ಉಡುಪಿ: ಆ. 19ಕ್ಕೆ ಜನಾಶೀರ್ವಾದ ಯಾತ್ರೆಯ ಸಮಾವೇಶ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅಭಿನಂದನೆ; ಕುಯಿಲಾಡಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶಯದಂತೆ ದೇಶಾದ್ಯಂತ ಕೇಂದ್ರ ಸಚಿವರ ನೇತೃತ್ವದಲ್ಲಿ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ “ಜನಾಶೀರ್ವಾದ ಯಾತ್ರೆ”ಯು ಇಂದಿನಿಂದ ಆರಂಭಗೊಂಡಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಉಡುಪಿ ಜಿಲ್ಲಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯದಾದ್ಯಂತ ನಾಲ್ಕು ಕೇಂದ್ರ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯು ಉಡುಪಿ ಜಿಲ್ಲೆಗೆ ನೂತನ […]

ಸಹಕಾರ ಭಾರತಿ ಕಾರ್ಯಕರ್ತರು ಪ್ರತಿ ಗ್ರಾಮಕ್ಕೂ ತಲುಪಬೇಕು: ಕಿಶೋರ್ ಕುಮಾರ್ ಕೊಡ್ಗಿ

ಉಡುಪಿ: ಸಹಕಾರ ಭಾರತಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಸಹಕಾರ ವ್ಯವಸ್ಥೆ ಬಲಪಡಿಸಿ ಹೊಸ ಸಹಕಾರಿ ಆಯಾಮವನ್ನು ಸೃಷ್ಟಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಕಿನ್ನಿಮೂಲ್ಕಿಯ ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತೀಯ ಪರಿಚಯ ಪ್ರಥಮ ಅವಧಿಗೆ ಕುಂಬ್ಳೆಕರ್ ಮೋಹನ್ ಕುಮಾರ್, ಎರಡನೇ ಅವಧಿಗೆ […]

ಇಂಡಿಯಾ ಅಸೋಸಿಯೇಶನ್ ಆಫ್ ಗ್ರೇಟರ್ ಬೋಸ್ಟನ್ ನಿಂದ ಮೊಹೇರ್ ಶೆಟ್ಟಿಗೆ ಗೌರವ

ಬೋಸ್ಟನ್: ಇಂಡಿಯಾ ಅಸೋಸಿಯೇಶನ್ ಆಫ್ ಗ್ರೇಟರ್ ಬೋಸ್ಟನ್ ಸಂಸ್ಥೆಯ ವತಿಯಿಂದ ಭಾರತ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೊಹೇರ್ ಶೆಟ್ಟಿ ಕೊಡವೂರು ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಗೌರವಿಸಲಾಯಿತು. ಇದೇ ವೇಳೆ ಮಕ್ಕಳು ದೇಶಾಭಿಮಾನ ಸಾರುವ ನೃತ್ಯರೂಪಕ ಪ್ರಸ್ತುತ ಪಡಿಸಿದರು.

ಮೌಲ್ಯಯುತ ಶಿಕ್ಷಣಕ್ಕೆ ಮತ್ತೊಂದು ಹೆಸರು ಕುಂದಾಪುರದ ಶ್ರೀ ವೆಂಕಟ್ರಮಣ ವಿದ್ಯಾ ಸಂಸ್ಥೆ 

ಕುಂದಾಪುರ: ಮೌಲ್ಯಯುತ ಶಿಕ್ಷಣವೇ ಇಂದಿನ‌ ಅಗತ್ಯ, ಸ್ಪರ್ಧಾತ್ಮಕ ಜಗತ್ತಿನ ಜೊತೆ ಸೆಣಸಲು, ಗೆಲ್ಲಲು ಇಂತಹ ಶಿಕ್ಷಣವಿಲ್ಲದೆ ಸಾಧ್ಯವಿಲ್ಲ. ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಆರಂಭವಾದ  ಕುಂದಾಪುರದ ಶ್ರೀ ವೆಂಕಟರಮಣ ವಿದ್ಯಾಸಂಸ್ಥೆ.  ವಿಶಾಲವಾದ ಕಟ್ಟಡ, ದಕ್ಷ ಆಡಳಿತ ಮಂಡಳಿ, ಅನುಭವಿಶಾಲಿ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಸದಾ ಪ್ರೆರೇಪಿಸುವ ಪ್ರೋಷಕರು ಹಾಗೂ ಸೃಜನಶೀಲ ವಿದ್ಯಾರ್ಥಿಗಳಿಂದ ಸಮ್ಮಿಳಿತಗೊಂಡ ಸಂಸ್ಥೆಯಿದು. ಆರಂಭ ಹೇಗಾಯ್ತು? ಶ್ರೀ ವೆಂಕಟ್ರಮಣ ದೇವ್ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ನ ಶೀರ್ಷಿಕೆಯಡಿಯಲ್ಲಿ […]

ಕಾಬೂಲ್​​ ಏರ್​​ಪೋರ್ಟ್​​​ನಲ್ಲಿ ನೂಕುನುಗ್ಗಲು: ಗುಂಡೇಟಿಗೆ ಐವರು ಬಲಿ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿ ಉಗ್ರರ ವಶವಾಗುತ್ತಿದಂತೆ ದೇಶಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್​ ಹತ್ತಲು ಬಂದವರ ನಡುವೆ ನೂಕುನುಗ್ಗಲು ಸಂಭವಿಸಿದೆ. ಈ ನಡುವೆ ಕಾಬೂಲ್ ವಿಮಾನ ನಿಲ್ದಾಣವನ್ನು 6 ಸಾವಿರ ಅಮೆರಿಕನ್​ ಟ್ರೂಪ್​ ಸೈನಿಕರು ವಶಕ್ಕೆ ಪಡೆದುಕೊಂಡಿದ್ದು, ಬೇರೆ ಬೇರೆ ದೇಶಗಳ ನಿವಾಸಿಗಳನ್ನು ಅಫ್ಘಾನಿಸ್ತಾನದಿಂದ ಏರ್ ಲಿಫ್ಟ್​ ಮಾಡಲು ನೆರವು ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನರು ಗುಂಪು ಗುಂಪುಗಾಗಿ ವಿಮಾನ ಹತ್ತಲು ಹರಸಾಹಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. […]