ಹೂವಿನಕೆರೆ ಕಾಮಧೇನು ಗೋ ಶಾಲೆಗೆ ಹಸಿ ಹುಲ್ಲು ಹಸ್ತಾಂತರ
ಹೂವಿನಕೆರೆಯ ಕಾಮಧೇನು ಗೋ ಶಾಲೆಗೆ ಯುವಕರ ತಂಡವೊಂದು ಶ್ರಮದಾನದ ಮೂಲಕ ಹಸಿ ಹುಲ್ಲು ಹಸ್ತಾಂತರಿಸಿತು. ಶ್ರಮದಾನದಲ್ಲಿ ಸಾಮ್ರಾಟ್ ಶೆಟ್ಟಿ ಹಳನಾಡು, ದಿನೇಶ್ ಆಚಾರ್, ಕೃಷ್ಣ ಹಳನಾಡು,ಸದಾಶಿವ ಹಳನಾಡು ಹಾಗೂ ಭಾಸ್ಕರ ಹಳನಾಡು ಮೊದಲಾದವರು ಭಾಗವಹಿಸಿದ್ದರು.
ಆನ್ ಲೈನ್ ದುನಿಯಾದ ಟ್ರೆಂಡ್ ಬಿಚ್ಚಿಡುತ್ತೆ ಈ “ಶಾಪಿಂಗ್” ಕಿರುಚಿತ್ರ
ಆನ್ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಎಲೆಕ್ತ್ರಾನಿಕ್ ಉಪಕರಣಗಳೇ ಆಗಿವೆ ಎಂಬ ಪರಿಸ್ಥಿತಿ ಇತ್ತು.. ಆದರೆ ಕಳೆದ ಕೆಲವು ವರ್ಷಗಳಲ್ಲಿ ಖರೀದಿದಾರರ ಮತ್ತು ಮಾರಾಟವಾಗುತ್ತಿರುವ ಸಾಮಗ್ರಿಗಳಲ್ಲಿ ದೊಡ್ಡ ಬದಲಾವಣೆಯೂ ಆಗುತ್ತಿದೆ. ಅಂತರ್ಜಾಲದ ಜೊತೆಗೇ ಟೆಲಿವಿಷನ್ ಮೂಲಕವೂ ಪ್ರಚಾರ ಜೋರಾಗತೊಡಗಿದಂತೆ ಎಲ್ಲ ವಯಸ್ಸಿನವರೂ, ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಈ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ನಡೆಸುವ ಪ್ರಮಾಣ ಹೆಚ್ಚುತ್ತಲೇ ಇದೆ. ಹಾಗೆಯೇ ಗೃಹ ಬಳಕೆ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣಗಳು ಮತ್ತು ಆಭರಣಗಳನ್ನು ಕೂಡ […]
ಕೊಡುವೂರು: ಕೋವಿಡ್ ಲಸಿಕಾ ಅಭಿಯಾನ
ಕೊಡವೂರು: ಕೊಡವೂರು ವಾರ್ಡ್ ನಲ್ಲಿ ಶೇ. 100ರಷ್ಟು ಲಸಿಕೆ ನೀಡುವ ಮೂಲಕ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಬೇಕೆಂಬ ಉದ್ದೇಶದಿಂದ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಲ್ಕನೇ ಬಾರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಆಯೋಜಿಸಲಾಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಜನರು ಹೆಚ್ಚು ಹೊತ್ತು ಕಾಯದೆ, ಮನೆಯ ಸಮೀಪವೇ ಲಸಿಕೆ ಪಡೆಯಬೇಕೆಂಬ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಈ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆ ಮೂಲಕ […]
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋಗೆ ಸನ್ಮಾನ
ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋ ಅವರಿಗೆ ಭಾನುವಾರ ಉಡುಪಿ ಮಳಿಗೆಯಲ್ಲಿ ಅಭಿನಂದಿಸಲಾಯಿತು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಸಮಾಜ ಸೇವಕರಾದ ಲೀಲಾಧರ್ ಶೆಟ್ಟಿ ಮಜೂರು,ಹಾಸ್ಯ ಭಾಷಣಕಾರ್ತಿ ಸಂಧ್ಯಾ ಪೈ ಅವರು ನಿಹಾಲ್ ತಾವ್ರೋ ಗೆ ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ವೇಳೆ ಮಾತನಾಡಿದ ಸಂಧ್ಯಾ ಪೈ ನಿಹಾಲ್ ತನ್ನ ಪ್ರತಿಭೆಯಿಂದ ಇಂದು ದೇಶದಲ್ಲಿಯೇ […]
ಕಾರ್ಕಳ: ರಿಕ್ಷಾ- ಕಾರು ನಡುವೆ ಮುಖಾಮುಖಿ ಡಿಕ್ಕಿ: ರಿಕ್ಷಾ ಚಾಲಕ ಸ್ಥಳದಲ್ಲೇ ಸಾವು
ಕಾರ್ಕಳ: ತಿರುವಿನಲ್ಲಿ ರಾಂಗ್ ಸೈಡ್ ನಲ್ಲಿ ಕಾರು ಚಾಲಕ ಅತೀವೇಗವಾಗಿ ಟವೇರಾ ಕಾರನ್ನು ಚಲಾಯಿಸಿಕೊಂಡು ಬಂದು ರಿಕ್ಷಾಗೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೋಮವಾರ ಸಂಜೆ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ ರಿಕ್ಷಾ ಚಾಲಕ ಅಂಡಾರು ಗ್ರಾಮದ ಬಾಳ್ಜೆ ನಿವಾಸಿ ಶೇಖರ ಮೂಲ್ಯ(58) ಎಂದು ಗುರುತಿಸಲಾಗಿದೆ. ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು ವಾಪಾಸು ಕಾಡುಹೊಳೆ […]