಮಾಡಿದ್ದರು. […]