ಉಡುಪಿ: ಭಟ್ ಕ್ಯಾಟರ್ಸ್ ನ ಮಾಲೀಕ ಎಚ್. ಸುಧೀರ್ ಭಟ್ ನಿಧನ
ಉಡುಪಿ: ಉಡುಪಿಯ ಖ್ಯಾತ ಭಟ್ ಕ್ಯಾಟರ್ಸನ ಮಾಲೀಕ, ಗುಂಡಿಬೈಲು ದಿ. ಪುಂಡಲಿಕ್ ಭಟ್ ಅವರ ಮಗ ಎಚ್. ಸುಧೀರ್ ಭಟ್ (46) ಹೃದಯಾಘಾತದಿಂದ ಇಂದು ನಿಧನ ಹೊಂದಿದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಮತ್ತು ಕಡಿಯಾಳಿ ಭಾರತೀಯ ಜನತಾ ಪಾರ್ಟಿಯ ಪ್ರಮುಖ ಸದಸ್ಯರಾಗಿದ್ದ ಇವರು, ಪ್ರಥಮ ಕೊವಿಡ್ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅನ್ನದಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಸಹೋದರನನ್ನು ಆಗಲಿದ್ದಾರೆ. ಉಡುಪಿ ಶಾಸಕ […]
‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ: ರವಿರಾಜ್ ಹೆಗ್ಡೆ ಚಾಲನೆ
ಉಡುಪಿ: ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ವರ್ಷದಲ್ಲಿ ಎರಡು ಬಾರಿ ಸಿಹಿ ಉತ್ಸವ ಆಚರಿಸುತ್ತಿದ್ದು, ಇಂದಿನಿಂದ (ಆ.19) ಆ. 31ರ ವರೆಗೆ ಒಟ್ಟು 13 ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಈ ಉತ್ಸವದ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ. 10ರಷ್ಟು ರಿಯಾಯಿತಿಯನ್ನು ನೀಡುವ ಗ್ರಾಹಕ ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಂದಿನಿ ಉತ್ಪನ್ನಗಳನ್ನು ಜನರಿಗೆ […]
ಸೆಪ್ಟೆಂಬರ್ ನಿಂದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಬಹುದು: ಐಸಿಎಂಆರ್ ನಿರ್ದೇಶಕಿ
ಪುಣೆ: ಸೆಪ್ಟೆಂಬರ್ ತಿಂಗಳಿನಿಂದ 2-18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಪುಣೆ) ನಿರ್ದೇಶಕಿ ಪ್ರಿಯಾ ಅಬ್ರಾಹಂ ಅವರು, ಮಕ್ಕಳಿಗೆ ಕೊವಿಡ್ 19 ಲಸಿಕೆ ನೀಡುವ ಸಂಬಂಧ ಸದ್ಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, ಅದು ಸಂಪೂರ್ಣಗೊಂಡ ನಂತರ ಸೆಪ್ಟೆಂಬರ್ನಿಂದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ಏಮ್ಸ್ ನಿರ್ದೇಶಕ […]
eSamudaay ಮೂಲಕ ನಿಮ್ಮ ಹೊಸ ವ್ಯವಹಾರ ಸ್ಥಾಪಿಸಿ, ಆರ್ಥಿಕತೆಯನ್ನು ವೃದ್ಧಿಸಿಕೊಳ್ಳಿ
ವಿಶ್ವದ ಮೊದಲ LCommerce ಸಂಸ್ಥೆ eSamudaay. LCommerce ಸ್ಥಳೀಯ ಸ್ವಾಮ್ಯದ ಮತ್ತು ಕಾರ್ಯನಿರ್ವಹಿಸುವ ಡಿಜಿಟಲ್ ವೇದಿಕೆಯಿದು, ಉಡುಪಿಯಂತಹ ಪಟ್ಟಣದ ಉತ್ಪಾದನೆ, ಖರೀದಿ ಮತ್ತು ವ್ಯಾಪಾರವನ್ನು ಬೆಳೆಸುವ ಹಾಗೂ ಭದ್ರಗೊಳಿಸುವ ದಾರಿಯಿದು. eSamudaay ಒಂದು ಸಾಫ್ಟ್ವೇರ್ ಸೇವೆಯ ವೇದಿಕೆ. ಇದು ಸ್ಥಳೀಯ ಉದ್ಯಮಿಗಳಿಗೆ LCommerce ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ನೂತನ ದಾರಿಯಾಗಿದೆ. ಜೊತೆಗೆ ಈ ಡಿಜಿಟಲ್ ಸಾಧನದ ಮೂಲಕ ವ್ಯಾಪಾರಿಗಳು ಹೆಚ್ಚು ಜನರನ್ನು ತಲುಪಬಹುದು ಎನ್ನುವುದು ವಿಶೇಷ. ಏನಿದೆ ವಿಶೇಷ? ಈ ಆ್ಯಪ್ ಕಳೆದ 6 ತಿಂಗಳಿಂದ […]
‘ಡೆಲ್ಟಾ ವೈರಸ್’ ಗೆ ಲಸಿಕೆ ಪಡೆದವರಲ್ಲಿಯೂ ಸೋಂಕು ಉಂಟು ಮಾಡುವ ಸಾಮರ್ಥ್ಯವಿದೆ: ಐಸಿಎಂಆರ್
ಚೆನ್ನೈ: ಕೊರೊನಾ ವೈರಸ್ನ ರೂಪಾಂತರ ಮಾದರಿಯಾದ ‘ಡೆಲ್ಟಾ’ ವೈರಸ್ ಗೆ ಲಸಿಕೆ ಪಡೆದ ಹಾಗೂ ಪಡೆಯದವರಿಗೂ ಸೋಂಕು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವಿಚಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೆನ್ನೈನಲ್ಲಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಡೆಲ್ಟಾ ರೂಪಾಂತರದ ಪರಿಣಾಮಗಳು ಲಸಿಕೆ ಪಡೆದವರು, ಪಡೆಯದವರಲ್ಲಿ ಭಿನ್ನವಾಗಿರುವುದಿಲ್ಲ. ಆದರೆ, ಡೆಲ್ಟಾದಿಂದ ಸಂಭವಿಸುವ ಸಾವಿನ ಸಾಧ್ಯತೆ ಲಸಿಕೆ ಪಡೆದವರಲ್ಲಿ ಕಡಿಮೆ ಆಗಿದೆ ಎಂಬುವುದು ಐಸಿಎಂಆರ್ ಅಧ್ಯಯನದಲ್ಲಿ ಉಲ್ಲೇಖವಾಗಿದೆ. ಲಸಿಕೆಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳಲು ಡೆಲ್ಟಾ ಮಾದರಿಗೆ […]