ಉಡುಪಿ ಜಿಲ್ಲಾ ಶ್ರೀರಾಮಸೇನೆಗೆ ಸಾಮೂಹಿಕ ರಾಜೀನಾಮೆ: ವಕ್ತಾರ ಶರತ್ ಮಣಿಪಾಲ

ಉಡುಪಿ: ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೇಕಲ್ಲು ಅವರು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ಮಾತಿನಿಂದ ಬೇಸತ್ತು ಸಂಘಟನೆಗೆ ಒಂದು ವಾರದಿಂದ ಹಿಂದೆಯೇ ರಾಜೀನಾಮೆ ನೀಡಿದ್ದಾರೆ. ಆದರೆ ಸಂಘಟನೆಯ ರಾಜ್ಯ ನಾಯಕರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸದೆ ಇರುವುದು ಹಾಗೂ ಜಿಲ್ಲಾಧ್ಯಕ್ಷರ ಮನವೊಲಿಕೆಗೆ ಪ್ರಯತ್ನಿಸದಿರುವುದನ್ನು ಮನಗಂಡು ಶ್ರೀ ರಾಮಸೇನೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅತೀವಾ ನೋವಿನಿಂದ ಸಂಘಟನೆಗೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ. ಉಡುಪಿ ಜಿಲ್ಲಾ ಶ್ರೀ ರಾಮಸೇನೆಯನ್ನು ಬರ್ಖಸ್ತು ಮಾಡುತ್ತಿರುವುದಾಗಿ ಸಂಘಟನೆಯ ಜಿಲ್ಲಾ […]

ಉಡುಪಿ: ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ

ಉಡುಪಿ: ಕೋವಿಡ್ ಪಾಸಿಟಿವಿಟಿ ದರವನ್ನು ಇಳಿಕೆ ಮಾಡುವ ಉದ್ದೇಶದಿಂದ ಹಾಗೂ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮುಂದಿನ ಆದೇಶದವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದ್ದು, ವೀಕೆಂಡ್ ಕರ್ಪ್ಯೂ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ. ವೀಕೆಂಡ್ ಕರ್ಪ್ಯೂ ಮಾರ್ಗಸೂಚಿ ಈ ಕೆಳಕಂಡಂತಿದೆ. ಜಿಲ್ಲೆಯಾದ್ಯಂತ […]

ಎಲ್ಐಸಿ ಉಡುಪಿ ವಿಭಾಗದ 65ನೇ ವಿಮಾ ಸಪ್ತಾಹದ ಉದ್ಘಾಟನೆ

ಉಡುಪಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಉಡುಪಿ ವಿಭಾಗೀಯ ಕಚೇರಿಯಲ್ಲಿ 65ನೇ ವಿಮಾ ಸಪ್ತಾಹದ ಉದ್ಘಾಟನಾ ಸಮಾರಂಭ ಬುಧವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಬಿಂದು ರಾಬರ್ಟ್ ಮಾತನಾಡಿ, ಕ್ಲೈಮ್ ಸೆಟ್ಲ್‌ಮೆಂಟ್‌ನಲ್ಲಿ ಮಂಚೂಣಿಯಲ್ಲಿರುವ ನಿಗಮವು, ಕೋವಿಡ್ ಸಮಯದಲ್ಲಿಯೂ ತನ್ನ ಹಿರಿತನವನ್ನು ಉಳಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳುವುದರಲ್ಲಿ ಅಗ್ರಗಣ್ಯನೆಂದೆನಿಸಿಕೊಂಡಿರುವ ನಿಗಮವು, ಪಾಲಿಸಿದಾರರಿಗೆ ಹಾಗೂ ಪ್ರತಿನಿಧಿಗಳಿಗೆ ಅನುಕೂಲವಾಗಿರುವ ಆನಂದ್ ಆ್ಯಪ್‌ಅನ್ನು ಅಭಿವೃದ್ಧಿ ಪಡಿಸಿ ಅಳವಡಿಸಿಕೊಂಡಿರುವುದು ಈ ವರ್ಷದ ಹೆಗ್ಗಳಿಕೆಗಳಲ್ಲೊಂದಾಗಿದೆ ಎಂದರು. ಇದೇ ಸಂದರ್ಭದಲ್ಲಿ […]

ಬೂತ್ ಸಶಕ್ತೀಕರಣದ ಮೂಲಕ ವಿಸ್ತಾರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ವಿ. ಸುನಿಲ್ ಕುಮಾರ್

ಉಡುಪಿ: ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗಳ ಜೊತೆಗೆ ಪಕ್ಷ ಸಂಘಟನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಜಿಲ್ಲೆಯಾದ್ಯಂತ ಬೂತ್ ಸಶಕ್ತೀಕರಣದ ಮೂಲಕ ಹೊಸ ಆಲೋಚನೆಗಳೊಂದಿಗೆ ವಿಸ್ತಾರವಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿದರು. ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಪಕ್ಷದ […]

ಸಾಸ್ತಾನ: ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆ

ಸಾಸ್ತಾನ: ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಕಬೆಟ್ಟು ಪ್ರದೇಶದ ಶ್ರೀನಿವಾಸ ಭಟ್ ಅವರ ಮನೆಯ ಹಿಂಭಾಗದ ಬಾವಿಯ ಸಮೀಪದಲ್ಲಿ 14 ನೇ ಶತಮಾನದ ಶಾಸನವನ್ನು ಇತಿಹಾಸ‌ ಮತ್ತು ಪುರಾತತ್ವ ವಿದ್ವಾಂಸರಾದ ಡಾ. ಎಸ್.ಜಿ. ಸಾಮಕ್ ಅವರು ಪತ್ತೆ ಮಾಡಿದ್ದು, ಇದನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 180 ಸೆಂ.ಮೀ ಎತ್ತರ 60 ಸೆಂ.ಮೀ ಅಗಲವಿದೆ. ಶಾಸನದ ಮೇಲ್ಬಾಗದಲ್ಲಿ ಬ್ರಾಹ್ಮಣ […]