ಕಟಪಾಡಿ: ನಾಳೆ (ಸೆ.26) ಸಿಎ ಇಂಟರ್‌ಮೀಡಿಯೆಟ್ ಉಚಿತ ಮಾಹಿತಿ ಶಿಬಿರ

ಉಡುಪಿ: ಲೆಕ್ಕ ಪರಿಶೋಧಕ ಪರೀಕ್ಷಾರ್ಥಿಗಳ ಉತ್ತಮ ಫಲಿತಾಂಶದೊಂದಿಗೆ ಉಡುಪಿ ಮತ್ತು ಮಂಗಳೂರಿನ ‘ತ್ರಿಶಾ ಕ್ಲಾಸಸ್’ವತಿಯಿಂದ ಸಿಎ ಇಂಟರ್‌ಮೀಡಿಯೆಟ್ ತರಬೇತಿಯ ಉಚಿತ ಮಾಹಿತಿ ಶಿಬಿರವು ನಾಳೆ (ಸೆ. 26) ಬೆಳಿಗ್ಗೆ 10ಕ್ಕೆ ಕಟಪಾಡಿಯ ತ್ರಿಶಾವಿದ್ಯಾ ಕಾಲೇಜಿನ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ನಡೆಯಲಿದೆ. ನುರಿತ ಲೆಕ್ಕ ಪರಿಶೋಧಕರು ಮತ್ತು ಅನುಭವಿ ಶಿಕ್ಷಕರ ಸೂಕ್ತ ಮಾರ್ಗದರ್ಶನದೊಂದಿಗೆ ಸಿಎ ಇಂಟರ್‌ಮೀಡಿಯೆಟ್ ಬಗ್ಗೆ ಮಾಹಿತಿ ನೀಡಲಿದ್ದು ಆಸಕ್ತರು ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆ ಮೃತ್ಯು; ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

ಉಡುಪಿ: ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ಕುಂದಾಪುರದ ಉಷಾ (26) ಎಂಬವರು ಮೃತಪಟ್ಟ ಗರ್ಭಿಣಿ. ಇವರು ಸೆ. 23ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ತಾಯಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಆರೋಗ್ಯಯುತ ಬದುಕಿಗೆ ಸ್ಪೂರ್ತಿ ನೀಡುವ ಫಾರ್ಮಸಿಸ್ಟ್ ಗಳಿಗೆ ಫಾರ್ಮಸಿಸ್ಟ್ ಡೇ ಶುಭಾಶಯಗಳು

ಸೆಪ್ಟೆಂಬರ್ 25 ಎಂದರೆ ವಿಶ್ವದಾದ್ಯಂತ ಫಾರ್ಮಸಿಸ್ಟ್ ಡೇ ವಿಶೇಷ. ೨೦೦೯ ರಲ್ಲಿ ಇಂಟರ್ ನ್ಯಾಷನಲ್ ಫಾರ್ಮಸುಟಿಕಲ್ ಫೆಡರೇಶನ್ ಆದೇಶದಂತೆ ಈ ದಿನವನ್ನು ಆಛರಿಸಲಾಗುತ್ತಿದೆ. ಫಾರ್ಮಸಿ ವಿಭಾಗ, ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗ. ಫಾರ್ಮಸಿ ವಿಭಾಗದ ತಜ್ಞರು ತಮ್ಮ ವೃತ್ತಿ ಜೀವನದ ಏಳುಬೀಳುಗಳನ್ನು ಪರಾಮರ್ಶಿಸಿ, ಈ ದಿನಕ್ಕೆ ಏನಾದರೊಂದು ಹೊಸ ತಿರುಳನ್ನು ಇಟ್ಟುಕೊಂಡು ಜನರಲ್ಲಿ ಆರೋಗ್ಯದ ಕುರಿತು ಕಾಳಜಿ ಮತ್ತು ಕಳಕಳಿ ಮೂಡಿಸುತ್ತಾರೆ. ಕಾಲಕಾಲಕ್ಕೆ ಯಾವುದೇ ಸನ್ನಿವೇಶವಿರಲಿ ಜನರಿಗೆ ಕ್ಲಪ್ತ ಸಮಯದಲ್ಲಿ ದೇವರಂತೆ ಔಷಧಿಗಳನ್ನು ಪೂರೈಸುವ ಫಾರ್ಮಸಿಸ್ಟ್ ಗಳಿಗೆ […]

ನುಗ್ಗೆಕಾಯಿಯ ಈ ದಾಲ್ ತಿಂದ್ರೆ ನಿಮ್ಮಲ್ಲಿ ಜೋಶ್ ಬರುತ್ತೆ!

ನುಗ್ಗೆಕಾಯಿ ಆರೋಗ್ಯಕ್ಕೆ ಹಿತಕರವಾದ ಆಹಾರ.ನುಗ್ಗೆಕಾಯಿಯ ಎಲ್ಲಾ ಖಾದ್ಯಗಳು ಚೆಂದ. ಆದರೆ ನುಗ್ಗೇಕಾಯಿ ಯ ದಾಲ್ ತಿಂದರೆ ನಿಮ್ಮಲ್ಲಿ ಬೇರೆಯೇ ಜೋಶ್ ಬರುತ್ತೆ.ಊಟಕ್ಕೆ ಕಿಕ್ಕೇರಿಸುವ ಈ ದಾಲ್ ಅನ್ನು ಮನೆಲೇ ಒಮ್ಮೆ ಟ್ರೈ ಮಾಡಿ ಬೇಕಾಗುವ ಪದಾರ್ಥಗಳು ನುಗ್ಗೇಕಾಯಿ- 4 ತೊಗರಿಬೇಳೆ – 1 ಚಮಚ ಕಡಲೇಬೇಳೆ- 1 ಚಮಚ ಮೈಸೂರ್ ಬೇಳೆ- 1 ಚಮಚ ಹೆಸರುಬೇಳೆ- 1 ಚಮಚ ಟೊಮೆಟೋ ಪ್ಯೂರಿ- 1 ಸಣ್ಣ ಬಟ್ಟಲು ಈರುಳ್ಳಿ- 1 ಅಚ್ಚಖಾರದ ಪುಡಿ- 1 ಚಮಚ ಕೊತ್ತಂಬರಿ ಸೊಪ್ಪು-ಸ್ವಲ್ಪ […]

ಉಡುಪಿ: ನಾಳೆ (ಸೆ. 26) ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನವೀಕೃತ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ಉದ್ಘಾಟನೆ

ಉಡುಪಿ: ಕರಾವಳಿಯಾದ್ಯಂತ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಪರಿಕರಗಳಿಗೆ ಹೆಸರುವಾಸಿಯಾಗಿರುವ ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯ ನವೀಕೃತ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡೈಗ್ನೋಸ್ಟಿಕ್ ಲ್ಯಾಬ್ ಆ್ಯಂಡ್ ಮೆಡಿಕೇರ್ ಮೆಡಿಕಲ್ಸ್ ನಾಳೆ (ಸೆ.26)ರಂದು ಉಡುಪಿ ಕೋರ್ಟ್ ಬದಿ ರಸ್ತೆಯ ಪೈ ಸೆಲ್ಸ್ ಶಾಪ್ ನ ಹಿಂಬದಿಯ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ವಿಶೇಷ ಸೌಲಭ್ಯಗಳು: ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನ ನುರಿತ ತಜ್ಞರ ತಂಡದಿಂದ ರಕ್ತ, ಮೂತ್ರ, ಥೈರಾಯ್ಡ್, ಡಯಾಬಿಟಿಸ್ ಹಾಗೂ ವಿವಿಧ ಪರೀಕ್ಷೆಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಎಲ್ಲ ತರದ […]