ಕುಂದಾಪುರ: ಸೊಪ್ಪು ಕಡಿಯಲು ಹೋದ ಯುವಕರಿಬ್ಬರು ಹೊಳೆಯಲ್ಲಿ ಮುಳುಗಿ ಮೃತ್ಯು

ಕುಂದಾಪುರ: ಸೊಪ್ಪು ಕಡಿಯಲು ತೆರಳಿದ್ದ ಯುವಕರಿಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್‌ಮಕ್ಕಿ ಸಮೀಪದ ಕುಂಟುಹೊಳೆ ಸೋಮವಾರ ಸಂಜೆ ನಡೆದಿದೆ. 9ನೇ ಮೈಲ್‌ಕಲ್ಲು ನಿವಾಸಿ ದಿ.ಕಾಳು ನಾಯ್ಕ ಎಂಬರವರ ಪುತ್ರ ಮೋಹನ ನಾಯ್ಕ (21) ಹಾಗೂ ಮಹಾಬಲ ನಾಯ್ಕ ಎಂಬವರ ಪುತ್ರ ಸುರೇಶ್ (19) ಮೃತ ದುರ್ದೈವಿಗಳು. ಇವರಿಬ್ಬರು ಸಹೋದರ ಸಂಬಂಧಿಗಳಾಗಿದ್ದರು. ಇವರು ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಆದರೆ, ತಡರಾತ್ರಿ ಆದರೂ ಮನೆಗೆ ಬಂದಿರಲಿಲ್ಲ. ಆಗ ಮನೆಯವರು […]

ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಬೋಳ ಸದಾಶಿವ ಶೆಟ್ಟಿ ಆಯ್ಕೆ

ಉಡುಪಿ: ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಬೋಳ ಸದಾಶಿವ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ಮುಂದಿನ ಮೂರು ವರ್ಷ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳು: ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಎಸ್. ಪಿ, ಉಪಾಧ್ಯಕ್ಷರಾಗಿ ಮಧುಸೂದನ್ ನಾಯಕ್, ಪ್ರದೀಪ್ ಯಡಿಯಾಲ, ಗಿರೀಶ್ ಪೈ, ಪುಷ್ಪ ಶೇಟ್, ಮುರುಳಿಧರ ಪೈ, ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿಗಳಾಗಿ ರವೀಂದ್ರ ಪಾಟ್ಕರ್, ಸ್ಮಿತಾ ಶೆಟ್ಟಿ, […]

ದೇಶದ ರಕ್ಷಣೆ ನಮ್ಮ ಜವಾಬ್ದಾರಿ: ವಿಜಯ್ ಕೊಡವೂರು

ಕೊಡವೂರು: ಹಿಂದೂ ಸಮಾಜ ಬಲಿಷ್ಠವಾಗಬೇಕು. ಹಿಂದೂ ಸಮಾಜ ಸಂಘಟಿತವಾಗಬೇಕು. ಆರೋಗ್ಯವಂತ ಹಿಂದೂ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು ಹೇಳಿದರು. ಕೊಡವೂರು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಮಾಜವನ್ನು ಒಂದು ಮಾಡುವ ರಕ್ಷಾಬಂಧನದಂತ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ಅಣ್ಣ ತಂಗಿಯನ್ನು ರಕ್ಷಣೆ ಮಾಡುವುದು. ಅದರ ಜೊತೆಗೆ ಸಮಾಜದ ರಕ್ಷಣೆಯನ್ನು ಮಾಡಬೇಕು ಎನ್ನುವ ಈ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನಮ್ಮ ಹಿರಿಯರು ನಮಗೆ ಕೊಟ್ಟು ಹೋಗಿದ್ದಾರೆ. ಆದ್ದರಿಂದ […]

ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ಕೋವಿಡ್ ಮೂರನೇ ಅಲೆ: ತಜ್ಞರ ಎಚ್ಚರಿಕೆ

ನವದೆಹಲಿ: ಕೋವಿಡ್ ಎರಡನೇ ಅಲೆಯ ಪ್ರಭಾವ ಕಡಿಮೆ ಆಯ್ತು ಎನ್ನುವ ಬೆನ್ನಲ್ಲೇ ಇದೀಗ ಕೋವಿಡ್ ಮೂರನೇ ಅಲೆಯ ಆತಂಕ ದೇಶದ ಜನರನ್ನು ಕಾಡುತ್ತಿದೆ. ಹೌದು, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಮಧ್ಯದ ಯಾವುದೇ ಸಮಯದಲ್ಲಿ ಕೋವಿಡ್‌–19 ಮೂರನೇ ಅಲೆ ದೇಶದಲ್ಲಿ ಆರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯು (ಎನ್‌ಐಡಿಎಂ) ರಚಿಸಿದ್ದ ತಜ್ಞರ ಸಮಿತಿಯು ಈ ಬಗ್ಗೆ ವರದಿ ನೀಡಿದೆ. ಮೂರನೇ ಅಲೆಯಲ್ಲಿ ವಯಸ್ಕರ ರೀತಿಯಲ್ಲೇ ಮಕ್ಕಳು […]