ಜ್ಞಾನಸುಧಾ: ಗಾಂಧಿ ಜಯಂತಿ ಆಚರಣೆ, ಕ್ರಿಸ್ತ ಸೇವಾಶ್ರಮಕ್ಕೆ ಭೇಟಿ
ಕಾರ್ಕಳ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಇಂದು ಗಾಂಧಿ ಜಯಂತಿ ಆಚರಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು. ಈ ವೇಳೆ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗಾಂಧಿ ಜಯಂತಿಯ ಅಂಗವಾಗಿ ಕಾರ್ಕಳ ಪರ್ಪಲೆಯ ಕ್ರಿಸ್ತ ಸೇವಾಶ್ರಮಕ್ಕೆ ಭೇಟಿ ನೀಡಿ ಜ್ಞಾನಸುಧಾ ಸಂಸ್ಥೆಯ ಪರವಾಗಿ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಸಂಸ್ಥೆಯ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. […]
ಮಹಾಲಕ್ಷ್ಮೀ ಬ್ಯಾಂಕ್ ನ ಸಮಾಜಮುಖಿ ಚಟುವಟಿಕೆ ಅಭಿನಂದನೀಯ: ಜಿ. ಶಂಕರ್
ಮಲ್ಪೆ: ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸ್ವಚ್ಛತಾ ಅಭಿಯಾನ, ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಚಟುವಟಿಕೆ ಅಭಿನಂದನೀಯ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕರಾದ ನಾಡೋಜ ಡಾ ಜಿ.ಶಂಕರ್ ಹೇಳಿದರು. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಟೀಮ್ ನೇಷನ್ ಫಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಲ್ಪೆ ಪಡುಕೆರೆ ಶಾಂತಿನಗರ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ಪ್ರಧಾನಿ ನರೇಂದ್ […]
ಗಾಂಧೀಜಿ ಆಶಯದ ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಂಡಿದೆ: ಶಾಸಕ ರಘುಪತಿ ಭಟ್
ಉಡುಪಿ: ಮಹಾತ್ಮಗಾಂಧೀಜಿ ಅವರ ತತ್ವ ಮತ್ತು ಚಿಂತನೆಗಳಲ್ಲಿ ಸ್ವಚ್ಛತೆಯೂ ಒಂದಾಗಿದ್ದು, ಅವರ ಆಶಯದಂತೆ ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯನ ಚಿಂತನೆ ಸ್ವಚ್ಛ ಭಾರತ ಕಡೆಗೆ ತಿರುಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ಅಜ್ಜರಕಾಡು ಭುಜಂಗಪಾರ್ಕ್ನಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ , ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿ ಅವರ ಚಿಂತನೆಯಂತೆ ಸ್ವಚ್ಛತೆ ಸುತ್ತಮುತ್ತಲಿನ ಪರಿಸರದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬರ ಮನದಲ್ಲೂ ಮೂಡಬೇಕು. ಪ್ರಧಾನಮಂತ್ರಿ ನರೇಂದ್ರಮೋದಿ ಅವರು […]
ದಾಂಪತ್ಯ ಜೀವನಕ್ಕೆ ವಿದಾಯ ಘೋಷಿಸಿದ ನಾಗ ಚೈತನ್ಯ- ಸಮಂತಾ
ಬೆಂಗಳೂರು: ತೆಲುಗು ಸಿನಿಮಾ ನಟ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ನಡುವಿನ ದಾಂಪತ್ಯ ಮುರಿದು ಬಿದ್ದಿದ್ದು, ವಿಚ್ಛೇದನ ಪಡೆಯುದಾಗಿ ತಾರಾ ಜೋಡಿ ಶನಿವಾರ ಘೋಷಿಸಿದೆ. ಈ ಬಗ್ಗೆ ಇಂದು ಟ್ವಿಟರ್‌ನಲ್ಲಿ ಪ್ರಕಟಿಸಿರುವ ನಾಗ ಚೈತನ್ಯ, ಹೆಚ್ಚು ಆಲೋಚನೆ ನಂತರ ಸಮಂತಾ ಮತ್ತು ನಾನು ನಮ್ಮ ಸ್ವಂತ ದಾರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದ್ದಾರೆ. 2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ […]
ಉಡುಪಿ ಓಡಿಎಫ್+ 1 ಜಿಲ್ಲೆಯಾಗಿ ಘೋಷಣೆ : ಡಾ. ನವೀನ್ ಭಟ್
ಉಡುಪಿ: ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ಗಳು ಕಸ ಸಂಗ್ರಹಣೆ ಮತ್ತು ವಿಲೇವಾರಿ ಹಾಗೂ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಹೊಂದುವ ಮೂಲಕ ಉಡುಪಿ ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು. ಅವರು ಇಂದು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]