ಕೋಟ: ಎಟಿಎಂ ಒಡೆದು ಹಣ ದೋಚಿದ ಕಳ್ಳರು
ಕೋಟ: ಕಳ್ಳರ ತಂಡವೊಂದು ಕೆನರಾ ಬ್ಯಾಂಕ್ ನ ಎಟಿಎಂಗೆ ಕನ್ನ ಹಾಕಿರುವ ಘಟನೆ ಮಾಬುಕಳ ಬಸ್ ನಿಲ್ದಾಣದ ಹತ್ತಿರದ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿರುವ ಹಂಗರಕಟ್ಟೆ ಶಾಖೆಯ ಕೆನರಾ ಬ್ಯಾಂಕ್ ನಲ್ಲಿ ಇಂದು ಬೆಳಕಿಗೆ ಬಂದಿದೆ. ಗುರುವಾರ ತಡ ರಾತ್ರಿ ಕಳ್ಳರು ಎಟಿಎಂ ಹೊರಗಡೆ ಇರುವ ಸಿಸಿಟಿವಿ ಕ್ಯಾಮರಾ ಹಾಗೂ ಸೈರನ್ ಕೇಬಲ್ ನ್ನು ತುಂಡು ಮಾಡಿದ್ದು, ಒಳಗಡೆ ಇದ್ದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೂರ್ತಿಯಾಗಿ ಒಡೆಯಲು ಸಾಧ್ಯವಾಗದಿದ್ದರೂ ರಿಜೆಕ್ಟ್ ಬಾಕ್ಸ್ ನಲ್ಲಿರುವ ಸುಮಾರು […]
‘ಹೆಜ್ಜೆ’ ಗಾಗಿ ಮತ್ತೆ ಒಂದಾಗ್ತಿದ್ದಾರೆ ಎಚ್ ಡಿಕೆ-ಎಸ್. ನಾರಾಯಣ್ ಜೋಡಿ
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿಟ್ ಜೋಡಿಯೆಂದೇ ಕರೆಸಿಕೊಳ್ಳುವ ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಎಸ್. ನಾರಾಯಣ್ ಮತ್ತೆ ಒಂದಾಗ್ತಿದ್ದಾರೆ. ‘ಹೆಜ್ಜೆ’ ಎಂಬ ಕಾದಂಬರಿಯನ್ನು ಸಿನಿಮಾ ಮಾಡಲು ಹಿಟ್ ಕಾಂಬಿನೇಷನ್ ಮತ್ತೆ ರೆಡಿಯಾಗಿದೆ ಎನ್ನಲಾಗಿದೆ. ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಲು ಈಗಾಗಲೇ ಮಾತುಕತೆ ಮುಗಿಸಿದ್ದು, ಈ ಚಿತ್ರಕ್ಕೆ ಸ್ಟಾರ್ ನಟರನ್ನು ಕರೆತರಲು ನಾರಾಯಣ್ ತಯಾರಿ ಮಾಡ್ತಿದ್ದಾರಂತೆ. ಶೀಘ್ರದಲ್ಲೇ ಚಿತ್ರದ ನಾಯಕ ಯಾರು ಎಂದು ರಿವೀಲ್ ಮಾಡ್ತೇವೆ ಎಂದು ಎಸ್. ನಾರಾಯಣ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಅಧ್ಯಕ್ಷರಾಗಿ ವಾಮನ್ ಪಾಲನ್ ಆಯ್ಕೆ
ಉಡುಪಿ: ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಹಿರಿಮೆಗೆ ಇನ್ನೊಂದು ಗರಿ ಸೇರ್ಪಡೆಯಾಗಿದೆ. ವರ್ಲ್ಡ್ ಅಸೋಸಿಯೇಶನ್ ಆಫ್ ಕಿಕ್ ಬಾಕ್ಸಿಂಗ್ ಅರ್ಗನೈಸೇಷನ್ಸ್ (ಡಬ್ಲ್ಯೂಎಕೆಒ) ವಕೊ ಇಂಡಿಯಾ ಇದರ ಅಂಗ ಸಂಸ್ಥೆಯಾದ ವಕೊ ಕರ್ನಾಟಕ ಇದರಿಂದ ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಗೆ ಸದಸ್ಯತ್ವದ ಮಾನ್ಯತೆ ದೊರೆತಿದೆ. ಉಡುಪಿ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸಂಘಟನೆಯ ಅಧ್ಯಕ್ಷರನ್ನಾಗಿ ವಾಮನ್ ಪಾಲನ್ ಅವರನ್ನು ನೇಮಕ ಮಾಡಲಾಗಿದೆ. ಆಗಸ್ಟ್ 11 ರಂದು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ […]
ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಾಹನ ಜಾಥಾ
ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದಾದ್ಯಂತ ವೈಶಿಷ್ಟ್ಯಮಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ ಗಂಟೆ 8.30ಕ್ಕೆ ರಾಷ್ಟ್ರ ಧ್ವಜದೊಂದಿಗೆ 75 ವಾಹನಗಳ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಡುಪಿ ಬನ್ನಂಜೆ ಶ್ರೀ ನಾರಾಯಣ ಗುರು ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಾಹನ ಜಾಥಾಕ್ಕೆ ಶಂಖ ನಾದದೊಂದಿಗೆ ಚಾಲನೆ ನೀಡಲಿದ್ದಾರೆ. ವಾಹನ ಜಾಥಾ […]
ಉಡುಪಿ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ಗುಡಿಯ ನಾಗದೇವರಿಗೆ ವಿಶೇಷ ಪೂಜೆ
ಉಡುಪಿ: ನಾಗರಪಂಚಮಿಯ ಪ್ರಯುಕ್ತ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.