ಪೇಜಾವರ ಶ್ರೀಗಳ ನೇತೃತ್ವದಲ್ಲಿ ಉಡುಪಿಯಲ್ಲಿ ಸರ್ಕಾರಿ ಗೋಶಾಲೆ
ಉಡುಪಿ: ಗೋಹತ್ಯಾನಿಷೇಧ ಕಾನೂನು ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರವು ಜಿಲ್ಲಾವಾರು ಗೋಶಾಲೆಗಳನ್ನು ಸ್ಥಾಪಿಸಲು ತ್ವರಿತ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಸರ್ಕಾರಿ ಗೋಶಾಲೆ ಸ್ಥಾಪನೆಗೆ ಪಶು ಸಂಗೋಪನಾ ಇಲಾಖೆ ನಿರ್ಧರಿಸಿದ್ದು, ಈ ಕುರಿತು ಉಡುಪಿ ಪೇಜಾವರ ಮಠದಲ್ಲಿ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಇಲಾಖೆಯ ಉಡುಪಿಯ ಉಪನಿರ್ದೇಶಕ ಶಂಕರ ಶೆಟ್ಟಿ, ಉಡುಪಿಯಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯ ಕುರಿತಾಗಿ ಸರ್ಕಾರದ ಸೂಚನೆಯನ್ನು ವಿವರಿಸಿದರು . ಸದ್ರಿ ಗೋಶಾಲೆಯು ಸರ್ಕಾರದ ನಿರ್ದೇಶಾನುಸಾರವೇ ನಡೆಯಬೇಕಾಗಿದೆ. […]
ನಟ ಶಂಕರನಾಗ್ ಮರೆಯಾಗಿ 31 ವರ್ಷ ಕಳೆದರೂ, ಕನ್ನಡ ಚಿತ್ರರಸಿಕರ ಮನದಲ್ಲಿ ಇಂದಿಗೂ ಜೀವಂತ.!
ನಟ ಶಂಕರನಾಗ್ ಮರೆಯಾಗಿ ಇವತ್ತಿಗೆ ಸರಿಯಾಗಿ 31 ವರ್ಷ ಕಳೆದರೂ ಕನ್ನಡ ಚಿತ್ರರಸಿಕರ ಮನದಲ್ಲಿ ಆಟೋ ಚಾಲಕರ ಕಣ್ಮಣಿಯಾಗಿ ಇವತ್ತಿಗೂ ಜೀವಂತ. ಕೇವಲ 35 ವರ್ಷದ ಜೀವಿತಾವಧಿಯಲ್ಲಿ ಅವರು ಮಾಡಿದ ಸಾಧನೆ ಗಳಿಸಿದ ಯಶಸ್ಸು ಸಂಪಾದಿಸಿದ ಅಭಿಮಾನಿ ಬಳಗ ಕಂಡರೆ ಎಂತವರಿಗೂ ಅಚ್ಚರಿ ಆಗದೆ ಇರದು. ಹೊನ್ನಾವರದ ಸಮೀಪದ ನಾಗರಕಟ್ಟೆ ಕುಟುಂಬದ ಮೂಲವಾದರೂ ಶಂಕರನಾಗ್ ಉಡುಪಿಯಲ್ಲಿ ನವೆಂಬರ್ 9,1954ರಲ್ಲಿ ಜನಿಸಿದ್ದುಅನ್ನೋ ವಿಷ್ಯ ಎಷ್ಟೋ ಜನರಿಗೆ ಗೊತ್ತೇ ಇಲ್ಲಇದನ್ನು ಅವರ ಸಹೋದರ ಖ್ಯಾತ ನಟ ಅನಂತನಾಗ್ ರವರು ತಾವು […]
ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಅವರಿಗೆ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ
ಬೈಂದೂರು: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಅವರು ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸರ್ಕಾರದ ವತಿಯಿಂದ ಅಕ್ಟೋಬರ್ 01ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕ ವ್ಯಕ್ತಿ/ಸಂಸ್ಥೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದ್ದು, ಪತ್ರಕರ್ತ ಎಸ್ ಜನಾರ್ದನ ಮರವಂತೆ ಅವರು ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ […]
ಬೆಂಗಳೂರಿಗೆ ಬಂತು ಮೊದಲ ಎಲೆಕ್ಟ್ರಿಕ್ ಬಸ್.!
ಬೆಂಗಳೂರು: ರಾಜ್ಯಕ್ಕೆ ಮೊದಲ ಎಲೆಕ್ಟ್ರಿಕ್ ಬಸ್ ಬೆಂಗಳೂರಿಗೆ ಬಂದಿದ್ದು, ಆ ಮೂಲಕ ಬಿಎಂಟಿಸಿಯ ಬಹು ವರ್ಷಗಳ ಕನಸು ನನಸಾಗಿದೆ. ಸಾರಿಗೆ ಸಚಿವ ಶ್ರೀರಾಮುಲು ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಅನಾವರಣ ಮಾಡಿದ್ದು, ಕೆಂಗೇರಿ ಡಿಪೋದಲ್ಲಿ ಮೊದಲ ವಿದ್ಯುತ್ ಚಾಲಿತ ಬಸ್ ಅನಾವರಣಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 90 ಮಿನಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ಮುಂದಾಗಿದೆ. ಜೆಬಿಎಂ ಕಂಪನಿಯಿಂದ ಗುತ್ತಿಗೆ(ಜಿಸಿಸಿ) ಆಧಾರದಲ್ಲಿ ಬಸ್ ಪಡೆದುಕೊಳ್ಳಲಾಗುತ್ತಿದ್ದು, ಎನ್ ಟಿಪಿಸಿ ಸಹಯೋಗದಲ್ಲಿ ಸೇವೆ ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. 34 ಆಸನಗಳ […]
ಸ್ಯಾಂಡಲ್ ವುಡ್ ನಟಿ ಸೌಜನ್ಯಾ ಆತ್ಮಹತ್ಯೆಗೆ ಶರಣು
ಬೆಂಗಳೂರು: ಕಿರುತೆರೆ ಧಾರಾವಾಹಿ ಹಾಗೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಸೌಜನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ದೊಡ್ಡ ಬೆಲೆ ಗ್ರಾಮದ ಸನ್ ವರ್ಥ್ ಅಪಾರ್ಟ್ಮೆಂಟ್ನಲ್ಲಿ ಡೆತ್ನೋಟ್ ಬರೆದಿಟ್ಟು ನಟಿ ಸೌಜನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ಕುಶಾಲನಗರದ ಸೌಜನ್ಯಾ ಅವರು ತಮ್ಮ ಗೆಳೆಯನೊಂದಿಗೆ ಕಳೆದ ಕೆಲ ತಿಂಗಳಿನಿಂದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಕನ್ನಡದ ಹಲವು ಧಾರಾವಾಹಿ ಹಾಗೂ ‘ಚೌಕಟ್ಟು’ ಮತ್ತೆ ‘ಫನ್’ ಸಿನಿಮಾಗಳಲ್ಲಿ ನಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ತನ್ನ ಗೆಳೆಯನಿಗೆ ಊಟ ತರಲು […]