ಕಾರ್ಕಳ ವಿಶ್ವ ಹಿಂದೂ ಪರಿಷತ್ ನಿಂದ ಆನ್ ಲೈನ್ ‘ಮುದ್ದು ರಾಧೆ-ಕೃಷ್ಣ’ ಸ್ಪರ್ಧೆ

ಕಾರ್ಕಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ, ಕಾರ್ಕಳ ಇದರ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆನ್ ಲೈನ್ ‘ಮುದ್ದು ರಾಧೆ-ಕೃಷ್ಣ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಒಂದು ವರ್ಷದೊಳಗಿನ ಮಕ್ಕಳು ಹಾಗೂ 1ರಿಂದ 5 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ನಿಯಮಗಳು: *ಗರಿಷ್ಠ ಒಂದು ನಿಮಿಷದೊಳಗಿನ ವಿಡಿಯೋ ಕಳುಹಿಸಬೇಕು. *ವಿಡಿಯೋದೊಂದಿಗೆ ಮಗುವಿನ ಹೆಸರು, ವರ್ಷ, ಪೋಷಕರ ಹೆಸರು, ವಿಳಾಸ ಕಡ್ಡಾಯವಾಗಿ ನಮೂದಿಸಬೇಕು. *ಎಡಿಟಿಂಗ್ ವಿಡಿಯೋ ಪರಿಗಣಿಸಲಾಗುವುದಿಲ್ಲ. *ಕಾರ್ಕಳ ತಾಲೂಕಿನ […]

ಮಂಗಳೂರು: ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವು

ಮಂಗಳೂರು: ರೈಲಿನಡಿಗೆ ಸಿಲುಕಿ ಇಬ್ಬರೂ ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಮಂಗಳೂರಿನ ಮಹಾಕಾಳಿ ಪಡ್ಪು ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ವಸಂತಿ(50), ಪ್ರೇಮಾ (48) ಎಂದು ಗುರುತಿಸಲಾಗಿದೆ. ಈ ಮಹಿಳೆಯರು ಎಂದಿನಂತೆ ರೈಲು ಹಳಿ ದಾಟಿ ಬೀಡಿ ಕೊಡಲೆಂದು ಬೀಡಿ ಬ್ರ್ಯಾಂಚ್‌ಗೆ ಹೋಗುತ್ತಿದ್ದರು. ಈ ವೇಳೆ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯರಿಬ್ಬರೂ ಬೀಡಿ ಕಾರ್ಮಿಕರಾಗಿದ್ದು, ನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬೀಡಿ ಬ್ರ್ಯಾಂಚ್ ಗೆ […]

ಉಡುಪಿ ಸೀರೆ ಪುನಶ್ಚೇತನಗೈದ ಕದಿಕೆ ಟ್ರಸ್ಟ್ ಗೆ ನಬಾರ್ಡ್ ನಿಂದ ಸಿಕ್ಕಿತು ರಾಷ್ಟ್ರಮಟ್ಟದ ಹೆಗ್ಗಳಿಕೆ

ಕಾರ್ಕಳ: ಕಳೆದ ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಸಲದ ನಬಾರ್ಡ್ ಮುಂಬೈ ಮುಖ್ಯ ಕಚೇರಿಯಿಂದ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದೆ. ಆಗಸ್ಟ್ 6 ರಂದು ನಡೆದ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಕೊಡಲಾದ ಈ ಪ್ರಶಸ್ತಿಯನ್ನು ಆ.16 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದ ಕ ಜಿಲ್ಲಾಧಿಕಾರಿ […]

ಸಹಕಾರ ಬ್ಯಾಂಕ್: ಕ್ಲರ್ಕ್‌ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ ವೇತನ ₹25,000

ಮಹಾರಾಷ್ಟ್ರ ರಾಜ್ಯದ ಅಕೊಲಾ ಸಹಕಾರ ಬ್ಯಾಂಕ್‌ನಲ್ಲಿ ಖಾಲಿ ಇರುವ ಕಿರಿಯ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಹುದ್ದೆಗಳ ಸಂಖ್ಯೆ: 100 ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯಗಳಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೇತನ: ತರಬೇತಿ ಅವಧಿಯಲ್ಲಿ ಮಾಸಿಕ ₹10 ಸಾವಿರ ವೇತನ ನೀಡಲಾಗುವುದು. ತರಬೇತಿಯಲ್ಲಿ ಯಶಸ್ವಿಯಾದವರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಗ ಮಾಸಿಕ ₹25 ಸಾವಿರ ಸೇರಿದಂತೆ ಇತರೆ ಭತ್ಯೆಗಳನ್ನು ನೀಡಲಾಗುವುದು. ವಯಸ್ಸು: ಕನಿಷ್ಠ […]

ಉಡುಪಿ, ದ.ಕ. ಸಹಿತ ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ: ರಾಜ್ಯಕ್ಕೆ ಮತ್ತೆ ಕೊರೊನಾ ಕಂಟಕ.!

ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಸೋಂಕು ಭೀತಿ ಉಂಟಾಗಿದೆ. ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್​ಗೆ ತಲುಪಿವೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಪ್ರಮುಖ 8 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರದ ಏರಿಕೆಯಲ್ಲಿ 8 ಜಿಲ್ಲೆಗಳು ಮುಂಚೂಣಿಯಲ್ಲಿವೆ. ಜಿಲ್ಲೆ (ಪಾಸಿಟಿವಿಟಿ ರೇಟ್) ದಕ್ಷಿಣ ಕನ್ನಡ-3.26 ಉಡುಪಿ-2.63 ಕೊಡಗು-2.00 ಚಿಕ್ಕಮಗಳೂರು-1.95 ಹಾಸನ-1.71 ಶಿವಮೊಗ್ಗ-1.39 ಮೈಸೂರು-1.23 ಉತ್ತರ ಕನ್ನಡ-1.00 ಎಲ್ಲಾ […]