ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾದ ದ್ವಿತೀಯ ಕಾರ್ಯಕಾರಿಣಿ ಸಭೆ
ಕಾರ್ಕಳ: ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾದ ದ್ವಿತೀಯ ಕಾರ್ಯಕಾರಿಣಿ ಸಭೆಯು ಭಾನುವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಉಡುಪಿ ಜಿಲ್ಲಾ ಅಧ್ಯಕ್ಷೆ ವೀಣಾ ಶೆಟ್ಟಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ನಲ್ಲೂರು ಪ್ರದೇಶದಲ್ಲಿ ಸುಮಾರು 55 ವರ್ಷಗಳಿಂದ ಬುಟ್ಟಿ, ಚಾಪೆ, ಹಗ್ಗ ಹೆಣೆಯುವ ಕಸುಬು ಮಾಡಿಕೊಂಡು ಜೀವನ ನಡೆಸುತ್ತಿರುವ 70 ವರ್ಷ ಪ್ರಾಯದ ತೋಮು ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ […]
ಸತ್ಯದ ತುಳುವೆರ್ ಉಡುಪಿ- ಮಂಗಳೂರು ಇದರ ಮಹಿಳಾ ಘಟಕದಿಂದ ಆಟಿಡೊಂಜಿ ದಿನ ಕಾರ್ಯಕ್ರಮ
ಉಡುಪಿ: ಸತ್ಯದ ತುಳುವೆರ್ ಉಡುಪಿ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಮಲ್ಪೆ ಫಿಷರಿಶ್ ಸಭಾಂಗಣದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಾಹಿತಿ ಸೌಮ್ಯ ಪುತ್ರನ್ ಉಡುಪಿ ಅವರ ಪತ್ತೆದಾರಿ ಕಾದಂಬರಿ ‘ಕತ್ತಲೆಯೋಲೊಂದು ಕಿರಣ’ ಮತ್ತು ‘ಆಗ ಸಂಜೆಯಾಗಿತ್ತು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಕುರ್ಕಾಲ್ ಹಾಗೂ ಗೌರವಾಧ್ಯಕ್ಷೆ ಗೀತಾಂಜಲಿ ಸುವರ್ಣ ಕೃತಿಗಳನ್ನು ಬಿಡುಗಡೆಗೊಳಿಸಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸತ್ಯದ ತುಳುವೆರ್ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಮೇಘ ಅಧ್ಯಕ್ಷತೆ ವಹಿಸಿದ್ದರು. […]
ಬೆಂಗಳೂರಿನಲ್ಲಿ ಮತ್ತೆ ನೈಟ್, ವೀಕೆಂಡ್ ಕರ್ಫ್ಯೂ: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾದ ಬಿಬಿಎಂಪಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರಂಭವಾಗುವ ಭೀತಿ ಉಂಟಾಗಿದ್ದು, ನಗರ ಪ್ರದೇಶಗಳಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಕಂಟೈನ್ಮೆಂಟ್ ಜೋನ್ಸ್ ಹೆಚ್ಚು ಮಾಡಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಮುಂದುವರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಜನ ಕಡ್ಡಾಯವಾಗಿ ಕೊರೋನಾ ಟೆಸ್ಟ್ ರಿಪೋರ್ಟ್ ನೀಡಲೇಬೇಕು ಎಂದು ರಾತ್ರೋರಾತ್ರಿ ಬಿಬಿಎಂಪಿ ಟಫ್ ರೂಲ್ಸ್ ಜಾರಿ ಮಾಡಿತ್ತು. ಈ […]
ಮಲ್ಪೆ: ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಪತ್ತೆ
ಉಡುಪಿ: ಮಲ್ಪೆ ಕಡಲ ತೀರದಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಇಂದು ಪತ್ತೆಯಾಗಿದೆ. ಮೃತಳನ್ನು ಕೊಡುಗು ಮೂಲದ ದೇಚ್ಚಮ್ಮ ಎಂದು ಗುರುತಿಸಲಾಗಿದೆ. ಈಕೆ ಮೈಸೂರಿನ ಸ್ನೇಹಿತ ಹಾಗೂ ಕೊಡಗು ಮೂಲದ ಮೂವರು ಯುವತಿಯರೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆಯನ್ನು ಉಲ್ಲಂಘಿಸಿ ನಾಲ್ವರು ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದು, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ […]
ಮಂಗಗಳ ಮಾರಣಹೋಮ ಪ್ರಕರಣ: ದಂಪತಿ ಸಹಿತ ಐವರ ಬಂಧನ
ಹಾಸನ: ಇಡೀ ರಾಜ್ಯದಲ್ಲೇ ತಲ್ಲಣಗೊಳಿಸಿದ್ದ ಮಂಗಗಳ ಮಾರಣಹೋಮ ಪ್ರಕರಣವನ್ನು ಭೇದಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ದಂಪತಿ ಸಹಿತ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಗನೆ ಗ್ರಾಮದ ಜಮೀನು ಮಾಲೀಕರಾದ ಪ್ರಸನ್ನ, ರುದ್ರೇಗೌಡ, ವಾಹನ ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ ಸತ್ಯ ಬಾಯಿಬಿಟ್ಟಿದ್ದು, ‘ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ […]