ವಿದ್ಯುತ್ ಸಂಪರ್ಕಕ್ಕಾಗಿ ಎನ್ಓಸಿ ಪಡೆಯುವ ಕ್ರಮಕ್ಕೆ ವಾರದೊಳಗೆ ತಿದ್ದುಪಡಿ: ಇಂಧನ ಸಚಿವ ಸುನಿಲ್ ಕುಮಾರ್

ಬೈಂದೂರು: ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯಲು ಸ್ಥಳೀಯಡಳಿತದಿಂದ ಎನ್‌ಓಸಿ ಪಡೆಯುವ ಕ್ರಮವನ್ನು ಒಂದು ವಾರದೊಳಗೆ ತಿದ್ದುಪಡಿ ಮಾಡುತ್ತೇವೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು. ಸೋಮವಾರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೈಂದೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ನೂತನ ಕ್ರಮವನ್ನು ಮುಂದಿನ ವಾರದೊಳಗೆ ಅಧಿಕೃವಾಗಿ ಜಾರಿಗೊಳಿಸುತ್ತೇನೆ. ಇದರಿಂದ ಸುಮಾರು 2.50 ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆಯುತ್ತದೆ […]

ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ: ಎಂಇಎಸ್ ಭದ್ರಕೋಟೆ ಛಿದ್ರ

ಬೆಳಗಾವಿ: 58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, 58 ವಾರ್ಡ್ ಗಳಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಾಲಿಕೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.‌ ಈ ಬಾರಿ‌ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆದಿತ್ತು. ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಧೂಳೀಪಟವಾಗಿದ್ದು, ಮೂವರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಎಐಎಂಐಎಂ ಪಕ್ಷ ಖಾತೆ ತೆರೆದಿದೆ.  ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 12 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ. ಫಲಿತಾಂಶ […]

ಜಾಗ ಖರೀದಿಸುವಿಕೆ‌, ‌ಮಾರಾಟಕ್ಕೆ ಹೆಸರುವಾಸಿಯಾಗಿರುವ ಉಡುಪಿಯ ತುಳುನಾಡು ಪ್ರಾಪಟೀಸ್ ಗೆ ಎರಡನೇ ವರ್ಷಾಚರಣೆಯ ಸಂಭ್ರಮ..!

ಜಾಗ, ನಿವೇಶನ, ಸಂಕೀರ್ಣಗಳ ಮಾರಾಟ ಹಾಗೂ ಖರೀದಿಗೆ ಹೆಸರುವಾಸಿಯಾಗಿರುವ ಉಡುಪಿಯ ತುಳುನಾಡು ಪ್ರಾಪಟೀಸ್ ಎರಡನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಕಲ್ಸಂಕದ ಹತ್ತಿರ ಇರುವ ಭಕ್ತ ಟವರ್ಸ್ ನ ಮೊದಲನೆ ಮಹಡಿಯಲ್ಲಿ ಆರಂಭಗೊಂಡ ‘ತುಳುನಾಡು ಪ್ರಾಪಟೀಸ್’ ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದೆ‌. ತುಳುನಾಡು ಪ್ರಾಪರ್ಟೀಸ್ ನಲ್ಲಿ ಉತ್ತಮ ಜಮೀನಿಗೆ ಅತ್ಯುತ್ತಮ ಗ್ರಾಹಕರು, ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶನಗಳು ಹಾಗೂ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ವ್ಯವಹಾರಿಸಬಹುದು. ಈ ಆನ್ […]

ಕೋವಿಡ್ ಪಾಸಿಟಿವಿಟಿ ದರ ಶೇ. 2ಕ್ಕಿಂತ ಹೆಚ್ಚದರೆ ಜಿಲ್ಲೆಗಳಲ್ಲಿ ಚಟುವಟಿಕೆ ನಿರ್ಬಂಧ: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಕೋವಿಡ್ ಪಾಸಿಟಿವಿಟಿ ದರ ಶೇ 2ಕ್ಕಿಂತ ಹೆಚ್ಚುವ ಜಿಲ್ಲೆಗಳಲ್ಲಿ ತಕ್ಷಣವೇ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಶಿಕ್ಷಣ, ವ್ಯಾಪಾರ ಸೇರಿ ಎಲ್ಲ ಚಟುವಟಿಕೆಗೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಸೋಂಕು ಹೆಚ್ಚಿದರೆ ಆ ಜಿಲ್ಲೆಗಳಲ್ಲಿ ಚಟುವಟಿಕೆಗಳನ್ನು ನಿರ್ಬಂಧಿಸಬೇಕಾಗುತ್ತದೆ. ಇದರಿಂದ ಸಂಭವನೀಯ ಕೋವಿಡ್ 3ನೇ ಅಲೆ ತಡೆಯಲು ಸಾಧ್ಯ. ಮೂರನೇ ಅಲೆ ತಡೆಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯದಾದ್ಯಂತ ಇಂದಿನಿಂದ 6ರಿಂದ 8ರವರೆಗಿನ ಭೌತಿಕ ತರಗತಿ ಆರಂಭ

ಬೆಂಗಳೂರು: ರಾಜ್ಯದಾದ್ಯಂತ ಶಾಲೆಗಳಲ್ಲಿ 6ರಿಂದ 8ರವರೆಗಿನ ಭೌತಿಕ ತರಗತಿ ಇಂದಿನಿಂದ (ಸೆ. 6) ಆರಂಭಗೊಂಡಿದೆ‌. ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡು, ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪಾಲಿಸಿ ತರಗತಿಗಳನ್ನು ಆರಂಭಿಸುವಂತೆ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.